ಮೇಕಪ್ ಇಲ್ಲದ ರಶ್ಮಿಕಾ ಮಂದಣ್ಣಳನ್ನು ನೋಡಿ, ಹೊಲದಲ್ಲಿ ನಿಲ್ಲಿಸುವ ಬೆಚ್ಚಪ್ಪನಂತಿದ್ದಾಳೆಂದ ಫ್ಯಾನ್ಸ್!
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಮೇಕಪ್ ಇಲ್ಲದೇ ಹೊರಗೆ ಬಂದಿದ್ದಾಳೆ. ಯಾಕೆ ಮೇಕಪ್ ಮಾಡಿಕೊಳ್ಳಲು ಮೂಡ್ ಇಲ್ಲವೇ ಎಂದು ಫ್ಯಾನ್ಸ್ ಕೇಳಿದ್ದಾರೆ.
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳ ಬಹು ಬೆಡಿಕೆಯ ನಟಿಯಾಗಿದ್ದಾರೆ. ಇತ್ತೀಚೆಗೆ ದುಬೈಗೆ ತೆರಳಿ ಸೀರೆಯುಟ್ಟು ಚೆಂದದ ಪೋಸ್ ಕೊಟ್ಟು ಫೋಟೋ ಹಂಚಿಕೊಂಡಿದ್ದ ಕಿರಿಕ್ ನಟಿ ಈಗ ಮೇಕಪ್ ಇಲ್ಲದೇ ಹೊರಗೆ ಬಂದಿದ್ದಾಳೆ. ಯಾಕೆ ಮೇಕಪ್ ಮಾಡಿಕೊಂಡು ಹೊರಗೆ ಬರಲು ಮೂಡ್ ಇಲ್ಲವೇ ಎಂದು ಫ್ಯಾನ್ಸ್ ಕೇಳಿದ್ದಾರೆ.
ಸ್ಯಾಂಡಲ್‌ವುಡ್‌ನ ಕಿರಿಕ್ ಪಾರ್ಟಿ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಸಿನಿಮಾ ಅಭಿಮಾನಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕೂರ್ಗ್‌ನ ಈ ಚೆಲುವೆ ಸಾಲು ಸಾಲು ಹಿಟ್ ಸಿನಿಮಾಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇನ್ನು ಪುಷ್ಪ ಸಿನಿಮಾ ಬಂದ ಮೇಲಂತೂ ನ್ಯಾಷನಲ್ ಕ್ರಶ್ ರಶ್ಮಿಕಾ ಸಂಪೂರ್ಣವಾಗಿ ಶ್ರೀವಲ್ಲಿ ಆಗಿದ್ದಾಳೆ. ಎಲ್ಲೇ ಹೋದರೂ ರಶ್ಮಿಕಾ ಎನ್ನುವ ಜೊತೆಗೆ ಶ್ರೀವಲ್ಲಿ ಎಂದು ಕರೆಯುವವರ ಸಂಖ್ಯೆಯೀ ಹೆಚ್ಚಾಗುತ್ತಿದೆ. ಇನ್ನು ಪುಷ್ಪ-2 ಸಿನಿಮಾದಲ್ಲಿಯೂ ಬ್ಯೂಸಿಯಾಗಿರುವ ನಟಿ ಶ್ರೀವಲ್ಲಿ ಎಂದಾಗ ಖುಷಿಯಿಂದಲೇ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಳೆ.
ಚಡ್ಡಿ ಚಲುವೆ ಅಪ್ಸರಾ ರಾಣಿ ಕೈಬಿಟ್ಟು, ಸೀರೆ ಚಲುವೆಗೆ ನಾಯಕಿ ಚಾನ್ಸ್ ಕೊಟ್ರು ರಾಮ್ ಗೋಪಾಲ್ ವರ್ಮಾ!
