ನಟ ಆಮೀರ್​ ಖಾನ್​ ಪುತ್ರಿ ನಟಿ ಇರಾ ಖಾನ್​ ತಮ್ಮ ಹನಿಮೂನ್​ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದು, ಅದು ವೈರಲ್​ ಆಗಿದೆ. 

ಬಾಲಿವುಡ್​ ನಟ ಆಮೀರ್​ ಖಾನ್​ ಅವರ ಪುತ್ರಿ ಇರಾ ಖಾನ್​ ಮದ್ವೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಕಳೆದ ಜನವರಿ 3ರಂದು ಇವರ ಮದ್ವೆಯಾಗಿತ್ತು. ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಅವರನ್ನು ಮದುವೆಯಾಗಿದ್ದಾರೆ. ಮುಂಬೈನಲ್ಲಿ ಜನವರಿ 3 ರಂದು ಖಾಸಗಿ ನೋಂದಣಿ ಸಮಾರಂಭದ ನಂತರ, ದಂಪತಿ ರಾಜಸ್ಥಾನದ ಉದಯಪುರದ ತಾಜ್ ಲೇಕ್ ಪ್ಯಾಲೇಸ್ನಲ್ಲಿ ಅದ್ದೂರಿ ಆಚರಣೆಯನ್ನು ಆಯೋಜಿಸಿದರು. 2020ರ ಇದೇ ದಿನದಂದು ಅಂದರೆ ಜನವರಿ 3ರಂದು ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ ಮದುವೆಯಾಗಿದೆ ಜೋಡಿ.

ಮದುವೆಯಾಗಿ ಎರಡು ವಾರಗಳವರೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಇವರ ಮದುವೆಯ ಫೋಟೋಗಳು ವೈರಲ್​ ಆಗುತ್ತಲೇ ಇದ್ದವು. ಆದರೆ ಇದೀಗ ಅವರು ತಮ್ಮ ಹನಿಮೂನ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಹನಿಮೂನ್​ಗಾಗಿ ಇಂಡೋನೇಷ್ಯಾಕ್ಕೆ ಹೋಗಿರೋ ಜೋಡಿ, ಸಂತಸದ ಕ್ಷಣಗಳ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಇರಾ ಫೋಟೋಗಳ ಪೋಸ್ಟ್‌ನಲ್ಲಿ, ನಿಮ್ಮ ಹನಿಮೂನ್ ಹೇಗಿತ್ತು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ನೂಪೂರ್‌ ನಾನು ನಿನ್ನನ್ನು ಪ್ರೀತಿಸುತ್ತೇನೆ, ಒಂದು ತಿಂಗಳು, 4 ವರ್ಷಗಳು, ನೀರೊಳಗಿನ, 3 ಗಂಟೆಗೆ, ತಲೆಕೆಳಗಾಗಿ, ಸ್ಕ್ವಾಟ್‌ನಲ್ಲಿ, ಹವಾಮಾನ ವಿರೋಧಿ, ಹೆಚ್ಚು-ಹವಾಮಾನ... ಪರವಾಗಿಲ್ಲ. ಅದು ನಿನ್ನ ಬಳಿ ಇರುವವರೆಗೆ ಎಂದೆಲ್ಲಾ ಬರೆದುಕೊಂಡಿದ್ದಾರೆ. ಇದು ಲವ್​ ಶುರುವಾದ ವರ್ಷ, ಮದುವೆಯಾದ ವರ್ಷ ಹಾಗೂ ಮದುವೆಗೂ ಮುಂಚೆ ಹಾಗೂ ಹನಿಮೂನ್​ನಲ್ಲಿ ಏನೆಲ್ಲಾ ಮಾಡಿದೆವು ಎಂಬ ಬಗ್ಗೆ ಈ ಶಬ್ದಗಳಲ್ಲಿ ವಿವರಿಸಿದ್ದಾರೆ. ಈ ಹನಿಮೂನ್​ ಫೋಟೋಗಳಲ್ಲಿ ನೂಪುರ್​ ಷರ್ಟ್​ಲೆಸ್​ ಆಗಿದ್ದು, ತಲೆ ಕೆಳ ಮಾಡಿ ನಿಂತಿರುವುದನ್ನು ನೋಡಬಹುದು. ಅಷ್ಟಕ್ಕೂ ಮದುವೆಯ ದಿನವೂ ಅಂಗಿ-ಚೆಡ್ಡಿಯಲ್ಲಿ ಕಾಣಿಸಿಕೊಂಡಿದ್ದರು ನೂಪುರ್​. 

ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್​ ಖಾನ್​ ಪುತ್ರಿಯ ಹೊಸ ವಿಷ್ಯ?

ಇನ್ನು ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದರು. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದರಿಂದ ಮದುವೆಯಾಗಿದ್ದರು.

 ಇತ್ತೀಚಿನ ಸಂದರ್ಶನವೊಂದರಲ್ಲಿ, ಇರಾ ಖಾನ್ ಅವರು ಖಿನ್ನತೆಯೊಂದಿಗೆ ತಮ್ಮ ದೀರ್ಘಕಾಲದ ಹೋರಾಟದ ಬಗ್ಗೆ ಚರ್ಚಿಸಿದ್ದರು ಮತ್ತು ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದ್ದರು. ಇರಾ ಖಾನ್ ಖಿನ್ನತೆಯೊಂದಿಗಿನ ತನ್ನ ಅನುಭವಗಳ ಪರಿಣಾಮವಾಗಿ ತನ್ನ ನಡವಳಿಕೆಯು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಅವರು ಆಗಾಗ್ಗೆ ಅಳುತ್ತಿದ್ದರು ಮತ್ತು ದಿನಗಟ್ಟಲೆ ಉಪವಾಸ ಇರುತ್ತಿದ್ದರು ಎಂದು ಹೇಳಿಕೊಂಡಿದ್ದರು. 'ನಾನು ಜೀವಂತವಾಗಿರಲು ಬಯಸುವುದಿಲ್ಲ ಎಂಬ ವಿಷಯವನ್ನು ನನ್ನ ತಾಯಿ ಕಂಡುಕೊಂಡರು.ದಿನದಲ್ಲಿ ಕಡಿಮೆ ಅವಧಿ ಜೀವಂತ ಇರಬಹುದು ಎಂದು ನಾನು ದಿನದ ಹೆಚ್ಚು ಕಾಲ ಮಲಗುತ್ತಿದ್ದೆ' ಎಂದು ಇರಾ ಖಾನ್‌ TOI ಜೊತೆಗಿನ ತನ್ನ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದರು.

ರಾಹುಲ್​ ಗಾಂಧಿ ಕೈಹಿಡಿದು ಸುದ್ದಿಯಾಗಿದ್ದ ನಟಿಗೆ ಬಟ್ಟೆ ತೊಡಲು ಕಷ್ಟವಾದ ಕಾಯಿಲೆ! ನೋವು ತೋಡಿಕೊಂಡ ಪೂನಂ

View post on Instagram