ಸಿನಿಮಾದಿಂದ ಅತಿ ಹೆಚ್ಚು ಹಣ ಮಾಡೋ ದಂಪತಿ ಇವ್ರು; ಕೋಟಿ ಕೋಟಿ ಆದಾಯ..ಮುಟ್ಟಿದ್ದೆಲ್ಲಾ ಚಿನ್ನ
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ದಂಪತಿಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಇವರು ಭರ್ತಿ ಸಿನಿಮಾದಿಂದಲೇ ಭರ್ತಿ 1500 ಕೋಟಿ ಗಳಿಸುತ್ತಾರೆ. ಆದರೆ ಇವ್ರ ಶಾರೂಕ್ ಖಾನ್-ಗೌರಿ, ರಾಮ್ ಚರಣ್-ಉಪಾಸನಾ ಜೋಡಿ ಅಲ್ಲ. ಮತ್ಯಾರು?

ಭಾರತೀಯ ಚಲನಚಿತ್ರೋದ್ಯಮವು ಬಹಳಷ್ಟು ಸೂಪರ್ ಸ್ಟಾರ್ ಜೋಡಿಗಳನ್ನು ಒಳಗೊಂಡಿದೆ. ಅದು ಚಲನಚಿತ್ರಗಳಲ್ಲಿ ನಟಿಸುವವರು ಅಥವಾ ನಿರ್ಮಿಸುವವರು ಯಾರೂ ಸಹ ಆಗಿರಬಹುದು. ಶಾರುಖ್ ಮತ್ತು ಗೌರಿ ಖಾನ್, ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ, ಅಜಯ್ ದೇವಗನ್ ಮತ್ತು ಕಾಜೋಲ್ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಜೋಡಿಗಳಲ್ಲಿ ಸೇರಿದ್ದಾರೆ. ಇವರೆಲ್ಲರೂ ಸಿನಿಮಾದಿಂದ ವಾರ್ಷಿಕವಾಗಿ ಕೋಟಿ ಕೋಟಿ ಹಣವನ್ನು ಗಳಿಸುತ್ತಾರೆ. ಅದನ್ನು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ದಕ್ಷಿಣಭಾರತದ ಸಿನಿರಂಗದ ಈ ದಂಪತಿಗಳಿಗೆ ಹೋಲಿಸಿದರೆ ಅವರ ಸಂಪತ್ತು ತುಂಬಾ ಕಡಿಮೆಯಾಗಿದೆ. ಹಾಗಿದ್ರೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿ ದಂಪತಿಗಳು ಯಾರು?
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿ ದಂಪತಿಗಳು
ಝೀ ನ್ಯೂಸ್‌ನ ವರದಿಯ ಪ್ರಕಾರ, ಸನ್ ಟಿವಿ ಮತ್ತು ಸನ್ ಪಿಕ್ಚರ್ಸ್‌ನ ಮಾಲೀಕ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಉದ್ಯಮಿ ದಂಪತಿಗಳು (Couples). ಈ ದಂಪತಿಗಳು ಕಳೆದ ದಶಕದಲ್ಲಿ ಸಿನಿಮಾದಿಂದ 1500 ಕೋಟಿ ರೂಪಾಯಿ ಲಾಭ (Profit) ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಅಂಬಾನಿಗಳು ಗಳಿಸಿದ್ದಕ್ಕಿಂತ ಹೆಚ್ಚು ಮೊತ್ತವಾಗಿದೆ.
Aishwarya Rai ಯಿಂದ Alia Bhatt ವರೆಗೆ ಗಂಡನಿಗಿಂತ ಹೆಚ್ಚು ಸಂಪಾದಿಸುವ ನಟಿಯರು
ಕಲಾನಿಧಿ ಮಾರನ್ ದಂಪತಿ ಕಳೆದ 10 ವರ್ಷಗಳಿಂದ ಸಿನಿಮಾ ನಿರ್ಮಾಣದ ಜೊತೆಗೆ ಇತರ ವ್ಯವಹಾರದಲ್ಲಿ ತೊಡಗಿದಕೊಂಡು ಭಾರತೀಯ ಕಾರ್ಪೊರೇಟ್ ವಲಯದಲ್ಲಿಯೂ ಅತಿ ಹೆಚ್ಚು ಲಾಭಾಂಶ ಪಡೆದ ದಂಪತಿಗಳಲ್ಲಿ ಒಂದಾಗಿದ್ದಾರೆ. ಮಾರನ್ ದಂಪತಿ ಎಷ್ಟು ಶ್ರೀಮಂತರೆಂದರೆ ಕಳೆದ ಒಂದು ದಶಕದಲ್ಲಿ 1500 ಕೋಟಿ ರೂಪಾಯಿಯ ವ್ಯವಹಾರದ ಲಾಭವನ್ನು ಪಡೆದಿದ್ದಾರೆ. ಇದು ಅಂಬಾನಿ ದಂಪತಿಗಳಿಸಿದ್ದಕ್ಕಿಂತ ಹೆಚ್ಚು ಎನ್ನುವುದು ವಿಶೇಷ. ಸಿನಿಮಾರಂಗದಲ್ಲಿ ಇಷ್ಟು ದೊಡ್ಡಮಟ್ಟದ ಲಾಭವನ್ನು ಬೇರೆ ಯಾವ ದಂಪತಿಯೂ ಮಾಡಿಲ್ಲ.
