Shobana: ಮಳೆ ಸೀನ್​ ಮಾಡುವಾಗ ಒಳಗೆ ಬಟ್ಟೆ ಇರಲಿಲ್ಲ... ರಜನೀ ಸರ್​ ಎತ್ತಿಕೊಂಡೇ ಬಿಟ್ರು...

ರಜನೀಕಾಂತ್​ ಅವರ ಜೊತೆಗೆ ಶಿವಾ ಚಿತ್ರದಲ್ಲಿ ಮಳೆ ನೀರಿನಲ್ಲಿ ನೆನೆಯುವ ದೃಶ್ಯದ ಶೂಟಿಂಗ್​ ವೇಳೆ ನಡೆದ ಘಟನೆಯ ಮೆಲುಕು ಹಾಕಿದ್ದಾರೆ ನಟಿ ಶೋಭನಾ. ಅವರು ಹೇಳಿದ್ದೇನು? 
 

Rain songs in Tamil cinema are like premeditated murder of the heroine says Shobhana

ನಟ-ನಟಿಯರ ಬದುಕು ಅಷ್ಟು ಸುಲಭವಲ್ಲ. ಅದರಲ್ಲಿಯೂ ಒಂದು ಫೇಮಸ್​ ನಟಿ ಎಂದು ಎನ್ನಿಸಿಕೊಳ್ಳಬೇಕಾದರೆ ಅವರು ಜೀವನದಲ್ಲಿ ಹಲವಾರು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಎಷ್ಟೋ ಕಹಿ ಅನುಭವಗಳು ಅವರಿಗಾಗುತ್ತವೆ. ಚಿತ್ರರಂಗದಲ್ಲಿ ನೆಲೆಯೂರಬೇಕಾಗಿದ್ದರೆ ತಾವು ಎಂತೆಂಥ ಕಠಿಣ ಸ್ಥಿತಿಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂಬ ಬಗ್ಗೆ ಇದಾಗಲೇ ಹಲವಾರು ನಟಿಯರು ಬಹಿರಂಗವಾಗಿ ಮಾತನಾಡಿದ್ದಿದೆ. ಕಾಸ್ಟ್​ ಕೌಚಿಂಗ್​ ಎಂಬ ಭಯಾನಕ ಸತ್ಯವನ್ನು ನಟಿಯರು ಮಾತ್ರವಲ್ಲದೇ ನಟರೂ ತೆರೆದಿಟ್ಟಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಕೆಲವು ನಾಯಕರು ತಮ್ಮನ್ನು ಹೇಗೆಲ್ಲಾ ಬಳಸಿಕೊಳ್ಳಲು ಸಂಚು ಹೂಡಿದ್ದರು, ಹೇಗೆ ನೇರವಾಗಿ ತಮ್ಮನ್ನು ಮಂಚಕ್ಕೆ ಆಹ್ವಾನಿಸಿದ್ದರು ಎಂಬ ಬಗ್ಗೆ ಹಲವಾರು ಮಂದಿ ಇದಾಗಲೇ ಹೇಳಿಕೊಂಡಿದ್ದಾರೆ. ಇದು ಒಂದೆಡೆಯಾದರೆ, ಚಿತ್ರೀಕರಣದ ಸಂದರ್ಭದಲ್ಲಿ ಹಲವಾರು ರೀತಿಯ ಫಜೀತಿ ಪಡಬೇಕಾಗುವುದು ಕೂಡ ನಡೆಯುತ್ತದೆ.

ಅಂಥದ್ದೇ ಒಂದು ಫಜೀತಿಯ ಕುರಿತು ಬಹುಭಾಷಾ ನಟಿ ಶೋಭನಾ ಅವರು ಇದೀಗ ಬಹಿರಂಗಗೊಳಿಸಿದ್ದಾರೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆಯೂ ಇದೇ ವೇಳೆ ಶೋಭನಾ ನೋವಿನ ನುಡಿಗಳನ್ನಾಡಿದ್ದಾರೆ. ಸಾಮಾನ್ಯವಾಗಿ ನಟಿಯೊಬ್ಬಳು ತನ್ನ ಹಿಂದಿನ ಅನುಭವ ಹಂಚಿಕೊಳ್ಳುತ್ತಿದ್ದಾಳೆ ಎಂದರೆ ಅದರಲ್ಲಿ ಹೆಚ್ಚಿನವರು  ಕಹಿ ಘಟನೆಗಳೇ ಆಗಿರುತ್ತವೆ. ಕೆಲವರಿಗೆ ಮಾತ್ರ ಒಳ್ಳೆಯ ಅನುಭವಗಳು ಆಗುವುದುಂಟು. ಆದರೆ  ರಾಷ್ಟ್ರ ಪ್ರಶಸ್ತಿ ವಿಜೇತ ನಟ,  ಶಾಸ್ತ್ರೀಯ ನೃತ್ಯಗಾರ್ತಿ (Classical Dancer) ಮತ್ತು ಪದ್ಮಶ್ರೀ ಪುರಸ್ಕೃತೆ ಶೋಭನಾ ಮಾತ್ರ ನೋವಿನ ಘಟನೆಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 

