Asianet Suvarna News Asianet Suvarna News

ಶ್ರೀಮಂತ ಹಿನ್ನೆಲೆಯಿಂದ ಬಂದ್ರು ತಿನ್ನಲು ದುಡ್ಡಿಲ್ಲದ ಸ್ಥಿತಿ ತಲುಪಿದ್ದು ಹೇಗೆ: ಕಷ್ಟದ ದಿನಗಳ ನೆನೆದ ವಿಜಯ್ ವರ್ಮಾ

ನೆಟ್‌ಫ್ಲಿಕ್ಸ್‌ನಲ್ಲಿ ನಟ ವಿಜಯ್ ವರ್ಮಾ ನಟನೆಯ ಲೇಟೆಸ್ಟ ಶೋ ರಿಲೀಸ್ ಆಗಿದೆ. 'ಐಸಿ 814: ದಿ ಕಂದಹಾರ್ ಹೈಜಾಕ್‌' ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಮೋಷನ್ ವೇಳೆ ನಟ ವಿಜಯ್ ವರ್ಮಾ ತಮ್ಮ ಬದುಕಿನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 

IC 814 The Kandahar Hijack series released on Netflix Tamanna boyfriend Vijay Verma remembers difficult days akb
Author
First Published Aug 29, 2024, 12:48 PM IST | Last Updated Aug 29, 2024, 12:48 PM IST

ನವದೆಹಲಿ: ನೆಟ್‌ಫ್ಲಿಕ್ಸ್‌ನಲ್ಲಿ ನಟ ವಿಜಯ್ ವರ್ಮಾ ನಟನೆಯ ಲೇಟೆಸ್ಟ ಶೋ ರಿಲೀಸ್ ಆಗಿದೆ. 'ಐಸಿ 814: ದಿ ಕಂದಹಾರ್ ಹೈಜಾಕ್‌' ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಮೋಷನ್ ವೇಳೆ ನಟ ವಿಜಯ್ ವರ್ಮಾ ತಮ್ಮ ಬದುಕಿನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದ್ರು ತಿನ್ನಲು ಗತಿ ಇಲ್ಲದಂತಹ ಸ್ಥಿತಿ ತಲುಪಿದ್ದು ಹೇಗೆ ಎಂಬುದನ್ನು ನಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಅಂದಹಾಗೆ 'ಐಸಿ 814: ದಿ ಕಂದಹಾರ್ ಹೈಜಾಕ್‌ ಈ ಸಿರೀಸ್‌ನ್ನು ಅನುಭವ್ ಸಿನ್ಹಾ ನಿರ್ದೇಶಿಸಿದ್ದಾರೆ. 1999ರಲ್ಲಿ ಭಾರತದ ಏರ್‌ ಇಂಡಿಯಾ ವಿಮಾನವನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಅಪಹರಿಸಿದ ಕತೆಯನ್ನು  ಈ ಮಿನಿ ಸಿರೀಸ್ ಹೊಂದಿದೆ. ಸಿನಿಮಾ ರಿಲೀಸ್‌ಗೂ ಮೊದಲು  ನಟ ವಿಜಯ್ ವರ್ಮಾ ಅವರು, ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್‌ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದು, ತಮ್ಮ ಬದುಕಿನ ಹಲವು ಮಜಲುಗಳು, ಅನುಭವಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ವಿಜಯ್ ವರ್ಮಾ, ಈ ಸಂದರ್ಶನದಲ್ಲಿ ಜಾನೇ ಜಾನ್ ನಟ ವಿಜಯ್ ವರ್ಮಾ ತಮ್ಮ ಬದುಕಿನ ಆರಂಭದ ದಿನಗಳು ಆರ್ಥಿಕ ದುಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಪಾಕ್‌ನಲ್ಲಿ ಕಂದಹಾರ್‌ ವಿಮಾನ ಹೈಜಾಕ್‌ ರೂವಾರಿ, ಉಗ್ರ ಮಸೂದ್ ಅಜರ್ ಹತ್ಯೆ: ದಟ್ಟ ವದಂತಿ

