ಚಂಬಲ್ ಕಣಿವೆಯಲ್ಲಿ ನಟಿ ಮೊನಿಷಾ ಕೊಯಿರಾಲಾ ಜತೆ ನನ್ನ ಸಿನಿಮಾ ಶೂಟಿಂಗ್ ಸಹ ನಡೆಯಿತು. ಅಲ್ಲಿನ ಶೂಟಿಂಗ್ ವಿಸ್ಯುವಲ್ಸ್‌ ನೋಡಿದ ನನಗೆ ನಿಜವಾಗಿಯೂ ಶಾಕ್ ಆಯ್ತು. ಅದನ್ನು ನೋಡಿದ ನಾನು ನನ್ನನ್ನೇ ಹೇಟ್ ಮಾಡಲು ಶುರು ಮಾಡಿದೆ...

2000ನೇ ಇಸ್ವಿಯಲ್ಲಿ ಸೂಪರ್ ಮಾಡೆಲ್‌ಗಳು ಬಾಲಿವುಡ್‌ನಲ್ಲಿ ನಾಯಕ ಅಥವಾ ನಾಯಕಿ ಆಫರ್ ಪಡೆಯುವ ಪರಿಪಾಠವಿತ್ತು. ಆದರೆ ಪ್ರತಿಯೊಬ್ಬ ಮಾಡೆಲ್‌ ಕೂಡ ಹಾಗೇ ಯಶಸ್ಸು ಪಡೆಯಲು ಸಾಧ್ಯವಿರಲಿಲ್ಲ. ಈ ಅರ್ಜುನ್ ರಾಮ್‌ಪಾಲ್ ಈ ಮಾತಿಗೆ ಒಳ್ಳೆಯ ಉದಾಹರಣೆ. ಅರ್ಜುನ್ ರಾಮ್‌ಪಾಲ್ ಅವರು ಬಾಲಿವುಡ್‌ನಲ್ಲಿ ಕಳೆದ 23 ವರ್ಷಗಳಿಂದಲೂ ಕ್ರಿಯಾಶೀಲರಾಗಿದ್ದಾರೆ. ಆದರೆ, ತಮ್ಮ ವೃತ್ತಿಜೀವನದ ಬಗ್ಗೆ ಅವರಿಗೆ ತೃಪ್ತಿಯಿಲ್ಲ. 

ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಅರ್ಜುನ್ ರಾಂಪಾಲ್‌ 'ನಾನು ಮಾಡೆಲಿಂಗ್‌ನಲ್ಲಿ ಸಕ್ಸಸ್‌ಫುಲ್ ವೃತ್ತಿಜೀವನ ನಡೆಸುತ್ತಿದ್ದೆ. ಅಶೋಕ್ ಮೆಹ್ತಾ ಎನ್ನುವವರು ನನ್ನನ್ನು 'ಮೋಕ್ಷ' ಸಿನಿಮಾಗೆ ನಾಯಕನನ್ನಾಗಿ ಮಾಡಿದರು. ಆ ಕಾಲದಲ್ಲಿ ತುಂಬಾ ಫೇಮಸ್‌ ಆಗಿ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದ ನಟಿ ಮೊನಿಷಾ ಕೊಯಿರಾಲಾ ಅವರ ಜೋಡಿಯಾಗಿ ನನ್ನನ್ನು ಆಯ್ಕೆ ಮಾಡಲಾಯ್ತು. 

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಶೂಟಿಂಗ್‌ ಶುರುವಾಗೋ ಟೈಮಲ್ಲೇ ಇದೇನಿದು 'ರಾಮಾಯಣ'?

