ಡಬಲ್ ವಯಸ್ಸಿನ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್: ಅನುಭವ ಬಿಚ್ಚಿಟ್ಟ Pooja Hegde
ತಮಗಿಂತ 22 ವರ್ಷ ಹಿರಿಯ ನಟ ಸಲ್ಮಾನ್ ಖಾನ್ರೊಂದಿಗೆ ಚಿತ್ರದಲ್ಲಿ ರೊಮಾನ್ಸ್ ಮಾಡುವಾಗ ಅನುಭವ ಹೇಗಿತ್ತು ಎಂಬ ಬಗ್ಗೆ ನಟಿ ಪೂಜಾ ಹೆಗ್ಡೆ ಮಾತನಾಡಿದ್ದಾರೆ.
ಹೊಸದಾಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುವ ನಟಿಯರಿಗೆ ಒಂದಿಷ್ಟು ಮಂದಿ ಹೀರೋಗಳ ಜೊತೆ ನಟಿಸಬೇಕೆಂಬ ಅದಮ್ಯ ಬಯಕೆ ಇರುವುದು ಸಹಜ. ಇದಾಗಲೇ ಸಕತ್ ಫೇಮಸ್ ಆಗಿರೋ ನಟರ ಜೊತೆ ನಟಿಸುವ ಅವರ ಆಸೆಗೆ ವಯಸ್ಸಿನ ಅಡ್ಡಿ ಬರುವುದೇ ಇಲ್ಲ. ಇನ್ನು ಕೆಲವು ನಾಯಕರಿಗಂತೂ ಕೇಳುವುದೇ ಬೇಡ. ನಾಯಕಿ ಮಗಳ ವಯಸ್ಸಿನವಳಾದರೂ ಪರವಾಗಿಲ್ಲ, ಆಕೆಯೇ ಒಪ್ಪಿಕೊಳ್ಳುವಾಗ ಇನ್ನು ತಡೆಯಾಕೆ ಎಂದು ಪರದೆಯ ಮೇಲೆ ರೊಮಾನ್ಸ್ (Romance) ಮಾಡಲು ಹಿರಿಹಿರಿ ಹಿಗ್ಗುತ್ತಾರೆ. ಅಂಥ ಅದೆಷ್ಟೋ ಉದಾಹರಣೆಗಳನ್ನು ಇದಾಗಲೇ ನೋಡಿಯಾಗಿದೆ. ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಂಡಿರುವ ಹಲವಾರು ನಾಯಕರು ಇದ್ದಾರೆ. ವಯಸ್ಸು 50-60 ದಾಟಿದ್ದರೂ ಯುವಕರನ್ನು ನಾಚಿಸುವಂತೆ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರುತ್ತಾರೆ. ಕೆಲ ನಾಯಕಿಯರು ಕೂಡ ತಮ್ಮ ದೇಹವನ್ನು ಸುಂದರವಾಗಿ ಇರಿಸಿಕೊಂಡರೂ ಒಂದು ವಯಸ್ಸು ದಾಟಿದ ಮೇಲೆ ಅವರಿಗೆ ನಾಯಕಿ ಸ್ಥಾನ ಸಿಗುವುದು ತುಸು ಕಷ್ಟವೇ. ಆದರೆ ನಾಯಕರ ಮಾತು ಬಂದಾಗ ಹಾಗಲ್ಲ, ಇದಾಗಲೇ ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ ಸೇರಿದಂತೆ ಕೆಲ ನಟರು ನಾಯಕರಾಗಿ ಕಾಣಿಸಿಕೊಂಡು ಮಿಂಚಿದ್ದಾರೆ.
ಇಷ್ಟೆಲ್ಲಾ ಮಾತು ಇಲ್ಲೇಕೆ ಎಂದರೆ, ಈಗ ಎಲ್ಲೆಲ್ಲೂ ಕಿಸಿ ಕಾ ಭಾಯ್, ಕಿಸಿ ಕೀ ಜಾನ್ದ್ದೇ ಮಾತು. ಇದಕ್ಕೆ ಕಾರಣ, ಇದರ ನಾಯಕ ಸಲ್ಮಾನ್ ಖಾನ್ಗೆ 57 ವರ್ಷ ವಯಸ್ಸಾಗಿದ್ದರೆ, ನಾಯಕಿ ಪೂಜಾ ಹೆಗ್ಡೆ ಅವರ ವಯಸ್ಸು 32. ಅಂದರೆ ಇವರಿಬ್ಬರ ನಡುವೆ ಬರೋಬ್ಬರಿ 22 ವರ್ಷಗಳ ಅಂತರವಿದೆ. ನಿಜ ಜೀವನದಲ್ಲಿ ಹೀಗೊಂದು ಜೋಡಿ ಇದ್ದರೆ ಅದೆಷ್ಟು ಟ್ರೋಲ್ ಆಗುತ್ತಿತ್ತೋ ಗೊತ್ತಿಲ್ಲ. ಆದರೆ ಚಿತ್ರರಂಗದಲ್ಲಿ ಎಲ್ಲವೂ ಸೈ. ಪಠಾಣ್ (Pathaan) ಚಿತ್ರದಲ್ಲಿ 57 ವರ್ಷದ ಶಾರುಖ್ ಖಾನ್ ಜೊತೆ, 37 ವರ್ಷದ ದೀಪಿಕಾ ಪಡುಕೋಣೆ ಅತ್ಯಂತ ಕನಿಷ್ಠ ಬಟ್ಟೆಯಲ್ಲಿ ಮೈಚಳಿ ಬಿಟ್ಟು ರೊಮಾನ್ಸ್ ಮಾಡಿದಾಗಲೂ ಬಹಳ ಮಾತು ಕೇಳಿಬಂದಿದ್ದವು. ಇದೀಗ ಸಲ್ಲು ಭಾಯಿ ಸರದಿ. ಇದೇ ಕಾರಣಕ್ಕೆ ಪೂಜಾ ಹೆಗ್ಡೆ ಹೋದಲ್ಲಿ, ಬಂದಲ್ಲಿ ಇದೇ ಪ್ರಶ್ನೆ ಎದುರಾಗುತ್ತಿದೆ. ಅಷ್ಟು ದೊಡ್ಡ ವಯಸ್ಸಿನ ನಾಯಕನ ಜೊತೆ ರೊಮಾನ್ಸ್ ಮಾಡುವಾಗಿನ ಅನುಭವ ಹೇಗಿತ್ತು ಎಂಬುದು ಪ್ರಶ್ನೆ.