ಅವು ಬಹಳ ಕಷ್ಟದ ದಿನಗಳಾಗಿದ್ದವು

ಅವು ಬಹಳ ಕಷ್ಟದ ದಿನಗಳಾಗಿದ್ದವು. ಕೆಳಮಟ್ಟದಲ್ಲಿಯೂ ಅತ್ಯಂತ ಕೆಳಮಟ್ಟದಲ್ಲಿದ್ದ ದಿನಗಳಾಗಿದ್ದವು.  ನನ್ನ ಖಾತೆಯಲ್ಲಿ ಬರೀ 18 ರೂಪಾಯಿಗಳಿದ್ದವು.  ನನ್ನ ಎದುರು ಆಹಾರದ ಎರಡು ಆಯ್ಕೆಗಳಿದ್ದವು. ಒಂದು 12 ರೂಪಾಯಿ ನೀಡಿ  6 ರಿಂದ 8 ಪಾನಿಪುರಿ ತಿನ್ನುವುದು ಅಥವಾ 13 ರೂಪಾಯಿಯಲ್ಲಿ ಎರಡು ಇಡ್ಲಿ ತಿನ್ನುವುದು. ಇವುಗಳಲ್ಲಿ ಯಾವುದಾದರೂ ಒಂದನ್ನು ನಾನು ಆಯ್ಕೆ ಮಾಡಬೇಕಾಗಿತ್ತು. 

ತಮನ್ನಾ ಜೊತೆ ಸಕತ್​ ಮಜಾ ಬರತ್ತೆ ಎನ್ನುತ್ತಲೇ ಸಂಬಂಧದ ಗುಟ್ಟು ರಟ್ಟು ಮಾಡಿದ ವಿಜಯ್​ ವರ್ಮಾ...

ಉತ್ತಮವಾದ ಆರ್ಥಿಕ ಹಿನ್ನೆಲೆಯಿಂದ ಬಂದಿದ್ದರು ಏಕೆ ಮನೆಯಿಂದ ಪೋಷಕರಿಂದ ಹಣ ಪಡೆಯುವುದನ್ನು ತಾನು ನಿಲ್ಲಿಸಿದೆ ಎಂಬ ವಿಚಾರವಾಗಿ ಮಾತನಾಡಿದ ವಿಜಯ್ ವರ್ಮಾ, ನನಗೊಬ್ಬ ಬುದ್ಧಿವಂತ ವ್ಯಕ್ತಿ  ಹೀಗೆ ಹೇಳಿದ್ದರು, 'ಎಲ್ಲಿಯವರೆಗೆ ನಿನಗೆ ನಿನಗೆ ನಿನ್ನ ಮನೆ ಬಾಡಿಗೆ, ನಿನ್ನ ಮೂಲಭೂತ ಖರ್ಚುವೆಚ್ಚಗಳಿಗೆ ಹಣ ನಿನಗೆ ಬರುತ್ತಲೇ ಇರುವುದೋ ಅಲ್ಲಿಯವರೆಗೆ ನೀನು ಬೆಳೆಯುವುದೇ ಚಲಿಸುವುದೇ ಇಲ್ಲ, ನಿನ್ನ ಒಳಗಿರುವ ಬೆಂಕಿಯನ್ನು ಸ್ವಲ್ಪ ಉರಿಯಲು ಬಿಡು' ಎಂದು ಆ ವ್ಯಕ್ತಿ ನನಗೆ ಸಲಹೆ ನೀಡಿದರು.

ಆತನ ಮಾತು ಕೇಳಿ 2ರಿಂದ 3 ತಿಂಗಳು ಹಾಗೆಯೇ ಕಳೆದೆ. ನನ್ನ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿತ್ತು. ನನ್ನ ಕೈಯಲ್ಲಿ ಸ್ವಲ್ಪವೂ ಹಣವಿರಲಿಲ್ಲ. ಅದೇ ಸಮಯದಲ್ಲಿ ನಾನು ಸಣ್ಣದೊಂದು ಪಾತ್ರದಲ್ಲಿ ಅಭಿನಯಿಸಿದೆ. ಅದನ್ನು ನಾನು ಹಣಕ್ಕಾಗಿ ಮಾಡಿದೆ. ಅದರಿಂದ ನನಗೆ ತುಂಬಾ ಕೆಟ್ಟ ಅನುಭವವಾಯ್ತು. ಅದು ನನ್ನ ಜೀವನದ ಅತ್ಯಂತ ಹೀನಮಟ್ಟದ ಸ್ಥಿತಿಯಾಗಿತ್ತು ಎಂದು ವಿಜಯ್ ವರ್ಮಾ ಜೀವನ ಹೇಗೆ ಬದಲಾಯಿತು ಎಂಬ ಬಗ್ಗೆ ಮಾತನಾಡಿದ್ದಾರೆ. 

ಪಾಕ್‌ನಲ್ಲಿ ಕಂದಹಾರ್‌ ವಿಮಾನ ಹೈಜಾಕ್‌ ರೂವಾರಿ, ಉಗ್ರ ಮಸೂದ್ ಅಜರ್ ಹತ್ಯೆ: ದಟ್ಟ ವದಂತಿ

Latest Videos
Follow Us:
Download App:
  • android
  • ios