ಮುಂಬೈನಲ್ಲಿ ಮಂಗಳವಾರ ಸಂಜೆ ಯಾವುದೇ ಮೇಕಪ್ ಮಾಡಿಕೊಳ್ಳದೇ ಹೋಟೆಲ್‌ಗೆ ಬಂದಿದ್ದು, ಒಬ್ಬಂಟಿಯಾಗಿ ಹೋಟೆಲ್‌ನಿಂದ ಹೊರಗೆ ಬಂದಿದ್ದಾರೆ. ಆಗ ಅಭಿಮಾನಿಗಳು ಅನುಮಾನದಿಂದ ರಶ್ಮಿಕಾ.. ರಶ್ಮಿಕಾ ಜೀ... ಎಂದು ಕೂಗಿದಾಗ ತಿರುಗಿ ನೋಡಿ ಪ್ರತಿಕ್ರಿಯೆ ನೀಡಿದ್ದಾಳೆ. ಆಗ ಅಭಿಮಾನಿಯೊಬ್ಬ ನೀವು ಯಾಕೆ ಮೇಕಪ್ ಮಾಡಿಲ್ಲ ಮೂಡ್ ಇಲ್ಲವೇ ಎಂದು ಕೇಳಿದ್ದಾನೆ. ನಗುತ್ತಲೇ ಮುಂದುವರೆದ ರಶ್ಮಿಕಾ, ಅಭಿಮಾನಿಯೊಬ್ಬ ಬಂದು ಸೆಲ್ಫಿ ಕೇಳಿದ್ದಕ್ಕೆ ಒಪ್ಪಿಕೊಂಡು ಸೆಲ್ಫಿಗೆ ಪೋಸ್ ಕೊಟ್ಟಿದ್ದಾಳೆ. ಈ ವೇಳೆ ಅಭಿಮಾನಿ ಸುಮ್ಮನಿರದೇ ತನ್ನ ಕಿಸೆಯಲ್ಲಿದ್ದ ಸ್ಪೆಕ್ಟ್ ತೆಗೆದು ಕಣ್ಣಿಗೆ ಹಾಕಿಕೊಂಡು ಪೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಅಭಿಮಾನಿಯದ್ದು ಓವರ್ ಆಕ್ಟಿಂಗ್ ಆಗಿದೆ ಎಂದೆನಿಸಿದರೂ ರಶ್ಮಿಕಾ ವಾರೆಗಣ್ಣಿನಿಂದ ನೋಡಿ ಎಲ್ಲರನ್ನ ಸ್ಮೈಲ್ ಮಾಡಿ ಅಲ್ಲಿಂದ ಮುಂದೆ ಹೋಗಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ರಶ್ಮಿಕಾರ ಫೋಟೋಸ್ ಹಾಗೂ ವೀಡಿಯೋ ರೀಲ್ಸ್ ಅಪ್ಲೋಡ್ ಮಾಡುತ್ತಿರುತ್ತಾರೆ. ಅದಕ್ಕೆ ಫ್ಯಾನ್ಸ್ ಕೂಡ ಫಿದಾ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ, ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ರಶ್ಮಿಕಾ ಮಂದಣ್ಣರನ್ನು ಹೊಸ ಲುಕ್ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರೋ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೇಟ್ ಬೇವು!
ರಶ್ಮಿಕಾಳನ್ನು ಡಾರ್ಲಿಂಗ್ ಎಂದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ರೂಮರ್ ಜೋಡಿಗಳು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಪ್ರೀತಿಯ ಸಂಭಾಷಣೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅದರ ಜೊತೆಗೆ ವಿಜಯ್ ಅವರು ರಶ್ಮಿಕಾ ಅವರನ್ನು ಡಾರ್ಲಿಂಗ್ ಎಂದು ಉಲ್ಲೇಖಿಸಿರುವುದು ಸಖತ್ ವೈರಲ್ ಆಗಿದೆ. X ಸೋಸಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನಲ್ಲಿ, ವಿಜಯ್ ದೇವರಕೊಂಡ ಟೀಸರ್ ಅನ್ನು ಪೋಸ್ಟ್ ಮಾಡಿದರು. ಮತ್ತು ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕರಿಗೆ ಚಲನಚಿತ್ರದೊಂದಿಗೆ ಶುಭ ಹಾರೈಸಿದರು. ರಣಬೀರ್ ಕಪೂರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು.