Asianet Suvarna News Asianet Suvarna News

ಬಯೋಲಾಜಿ ಪಾಠ ಮಾಡಲು ಬಂದ ಅರ್ಥಶಾಸ್ತ್ರಜ್ಞನ ಕೋರ್ಟ್‌ಗೆಳೆದ ನಟಿ

ಇರಾಕ್‌ ಖ್ಯಾತ ನಟಿಯೊಬ್ಬರು ಈಗ ಅರ್ಥ ಶಾಸ್ತ್ರಜ್ಞರೊಬ್ಬರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ದಪ್ಪಗಿರುವ ಅರಬ್ ಮಹಿಳೆಯರಿಗೆ ಸಂಬಂಧಿಸಿದಂತೆ ಬರೆದ ಲೇಖನದಲ್ಲಿ ತಮ್ಮ ಫೋಟೋ ಹಾಕಿದ್ದಕ್ಕೆ ನಟಿ ಎನಾಸ್ ತಾಲೇಬ್ ಅರ್ಥಶಾಸ್ತ್ರಜ್ಞನ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. 
 

Iraqi actress Enas Taleb step up to court against economist for using her photo in fat woman relate articles akb
Author
Bangalore, First Published Aug 12, 2022, 4:20 PM IST

ಅರಬ್ ಮಹಿಳೆಯರು ಪುರುಷರಿಗಿಂತ ದಪ್ಪ ಇರುವ ವಿಚಾರವಾಗಿ ಬರೆದ ಲೇಖನದಲ್ಲಿ ಅರ್ಥಶಾಸ್ತ್ರಜ್ಞ ತನ್ನ ಫೋಟೋವನ್ನು ಬಳಸಿದ್ದಕ್ಕಾಗಿ ಇರಾಕ್‌ ನಟ ಎನಾಸ್ ತಲೇಬ್, ದ ಎಕನಾಮಿಸ್ಟ್ ಪತ್ರಿಕೆಯ ಮೇಲೆ ಮೊಕದ್ದಮೆ ಹೂಡಿದ್ದಾರೆ. ಪತ್ರಿಕೆಯೂ ತನ್ನ ಅನುಮತಿ ಪಡೆಯದೇ ಫೋಟೋವನ್ನು ಸಂದರ್ಭ ಮೀರಿ ಬಳಸಲಾಗಿದೆ, ಹೀಗಾಗಿ ಈ ಮೂಲಕ ತನ್ನ ಖಾಸಗಿತನವನ್ನು ಉಲ್ಲಂಘಿಸಲಾಗಿದೆ ಹಾಗೂ ನಟಿಯ ಫೋಟೋವನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ  ಎಂದು ಅವರು ಹೇಳಿದ್ದಾರೆ. ಬಿಬಿಸಿ ವರದಿಯ ಪ್ರಕಾರ ಅದನ್ನು ಫೋಟೋಶಾಪ್ ಮಾಡಲಾಗಿದೆ. ಹೀಗಾಗಿ ನಟಿ ಈಗ ಲಂಡನ್‌ನಲ್ಲಿ ಈ ಪತ್ರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ನಟಿ ಹೇಳಿದ್ದಾರೆ. 

ಅರಬ್ ದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಏಕೆ ದಪ್ಪವಾಗಿದ್ದಾರೆ ಎಂದು ದ ಎಕನಾಮಿಸ್ಟ್  ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. ಈ ಲೇಖನವು ಬಡತನ, ಸಾಮಾಜಿಕ ನಿರ್ಬಂಧಗಳು ಅರಬ್‌ನ ಮಹಿಳೆಯರು ಮನೆಯಲ್ಲಿ ಉಳಿಯಲು ಕಾರಣವಾಗಿವೆ. ಇವು ಅವರನ್ನು ಪುರುಷರಿಗಿಂತ ಹೆಚ್ಚು ತೂಕ ಹೊಂದುವಂತೆ ಮಾಡುತ್ತದೆ ಎಂದು ಲೇಖನದಲ್ಲಿ ಬರೆಯಲಾಗಿದೆ. ಈ ಲೇಖನ ಜುಲೈ ಅಂತ್ಯದಲ್ಲಿ  ಪ್ರಸಾರವಾಗಿತ್ತು. ಮತ್ತು ಇರಾಕಿ ನಟಿ ಎನಾಸ್ ತಲೇಬ್ ಅವರ ಫೋಟೋದೊಂದಿಗೆ ಈ ಲೇಖನವನ್ನು ಪ್ರಸಾರ ಮಾಡಲಾಗಿತ್ತು. 9 ತಿಂಗಳ ಹಿಂದೆ ಇರಾಕ್‌ನಲ್ಲಿ ನಡೆದ ಬ್ಯಾಬಿಲೋನ್ ಇಂಟರ್‌ನ್ಯಾಶನಲ್ ಫೆಸ್ಟಿವಲ್‌ನಲ್ಲಿ ತೆಗೆದ ತಾಲೆಬ್ ಅವರ ಫೋಟೊ ಅದಾಗಿತ್ತು. 