Armaan Malik: ಯೂಟ್ಯೂಬರ್​ ಇಬ್ಬರು ಗರ್ಭಿಣಿ ಪತ್ನಿಯರಲ್ಲಿ ಎರಡನೆಯವಳಿಗೆ ಹುಟ್ಟಿತು ಮಗು

ನಟಿ ಸುಹಾಸಿನಿ ಮಣಿರತ್ನಂ (Suhasini Maniratnam) ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಶೋಭನಾ ಅವರು ಚಿತ್ರರಂಗದಲ್ಲಿ ತಮ್ಮ ಬೆಳವಣಿಗೆಯ ವರ್ಷಗಳಲ್ಲಿನ  ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರು 1989ರಲ್ಲಿ ಬಿಡುಗಡೆಗೊಂಡ ಶಿವಾ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ. ಅದರಲ್ಲಿ ನಟ  ರಜನಿಕಾಂತ್ (Rajinikanth )ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ ರಜನೀಕಾಂತ್​ ಅವರ ಜೊತೆಗೆ ಹಲವು ಚಿತ್ರಗಳನ್ನು ಮಾಡಿರುವ ಶೋಭನಾ ಅವರಿಗೆ ಇದರ ಅನುಭವ ಹಂಚಿಕೊಳ್ಳುವಂತೆ ನಟಿ ಸುಹಾಸಿನಿ ಕೇಳಿದರು. ಅದಕ್ಕೆ ಉತ್ತರವಾಗಿ ಶೋಭನಾ (Shobhana) ಈ ವಿಷಯ ಶೇರ್​ ಮಾಡಿದ್ದಾರೆ. 

ರಜನೀಕಾಂತ್​ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಶೋಭನಾ ಅವರು, ರಜನೀಕಾಂತ್​ ಯಾವಾಗಲೂ ಸಂಭಾವಿತ ವ್ಯಕ್ತಿ ಎಂದು ಹೇಳಿದರು. ಶಿವ ಚಿತ್ರದ  ಸೆಟ್‌ನಲ್ಲಿ ನಡೆದ ಘಟನೆಯನ್ನು ಇದೇ ವೇಳೆ ಹಂಚಿಕೊಂಡರು.  ಅಲ್ಲಿ ರಜನಿಕಾಂತ್​ ಅವರು ತಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು, ಎಲ್ಲದಕ್ಕೂ ಸಹಕಾರ ನೀಡುತ್ತಿದ್ದರು ಎಂದರು. ಆದರೆ ಇದೇ ವೇಳೆ  ಮಳೆಯ ದೃಶ್ಯದ ಭಯಾನಕ ಅನುಭವವನ್ನು (Experience) ಅವರು ಶೇರ್​ ಮಾಡಿದರು. 'ಮಳೆಯಲ್ಲಿ ನೆನೆದು ರಜನೀಕಾಂತ್​ ಅವರ ಜೊತೆ ಒಂದು ಹಾಡಿಗೆ ನೃತ್ಯ ಮಾಡಬೇಕಿತ್ತು. ಆದರೆ ಈ ಬಗ್ಗೆ ನನಗೆ ಮೊದಲೇ ಹೇಳಿರಲಿಲ್ಲ.  ಆದರೆ ರಜನಿ ಅವರ ವೇಷಭೂಷಣವನ್ನು ನೋಡಿ ನಾನು ಅದರ ಬಗ್ಗೆ ತಿಳಿದುಕೊಂಡೆ. ನನಗೆ  ಬಿಳಿ ಪಾರದರ್ಶಕ ಸೀರೆ ಕೊಡಲಾಗಿತ್ತು. ಅದಾಗಲೇ  ಇದು ಮಳೆ ಹಾಡು ಎಂದು ನನಗೆ ಅರ್ಥವಾಯಿತು. ಆದರೆ ಇದರ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಅಸಲಿಗೆ ಮಳೆಯಲ್ಲಿ ನೆನೆಯುವಾಗ  ಸೀರೆಯ ಒಳಗೆ ಧರಿಸಲು ಸರಿಯಾದ ಬಟ್ಟೆ ಹಾಕಿಕೊಳ್ಳಬೇಕಿತ್ತು. ಆದರೆ ನನ್ನ ಬಳಿ ಅದು ಇರಲಿಲ್ಲ' ಎಂದು ನಟಿ ಹೇಳಿದ್ದಾರೆ.