ಮಾರನ್ ಕುಟುಂಬವು ಸನ್ ಟಿವಿಯಲ್ಲಿ 75% ಪಾಲನ್ನು ಹೊಂದಿದೆ.ಇದು ಹಲವಾರು ಟಿವಿ ಚಾನೆಲ್‌ಗಳು ಮತ್ತು ಸನ್ NXT OTT ಪ್ಲಾಟ್‌ಫಾರ್ಮ್ ಮತ್ತು IPL ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ನಿರ್ವಹಿಸುತ್ತದೆ. ಹಲವಾರು ಹಿಟ್‌ಗಳನ್ನು ನಿರ್ಮಿಸಿದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್‌ನ ಮಾಲೀಕರೂ ಮಾರನ್ಸ್ ಆಗಿದ್ದಾರೆ. ಅದರಲ್ಲಿ ಇತ್ತೀಚಿನದು ರಜನಿಕಾಂತ್ ಅಭಿನಯದ ಜೈಲರ್.
Celebrity Divorce: ಸಾಲು ಸಾಲು ಡಿವೋರ್ಸ್, 2022ರಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ ಜೋಡಿಗಳಿವರು
ಫೋರ್ಬ್ಸ್ ಪ್ರಕಾರ, ಕಲಾನಿಧಿ ಮಾರನ್ ಅವರು $ 3 ಬಿಲಿಯನ್ (ರೂ. 25000 ಕೋಟಿಗೂ ಹೆಚ್ಚು) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಇದು ಅವರನ್ನು ಭಾರತದ ಶ್ರೀಮಂತ ಚಲನಚಿತ್ರ ನಿರ್ಮಾಪಕರನ್ನಾಗಿ (Producer) ಮಾಡಿದೆ. ಕುಟುಂಬದ ಒಡೆತನದ ಸನ್ ಗ್ರೂಪ್ ಸನ್ ಪಿಕ್ಚರ್ಸ್ ಮತ್ತು 33 ಟಿವಿ ಚಾನೆಲ್‌ಗಳನ್ನು ಒಳಗೊಂಡಿದೆ. ಅದು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.
ಸಿನಿಮಾಗಳಿಂದಲೇ ಕೋಟಿ ಕೋಟಿ ಗಳಿಸಿರುವ ಕಲಾನಿಧಿ ಮಾರನ್
ಮಾರನ್ 1999ರಲ್ಲಿ ಬಿಡುಗಡೆಯಾದ ಸಿರಗುಗಲ್‌ನೊಂದಿಗೆ ಚಲನಚಿತ್ರ ನಿರ್ಮಾಪಕರಾದರು ಆದರೆ ಸನ್ ಪಿಕ್ಚರ್ಸ್ ಮತ್ತೊಂದು ದಶಕದ ವರೆಗೆ ಚಲನಚಿತ್ರಗಳಿಗೆ ಮರಳಲಿಲ್ಲ. 2010 ರ ರಜನಿಕಾಂತ್ ಅಭಿನಯದ ಎಂದಿರನ್ ಚಿತ್ರದೊಂದಿಗೆ ಅವರು ಚಲನಚಿತ್ರ ನಿರ್ಮಾಣಕ್ಕೆ ಮರಳಿದರು ಮತ್ತು ಯಶಸ್ಸನ್ನು (Success) ಕಂಡರು. ಅಲ್ಲಿಂದೀಚೆಗೆ, ಅವರು ಸರ್ಕಾರ್, ಪೆಟ್ಟಾ (ಎರಡೂ ರಜನಿಕಾಂತ್ ಅಭಿನಯದ ಸಿನಿಮಾ), ಜೊತೆಗೆ ರಾಘವ ಲಾರೆನ್ಸ್ ಅವರ ಲಾಂಚನ 3, ಧನುಷ್ ಅವರ ತಿರುಚಿತ್ರಂಬಲಂನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ತೀರಾ ಇತ್ತೀಚಿನ ಬಿಡುಗಡೆಯಾದ ಜೈಲರ್, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ.
ರಜನೀಕಾಂತ್ ಅಭಿನಯದ ಜೈಲರ್ ಸೂಪರ್ ಸಕ್ಸಸ್
ಸನ್ ಪಿಕ್ಚರ್ಸ್ ಇತ್ತೀಚೆಗೆ ರಜನೀಕಾಂತ್ ಅಭಿನಯದ 'ಜೈಲರ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಕಲಾನಿಧಿ ಮಾರನ್, ರಜಿನಿಕಾಂತ್ ಅವರಿಗೆ 100 ಕೋಟಿ ಚೆಕ್ ಹಾಗೂ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಇದೇ ರೀತಿಯ ಉಡುಗೊರೆಯನ್ನು ನೀಡಿದ್ದಾರೆ.