Shobana: ಮಳೆ ಸೀನ್ ಮಾಡುವಾಗ ಒಳಗೆ ಬಟ್ಟೆ ಇರಲಿಲ್ಲ... ರಜನೀ ಸರ್ ಎತ್ತಿಕೊಂಡೇ ಬಿಟ್ರು...
ಇದರ ಮಧ್ಯೆಯೇ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿಬಿಟ್ಟಿತ್ತು. ಅದಕ್ಕೆ ಕಾರಣ, ಪರದೆಯ ಮೇಲೆ ಅವರ ರೊಮಾನ್ಸ್ ಆ ರೀತಿ ಇತ್ತು. ಮಾತ್ರವಲ್ಲದೇ, ಇತ್ತೀಚೆಗಷ್ಟೆ ಪೂಜಾ ತನ್ನ ಸಹೋದರ ರಿಷಬ್ ಹೆಗ್ಡೆ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ವಿಶೇಷ ಎಂದರೆ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಇದು ವದಂತಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪೂಜಾ ಇದು ಸುಳ್ಳು ಸುದ್ದಿ, ನಾನಿನ್ನು ಸಿಂಗಲ್. ಸದ್ಯ ನನ್ನ ಕರಿಯರ್ ಕಡೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ' ಎಂದು ಹೇಳಿದ್ದರು. ಇದೀಗ ಇವರಿಬ್ಬರ ರೊಮಾನ್ಸ್ ಕುರಿತು ಕೇಳಿದ ಪ್ರಶ್ನೆಗೂ ಪೂಜಾ ಹೆಗ್ಡೆ ದಿಟ್ಟತನದ ಉತ್ತರ ಕೊಟ್ಟಿದ್ದಾರೆ. ಇದು ಹೊಸ ವಿಚಾರವೇನಲ್ಲ. ಬಹುತೇಕ ಎಲ್ಲ ನಟಿಯರಿಗೂ ಇಂಥ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ನನಗೂ ಹಾಗೆಯೇ ಇತ್ತು ಅಷ್ಟೇ. ಅಷ್ಟಕ್ಕೂ ಸಲ್ಮಾನ್ ಖಾನ್ (Salman Khan) ಜೊತೆ ರೊಮಾನ್ಸ್ ಮಾಡಿದ ಮೊದಲ ಕಿರಿಯ ನಟಿಯೇನೂ ನಾನಲ್ಲ. ಇದಾಗಲೇ ಸಲ್ಮಾನ್ ಖಾನ್ ಅವರು ಹಲವಾರು ಕಿರಿಯ ನಟಿಯರ ಜೊತೆ ಪಾತ್ರ ಮಾಡಿದ್ದಾರೆ, ಪಾತ್ರಕ್ಕೆ ತಕ್ಕಂತೆ ರೊಮಾನ್ಸ್ ಮಾಡಿದ್ದಾರೆ. ನನ್ನದೇನು ಹೊಸ ವಿಷಯವಲ್ಲ. ಸಲ್ಮಾನ್ ಅವರು ಕೂಡ ಎಲ್ಲರನ್ನೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ನನ್ನ ಪಾಲಕರು ನಾನು ಸಲ್ಮಾನ್ ಖಾನ್ ಅವರಂತಹ ಸೂಪರ್ಸ್ಟಾರ್ (Superstar) ಜೊತೆ ನಟಿಸಿದ್ದೇನೆ ಎಂದು ತುಂಬಾ ಥ್ರಿಲ್ ಆಗಿದ್ದಾರೆ. ನನ್ನ ತಾಯಿ ಹಾಗೂ ತಂಗಿ ಸಲ್ಮಾನ್ ಖಾನ್ ಅವರ ದೊಡ್ಡ ಫ್ಯಾನ್ಸ್ ಎಂದಿದ್ದಾರೆ ಪೂಜಾ. ಅಭಿಮಾನಿಗಳು ಪೂಜಾ ಹಾಗೂ ಸಲ್ಮಾನ್ ಖಾನ್ ಅವರ ಕೆಮಿಸ್ಟ್ರಿ ಇಷ್ಟಪಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಪೂಜಾ ಹೆಗ್ಡೆ ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. ಈ ಜೋಡಿಯ ನಡುವಿನ ರೊಮ್ಯಾನ್ಸ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದಿದ್ದಾರೆ.
Dusky beauty ಕಾಜೋಲ್ ಬೆಳ್ಳಗಾಗಲು ಮಾಡಿದ್ದೇನು? ರಹಸ್ಯ ಬಿಚ್ಚಿಟ್ಟ ನಟಿ...