Asianet Suvarna News Asianet Suvarna News

ರಾಹುಲ್​ ಗಾಂಧಿ ಕೈಹಿಡಿದು ಸುದ್ದಿಯಾಗಿದ್ದ ನಟಿಗೆ ಬಟ್ಟೆ ತೊಡಲು ಕಷ್ಟವಾದ ಕಾಯಿಲೆ! ನೋವು ತೋಡಿಕೊಂಡ ಪೂನಂ

ರಾಹುಲ್​ ಕೈಹಿಡಿದು ಸುದ್ದಿಯಾಗಿದ್ದ ನಟಿ ಪೂನಂ ಕೌರ್​ಗೆ  ಬಟ್ಟೆ ತೊಡಲು ಕಷ್ಟವಾದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಟಿ ಹೇಳಿದ್ದೇನು? 
 

Actress Politician Poonam Kaur reveals she is suffering from a rare disease Fibromyalgia suc
Author
First Published Feb 4, 2024, 5:49 PM IST

ಬಹುಭಾಷಾ ತಾರೆ ಪೂನಂ ಕೌರ್ ಇದೀಗ ಸಂಕಷ್ಟದಲ್ಲಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ  ನಟಿ ಪೂನಂ ಕನ್ನಡದಲ್ಲಿ ಶಿವರಾಜಕುಮಾರ್ ಅಭಿನಯದ `ಬಂಧು ಬಳಗ' ಮತ್ತು ರವಿಚಂದ್ರನ್‌ರವರ `ಮಂಜಿನ ಹನಿ' ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಅವರು ನೋವಿನ ವಿಷಯವನ್ನು ಹೇಳಿಕೊಂಡಿದ್ದಾರೆ. ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆ ಕುರಿತು ಅವರು ನೋವು ತೋಡಿಕೊಂಡಿದ್ದಾರೆ. ಈಕೆ ನಟಿಯ ಜೊತೆ ರಾಜಕೀಯದಲ್ಲಿಯೂ ಗುರುತಿಸಿಕೊಂಡವರು.

ಅಷ್ಟಕ್ಕೂ ಪೂನಂ ಅವರು ಈ ಹಿಂದೆ ಸಕತ್​ ಸುದ್ದಿಯಾಗಿದ್ದು,  ತೆಲಂಗಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ. ಆಗ ಇವರು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರ ಜೊತೆ ಕೈ  ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರ ಥಹರೇವಾರಿ ಕಮೆಂಟ್​ಗಳು ಬಂದಿದ್ದವು.  ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಟ್ವೀಟ್ ಮಾಡಿದ ಪೂನಂ ಕೌರ್, ನಾನು ಹೀಗೆ ಮಾಡ್ತಿರೋದು  ನಿಮಗೆ ಸಂಪೂರ್ಣವಾಗಿ ಅವಮಾನಕರವಾಗಿದೆ ಎನ್ನಿಸಿರಬಹುದು. ಆದರೆ  ಪ್ರಧಾನಿಯವರು ನಾರಿಶಕ್ತಿ ಬಗ್ಗೆ ಮಾತನಾಡಿದ್ದು ನೆನಪಿರಲಿ ತಿರುಗೇಟು ನೀಡಿದ್ದರು. ಈ ಫೋಟೋ ಸಾಕಷ್ಟು ಸದ್ದು ಮಾಡಿತ್ತು.

ಪ್ಲಾಸ್ಟಿಕ್​ ಅಷ್ಟು ಬೇಗ ಸಾಯಲ್ಲ ಅಂತ ಗೊತ್ತಿತ್ತು, ತಪ್ಪು ತಿಳಿಯಬೇಡಿ... ಇದು ಪ್ಲಾಸ್ಟಿಕ್​ ಅರಿವು ಅಷ್ಟೇ...

ಇದೀಗ ಇದೇ ನಟಿ, ತಮಗೆ ಬಟ್ಟೆ ತೊಡಲು ಕಷ್ಟ ಆಗುತ್ತಿರುವ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಾವು ಮೂರು ವರ್ಷಗಳಿಂದ ಫೈಬ್ರೊಮ್ಯಾಲ್ಜಿಯಾ ಎಂಬ  ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾಯಿಲೆಯಿಂದಾಗಿ ಬಟ್ಟೆ ಹಾಕಿಕೊಳ್ಳಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ. ತಮಗೆ ಮೂರು ವರ್ಷಗಳಿಂದ ಈ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಸಮಸ್ಯೆಯಿಂದ ಬದುಕುವುದು ನರಕಕ್ಕೆ ಸಮಾನ.  ಫೈಬ್ರೊಮ್ಯಾಲ್ಜಿಯಾ ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ದೇಹದ ಸ್ನಾಯುಗಳು ಬಿಗಿಯಾಗಿ ನೋವು ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತದೆ ಎಂದು ತಾವು ಅನುಭವಿಸುತ್ತಿರುವ ಚಿತ್ರಹಿಂಸೆಯ ಕುರಿತು ನಟಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.


 ಮೂರು ವರ್ಷಗಳಿಂದ ನಾನು ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಕಾಯಿಲೆಗೆ ತುತ್ತಾದರೆ ಬಟ್ಟೆ ಮೈಗೆ ಸೋಕಿದರೆ ತುಂಬಾ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ  2-3 ವರ್ಷಗಳಿಂದ  ಸಡಿಲವಾದ ಬಟ್ಟೆಗಳನ್ನು ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ  ನಾಟಿ ವೈದ್ಯೆ ಡಾ.ಮಂತೇನ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ನಟಿ  ನಟನೆ, ರಾಜಕಾರಣ ಮಾತ್ರವಲ್ಲದೇ ಕೆಲವೊಂದು ಸಮಾಜಮುಖಿ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆದರೆ  ಕಾಯಿಲೆ ಕಾರಣದಿಂದಾಗಿ ಅವರು ಸಿನಿಮಾ ರಂಗದಿಂದ ಸ್ವಲ್ಪ ದಿನಗಳ ಕಾಲ ದೂರ  ಉಳಿದಿದ್ದಾರೆ.   

ದೀಪಿಕಾ ಬೆತ್ತಲಾದರೂ ಓಡಲಿಲ್ಲವೇಕೆ 'ಫೈಟರ್'​ ಚಿತ್ರ? ನಿರ್ದೇಶಕ ಕೊಟ್ಟ ಉತ್ತರ ಕೇಳಿ...

Follow Us:
Download App:
  • android
  • ios