ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ ಸಹ ಮಂಗಳೂರಿನವರೇ. ಬಾಲ್ಯದ ಐದು ವರ್ಷಗಳನ್ನು ಶಾರುಖ್ ಖಾನ್‌ ಮಂಗಳೂರಿನಲ್ಲಿ ಕಳೆದಿದ್ದರು. ಈ ವಿಷಯವನ್ನು ಸ್ವತಃ ಶಾರುಖ್ ಅವರೇ ಕರ್ನಾಟಕಕ್ಕೆ ವಿವಿಧ ಕಾರ್ಯಕ್ರಮಗಳ ಸಲುವಾಗಿ ಆಗಮಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದರು. 

ಭಾರತೀಯ ಚಿತ್ರರಂಗಕ್ಕೂ ಮಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಹೌದು! ಮಂಗಳೂರಿನ ಹಲವಾರು ಕಲಾವಿದರು ಪರಾಭಾಷಾ ಚಿತ್ರರಂದಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನಟಿಯರಾದ ಶಿಲ್ಪ ಶೆಟ್ಟಿ, ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಸೇರಿದಂತೆ ಟಾಲಿವುಡ್‌ನ ಅನುಷ್ಕಾ ಶೆಟ್ಟಿ, ಕೃತಿ ಶೆಟ್ಟಿ ಇವರೆಲ್ಲರೂ ಸಹ ಮೂಲ ಮಂಗಳೂರಿಗರು. ಇದೀಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ ಸಹ ಮಂಗಳೂರಿನವರೇ. ಬಾಲ್ಯದ ಐದು ವರ್ಷಗಳನ್ನು ಶಾರುಖ್ ಖಾನ್‌ ಮಂಗಳೂರಿನಲ್ಲಿ ಕಳೆದಿದ್ದರು. ಈ ವಿಷಯವನ್ನು ಸ್ವತಃ ಶಾರುಖ್ ಅವರೇ ಕರ್ನಾಟಕಕ್ಕೆ ವಿವಿಧ ಕಾರ್ಯಕ್ರಮಗಳ ಸಲುವಾಗಿ ಆಗಮಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದರು. ಶಾರುಖ್ ಖಾನ್ ಅವರ ತಾಯಿಯ ತಂದೆ ಇಫ್ತಿಖರ್ ಅಹ್ಮದ್ 1960ರ ದಶಕದಲ್ಲಿ ಮಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. 

1965ರ ನವೆಂಬರ್ 2ರಂದು ದೆಹಲಿಯಲ್ಲಿ ಜನಿಸಿದ್ದ ಶಾರುಖ್ ಖಾನ್ ಅವರನ್ನು ಅವರ ತಾಯಿ ಮಂಗಳೂರಿಗೆ ಕರೆತಂದಿದ್ದರು. ಆ ಸಮಯದಲ್ಲಿ ಸುಮಾರು ಐದು ವರ್ಷಗಳ ಕಾಲ ಮಂಗಳೂರಿನಲ್ಲಿಯೇ ಶಾರುಖ್ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದರು. ಸದ್ಯ ಬಾಲಿವುಡ್‌ನ ದೊಡ್ಡ ಸ್ಟಾರ್ ನಟನಾಗಿ ಮಿಂಚಿರುವ ಶಾರುಖ್ ಖಾನ್ ಮಂಗಳೂರಿನ ಜತೆಗೆ ಕರ್ನಾಟಕದ ಪ್ರಮುಖ ನಗರವಾದ ಬೆಂಗಳೂರಿನ ಬಗ್ಗೆಯೂ ಸಹ ಹಲವು ಬಾರಿ ಮಾತನಾಡಿದ್ದಾರೆ. ಪ್ರಮುಖವಾಗಿ ಶಾರುಖ್ ಖಾನ್ ಯಾವ ಸಂದರ್ಭಗಳಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ಬಗ್ಗೆ ಮಾತನಾಡಿದ್ದಾರೆ. ನಾನು ಮಂಗಳೂರಿನಲ್ಲಿ ನನ್ನ ಬಾಲ್ಯ ಕಳೆದೆ. ನನ್ನ ತಾತ ಮಂಗಳೂರಿನಲ್ಲಿದ್ದರು. 

ಅತಿ ಕೆಟ್ಟದಾಗಿ ನೆಲಕಚ್ಚಿದ ಶಾರುಖ್‌ ಸಿನಿಮಾಗಳು; ಇವುಗಳ ಕಲೆಕ್ಷನ್‌ ಎಷ್ಷು ಗೊತ್ತಾ?

ಹಾಗಾಗಿ ನನ್ನ ಬಾಲ್ಯದ ದಿನಗಳನ್ನು ಅಲ್ಲಿಯೇ ಕಳೆದೆ ಎಂದು ಹಲವಾರು ಬಾರಿ ಹೇಳಿರುವ ಶಾರುಖ್ ಖಾನ್ ಹಿಂದೊಮ್ಮೆ ತಮ್ಮ ಬಾಲ್ಯದ ಚಿತ್ರಗಳು ಯಾವ ಊರಿನದ್ದು ಎಂಬ ಚರ್ಚೆ ಹೆಚ್ಚಾಗಿ ನಡೆದಾಗ ತಾವೇ ಟ್ವೀಟ್ ಮಾಡಿ ಅದು ಮಂಗಳೂರಿನಲ್ಲಿ ತೆಗೆದಿದ್ದ ಚಿತ್ರಗಳು ಎಂಬುದನ್ನು ತಿಳಿಸಿದ್ದರು. ನಮ್ಮ ತಾತ ಮಂಗಳೂರು ಪೋರ್ಟ್‌ನ ಎಂಜಿನಿಯರ್ ಆಗಿದ್ದರು, ಹಾಗಾಗಿ ನಾನು ಬೆಳೆದದ್ದೆಲ್ಲಾ ಮಂಗಳೂರಿನಲ್ಲೇ, ನನ್ನ ಬಾಲ್ಯದ ಫೋಟೊಗಳೆಲ್ಲಾ ಮಂಗಳೂರಿನಲ್ಲಿ ತೆಗೆದ ಫೋಟೊಗಳೇ ಎಂದು ಶಾರುಖ್ ಖಾನ್ 2010ರ ಮೇ 23ರಂದು ಟ್ವೀಟ್ ಮಾಡಿದ್ದರು. ನಾನು ಬಾಲ್ಯದಲ್ಲಿ ಬೆಂಗಳೂರಿನ ನಂದಿದುರ್ಗ ರೋಡ್, ಜಯಮಹಲ್ ಬಡಾವಣೆ ಹಾಗೂ ಪ್ಯಾಲೇಸ್ ರೋಡ್‌ಗೆ ಭೇಟಿ ನೀಡಿದ್ದೆ. ಅವು ಸದಾ ನೆನಪಿನಲ್ಲಿರುವಂತ ಸ್ಥಳಗಳು. 

ಮಾತ್ರವಲ್ಲದೇ ಬಾಲ್ಯದಲ್ಲೇ ನಟನಾಗಬೇಕು ಎಂಬ ಕನಸು ಹೊತ್ತಿದ್ದ ನಾನು ಮುಂಬೈಗೆ ಕಳುಹಿಸಿದ್ದ ಮೊದಲ ಫೋಟೊ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ತೆಗೆಸಿದ್ದು ಎಂದು ಶಾರುಖ್ ಖಾನ್ ಹೇಳಿಕೆ ನೀಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ 2011ರಲ್ಲಿ ವರದಿ ಮಾಡಿತ್ತು. ವಿಶೇಷವಾಗಿ ಬಾಲ್ಯದ ಐದು ವರ್ಷವನ್ನು ಮಂಗಳೂರಿನಲ್ಲಿ ಕಳೆದಿದ್ದರೂ ಸಹ ಶಾರುಖ್ ಖಾನ್‌ಗೆ ಕನ್ನಡ ಬರಲ್ವ ಎಂದು ಹಲವರು ಟ್ವೀಟ್ಟರ್‌ನಲ್ಲಿ ಪ್ರಶ್ನೆ ಕೇಳಿದಾಗಲೂ ಶಾರುಖ್ ಈ ಯಾವ ಟ್ವೀಟ್‌ಗೂ ಉತ್ತರಿಸಿರಲಿಲ್ಲ. ಆದರೆ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದಾಗ ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ್ದ ಶಾರುಖ್ ಖಾನ್ ನಂಗೆ ಕನ್ನಡ ಬರಲ್ಲ ಏಕೆಂದರೆ ಬಾಲ್ಯ ಕಳೆದ ಕೂಡಲೇ ನನ್ನನ್ನು ದೆಹಲಿಗೆ ಕರೆದುಕೊಂಡು ಹೋದರು. ಹೀಗಾಗಿ ಕನ್ನಡ ಕಲಿಯಲಾಗಲಿಲ್ಲ, ನನ್ನ ತಾಯಿ ಚೆನ್ನಾಗಿ ಕನ್ನಡವನ್ನು ಮಾತನಾಡುತ್ತಾರೆ ಎಂದು ತಿಳಿಸಿದ್ದರು.

ತನ್ನ ಲವ್‌ಲೈಫ್‌ ಹಾಳಾಗಲು ಶಾರುಖ್ ಖಾನ್‌ ಕಾರಣ: ಸ್ವರಾ ಭಾಸ್ಕರ್‌

ಇನ್ನು ವರದಿಗಳ ಪ್ರಕಾರ ಈ ವರ್ಷ ಶಾರುಖ್ ತಮ್ಮ ಮುಂಬರುವ ಚಿತ್ರಗಳಲ್ಲಿ ತುಂಬಾ ನಿರತರಾಗಿದ್ದಾರೆ ಮತ್ತು ಒಂದರ ನಂತರ ಒಂದರಂತೆ ಚಿತ್ರಗಳ ಚಿತ್ರೀಕರಣದಲ್ಲಿದ್ದಾರೆ. ಪ್ರಸ್ತುತ, ಅವರು ತಮ್ಮ ಡುಂಕಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಜವಾನ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಸೌತ್ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಅವರು ನಯನತಾರಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ದೀಪಿಕಾ ಪಡುಕೋಣೆ ಎದುರು ಪಠಾಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.