ಹೊಟ್ಟೆ ದಪ್ಪ ಆಗದಂತೆ ಸರ್ಜರಿ ಮಾಡಿಸಿಕೊಂಡ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್
ಪ್ರಕರಣ ದಾಖಲಿಸಲು ಇನ್ನೊಂದು ಮುಖ್ಯ ಕಾರಣವೆಂದರೆ ಈ ಲೇಖನದಲ್ಲಿ, ಮಹಿಳೆಯ ದೇಹದ ವಕ್ರಾಕೃತಿಗಳನ್ನು(curves) ಕೆಲವು ಪುರುಷರು ಹೆಚ್ಚು ಆಕರ್ಷಕವಾಗಿ ಗ್ರಹಿಸಬಹುದು ಎಂದು ಬರೆಯಲಾಗಿದೆ.ಇತ್ತ ಸೌಂದರ್ಯದ ಆದರ್ಶ ಎಂದು ಇರಾಕಿಗಳು ದೇಹದಲ್ಲಿ ವಕ್ರಾಕೃತಿಗಳನ್ನು ಹೊಂದಿರುವ ನಟಿ ಎನಾಸ್ ತಾಲೆಬ್ ಅವರನ್ನು ಭಾವಿಸುತ್ತಾರೆ ಎಂದು ಕೂಡ ಲೇಖನದಲ್ಲಿದೆ. ಈ ಲೇಖನದಲ್ಲಿ ಅರಬ್ ಮಹಿಳೆಯರಿಗೆ, ನಿರ್ದಿಷ್ಟವಾಗಿ ಇರಾಕಿನ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ಹೇಳಿದ ಎನಾಸ್ ತಾಲೆಬ್, ಓರ್ವ ಅರ್ಥಶಾಸ್ತ್ರಜ್ಞ ಈ ರೀತಿ ಮಾಡಿರುವುದೇಕೆ ಅವರಿಗೆ ಸೂಕ್ಷ್ಮತೆಗಳಿಲ್ಲವೇ ಎಂದ ಪ್ರಶ್ನಿಸಿದ್ದಾರೆ. ಅಲ್ಲದೇ ಅವರೇಕೆ ಅಮೆರಿಕಾ ಅಥವಾ ಯುರೋಪ್‌ನ ದಪ್ಪನೆಯ ಮಹಿಳೆಯರ ಬಗ್ಗೆ ಏಕೆ ಗಮನ ಹರಿಸಿಲ್ಲ. ಅವರೇಕೆ ಅರಬ್ ಜಗತ್ತಿನಲ್ಲಿರುವ ದಪ್ಪನೆಯ ಮಹಿಳೆಯರ ಬಗ್ಗೆಯೇ ಆಸಕ್ತಿ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ಪತ್ನಿ ಸುಂದರವಾಗಿಲ್ಲ ಅಂತ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ

ಇತ್ತ ಈ ವಿಚಾರವಾಗಿ ನಟಿ ಕೋರ್ಟ್‌ ಮೆಟ್ಟಿಲೇರುವುದಾಗಿ ಹೇಳುತ್ತಿದ್ದಂತೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಲೇಖನವನ್ನು 'ಜನಾಂಗೀಯ ನಿಂದನೆ' ಮತ್ತು 'ಸೆಕ್ಸಿಯೆಸ್ಟ್ ಕಾಮೆಂಟ್ ಎಂದು ಟೀಕಿಸಿದ್ದಾರೆ. ದ ಎಕನಾಮಿಸ್ಟ್ ಪತ್ರಿಕೆಯಲ್ಲಿ ಬಂದ ಈ ಲೇಖನದಿಂದ ತನಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸಲು ಹಿಂಸೆಯಾಗಿದೆ ಎಂದು ಜೋರ್ಡನ್‌ನ ಅಲ್‌ ಅರೇಬಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ಹೇಗಿದ್ದೇನೋ ಹಾಗೆಯೇ ಇರುವುದರಲ್ಲಿ ನಾನು ಆರೋಗ್ಯ ಹಾಗೂ ಸಂತೋಷದಿಂದ ಇದ್ದೇನೆ ಎಂದು ನಟಿ ಹೇಳಿದ್ದಾರೆ. 
 

Follow Us:
Download App:
  • android
  • ios