'ನನಗೆ ಭಯವಾಯಿತು. ಭಯಕ್ಕಿಂತ ಹೆಚ್ಚಾಗಿ ಅಸಹ್ಯ ಎನಿಸಿತು. ಬಿಳಿಯ ಪಾರದರ್ಶಕ ಸೀರೆ ಬೇರೆ. ಒಳಗೆ ಏನೂ ಬಟ್ಟೆ ಹಾಕದೇ ಹೇಗೆ ನಟಿಸಲಿ ಎಂದು ಅರ್ಥವಾಗಲಿಲ್ಲ. ಕೂಡಲೇ ನಾನು  ನಾನು ಮನೆಗೆ ಹೋಗಿ  ತಯಾರಾಗಿ ಬರಬಹುದೇ ಎಂದು ಕೇಳಿದೆ. ಆದರೆ ಅದಕ್ಕೆ ಸಮಯವಿಲ್ಲ,  ಶಾಟ್ (Shot) ಹತ್ತು ನಿಮಿಷಗಳಲ್ಲಿ ರೆಡಿಯಾಗಬೇಕು ಎಂದರು.  ಇಂಥ ಮಳೆ ಹಾಡುಗಳು ಪೂರ್ವಯೋಜಿತ ಕೊಲೆ ಎಂದು ನಾನು ಭಾವಿಸುತ್ತೇನೆ. ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ. ಅಂಥ ಸ್ಥಿತಿ ನನಗಾಗಿತ್ತು. ಈಗ ನಗು ಬರುತ್ತದೆ. ಆದರೆ ಅಂದು ಮಾತ್ರ ಜೀವವೇ ಕೈಗೆ ಬಂದಿತ್ತು. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಕೂಡಲೇ  ಎವಿಎಂ ಸ್ಟುಡಿಯೋದಲ್ಲಿ ಇದ್ದ ಪ್ಲಾಸ್ಟಿಕ್ ಟೇಬಲ್ ಕವರ್ ತೆಗೆದುಕೊಂಡು ಸೀರೆ ಒಳಗೆ ಸುತ್ತಿಕೊಂಡು  ಶಾಟ್​ಗೆ ಹಾಗೂ ಹೀಗೂ  ರೆಡಿ ಆದೆ' ಎಂದರು ಶೋಭನಾ.

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ ವೈರಲ್​

ಇದರ ಇನ್ನಷ್ಟು ಅನುಭವ ಹಂಚಿಕೊಂಡ ಅವರು,  'ಚಿತ್ರೀಕರಣದ ಸಮಯದಲ್ಲಿ, ರಜನಿ ಸರ್ ನನ್ನನ್ನು ಡ್ಯಾನ್ಸ್ ಸ್ಟೆಪ್‌ಗೆ ಎತ್ತಬೇಕಾಗಿತ್ತು, ಅವರಿಗೆ ಇದ್ಯಾವ ವಿಷಯವೂ ಗೊತ್ತಿರಲಿಲ್ಲ. ನಾನು ಕವರ್​ ಸುತ್ತಿಕೊಂಡಿದ್ದೂ ತಿಳಿದಿರಲಿಲ್ಲ. ಅವರು ನನ್ನನ್ನು ಎತ್ತಿದಾಗ  ಕವರ್ (Cover) ಸದ್ದು ಮಾಡಲಾರಂಭಿಸಿತು. ಅವರು ವಿಚಿತ್ರವಾಗಿ ನನ್ನನ್ನು ನೋಡಿದರು, ಶಾಟ್​ ಸಮಯದಲ್ಲಿ  ಅವರು ಗೊಂದಲಕ್ಕೊಳಗಾಗಿದ್ದರು. ಆಗ ನಾನು ಅವರಿಗೆ ನಿಜ ವಿಷಯ ಹೇಳಬೇಕಾಯಿತು. ಅವರು ನನ್ನನ್ನು ಸಮಾಧಾನ ಪಡಿಸಿದರು. ಮಾತ್ರವಲ್ಲದೇ ಅದರ ಬಗ್ಗೆ ಅವರು ಯಾರಿಗೂ ಹೇಳಲಿಲ್ಲ. ಸೆಟ್‌ನಲ್ಲಿರುವ ಪ್ರತಿಯೊಬ್ಬರೂ ಆರಾಮವಾಗಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ಅಷ್ಟು ಒಳ್ಳೆಯ ವ್ಯಕ್ತಿ ಅವರು ಎಂದರು.

 

Latest Videos
Follow Us:
Download App:
  • android
  • ios