ಚಂಬಲ್ ಕಣಿವೆಯಲ್ಲಿ ನಟಿ ಮೊನಿಷಾ ಕೊಯಿರಾಲಾ ಜತೆ ನನ್ನ ಸಿನಿಮಾ ಶೂಟಿಂಗ್ ಸಹ ನಡೆಯಿತು. ಅಲ್ಲಿನ ಶೂಟಿಂಗ್ ವಿಸ್ಯುವಲ್ಸ್‌ ನೋಡಿದ ನನಗೆ ನಿಜವಾಗಿಯೂ ಶಾಕ್ ಆಯ್ತು. ಅದನ್ನು ನೋಡಿದ ನಾನು ನನ್ನನ್ನೇ ಹೇಟ್ ಮಾಡಲು ಶುರು ಮಾಡಿದೆ. ಅಂದು ನಾನು, 'ಇನ್ಮುಂದೆ ನಾನು ಮಾಡೆಲಿಂಗ್ ಮಾಡುವುದಿಲ್ಲ; ಎಂದು ಪ್ರತಿಜ್ಞೆ ಮಾಡಿದೆ. ಅಚ್ಚರಿ ಎಂಬಂತೆ 'ಮೋಕ್ಷ' ಚಿತ್ರವು ಶೂಟಿಂಗ ಮುಗಿಸಲು ಬರೋಬ್ಬರಿ ಆರು ವರ್ಷ ತೆಗೆದುಕೊಂಡಿತು. 

ಒಲ್ಲದ ಮದುವೆ ತಪ್ಪಿಸಿಕೊಳ್ಳಲು ಕೇರಳದಿಂದ ಓಡಿಹೋದ ನಟಿ ಫೇಮಸ್ ಐಟಂ ಡಾನ್ಸರ್‌ ಆದ್ರು!

26 ನವೆಂಬರ್ 1972ರಲ್ಲಿ ಜಬ್ಬಲ್‌ಪುರದಲ್ಲಿ ಜನಿಸಿದ ಅರ್ಜುನ್ ರಾಂಪಾಲ್‌, ಡೆಲ್ಲಿಯಲ್ಲಿ ತಮ್ಮ ಎಜ್ಯುಕೇಶನ್ ಮುಗಿಸಿದರು. ಬಳಿಕ ಅವರು ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ಪ್ರಾಜೆಕ್ಟ್‌ಗೆ ಪುರುಷ ಮಾಡೆಲ್ ಆಗಿ ಸಹಿ ಮಾಡಿದರು. 1994ರಲ್ಲಿ ಅವರು ವರ್ಷದ ವ್ಯಕ್ತಿ ಬಿರುದು ಪಡೆದು, ಸದ್ಯದಲ್ಲೇ ಭಾರತದ ಸೂಪರ್ ಮಾಡೆಲ್ ಆಗಿ ಹೊರಹೊಮ್ಮಿದರು. 

ಕೇರಳದ ಜನರ ಬಗ್ಗೆ ಮತ್ತೆ ಮತ್ತೆ ಯಾಕೆ ಹೀಗೇ ಹೇಳ್ತಿದಾರೆ ಅಲ್ಲು ಅರ್ಜುನ್; ಅದರಲ್ಲೇನಿದೆ ಮರ್ಮ?

ಮುಂದೆ ರಾಜೀವ್ ರೈ ಅವರು ನಟ ಮಾಡೆಲ್ ಅರ್ಜುನ್ ರಾಂಪಾಲ್ ಅವರನ್ನು ವೀಡಿಯೋ ಸಾಂಗ್ ಒಂದಕ್ಕೆ ಆಯ್ಕೆ ಮಾಡಿಕೊಂಡು ಬಳಿಕ ತಮ್ಮದೇ ಸಿನಿಮಾ 'ಪ್ಯಾರ್ ಇಶ್ಕ್‌ ಔರ್ ಮೊಹಾಬ್ಬತ್. ಈ ಸಿನಿಮಾ ಒಂದು ಮಟ್ಟಕ್ಕೆ ಸಕ್ಸಸ್ ಕಂಡು, ಅರ್ಜುನ್ ರಾಂಪಾಲ್ ಅವರು ಮಾಡೆಲ್‌ ಪಟ್ಟದಿಂದ ನಟ ಪಟ್ಟಕ್ಕೆ ಜಿಗಿದರು. ಆ ಚಿತ್ರದ ಮೂಲಕ ಅವರು ಹಲವು ಆಫರ್‌ಗಳನ್ನೂ ಪಡೆದರು. ಮೋಕ್ಷ ಚಿತ್ರದ ಶೂಟಿಂಗ್ ವೇಳೆಯಲ್ಲಿ ನಟ ಅರ್ಜುನ್ ರಾಂಪಾಲ್ ಅವರಿಗೆ ಬೇರೆ ಯಾವುದೇ ಆದಾಯದ ಮೂಲ ಇಲ್ಲದಿರುವುದರಿಂದ ಅವರು ತಮ್ಮ ರೂಂ ಬಾಡಿಗೆ ಕಟ್ಟಲು ಸಹ ಪರದಾಡಬೇಕಾಯ್ತು. 

ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್‌ ಕೊಟ್ಟ ಸಾಯಿ ಪಲ್ಲವಿ!

ಅಂಧೇರಿಯ ಪಶ್ಚಿಮ ಭಾಗದಲ್ಲಿದ್ದ ನಟ ರಾಂಪಾಲ್ ಅವರ ಕೋಣೆಯ ಮಾಲೀಕರಾದ ಸರ್ದಾರ್‌ಜಿ ಅವರು ಒಳ್ಳೆಯ ವ್ಯಕ್ತಿಯಾಗಿದ್ದು ಬಾಡಿಗೆ ತಡವಾದರೂ ಹಿಂಸೆ ಕೊಡದೇ ಅವರಿಗೆ ಸಮಯಾವಕಾಶ ನೀಡಿ ಸಹಕರಿಸಿದರಂತೆ. ಎಲ್ಲರಿಗೂ ಇಂಥ ಓನರ್ ಸಿಗಬೇಕು ಎಂದಿದ್ದಾರೆ ನಟ ಅರ್ಜುನ್ ರಾಂಪಾಲ್.

ಕೇರಳದ ಜನರ ಬಗ್ಗೆ ಮತ್ತೆ ಮತ್ತೆ ಯಾಕೆ ಹೀಗೇ ಹೇಳ್ತಿದಾರೆ ಅಲ್ಲು ಅರ್ಜುನ್; ಅದರಲ್ಲೇನಿದೆ ಮರ್ಮ?

2002ರಲ್ಲಿ ಅರ್ಜುನ್ ರಾಂಪಾಲ್ ನಟನೆಯ 'ಆಂಖೇನ್ (Aankhen) ಹಿಟ್ ದಾಖಲಿಸಿದರೂ ಅದು ಅವರ ಸೋಲೋ ನಾಯಕತ್ವದ ಸಿನಿಮಾ ಆಗಿರಲಿಲ್ಲ. ಹೀಗಾಗಿ ಆ ಚಿತ್ರದ ಯಶಸ್ಸಿನ ಎಲ್ಲಾ ಕ್ರೆಡಿಟ್ ನಟ ಅರ್ಜುನ್ ರಾಂಪಾಲ್‌ ಅವರಿಗೆ ದಕ್ಕಲಿಲ್ಲ. ಬಳಿಕ, 2006ರಲ್ಲಿ ಬಾಲಿವುಡ್ ಕಿಂಗ್‌ ಖಾನ್ ನಟ ಖ್ಯಾತಿಯ ನಟ ಶಾರುಖ್ ಖಾನ್ ನಾಯಕತ್ವದ 'ಡಾನ್ (Don)ಚಿತ್ರವು ಅರ್ಜುನ್ ರಾಂಪಾಲ್‌ ಅವರಿಗೆ ಮತ್ತೊಮ್ಮೆ ತೆರೆಯಲ್ಲಿ ಮಿಂಚುವ ಅವಕಾಶ ನೀಡಿತು. ಬಳಿಕ ಬಂದ ಜಿಸ್ಜಿತ್ ಸಿನಿಮಾದ ನಟನೆಗಾಗಿ ಅರ್ಜುನ್‌ ರಾಂಪಾಲ್ ಅವರು ವಿಮರ್ಶಕರ ಮೆಚ್ಚುಗೆ ಗಳಿಸಿದರು. 

ಬಿಗ್ ಬಾಸ್ ಕಪ್‌ ಗೆಲ್ಲದ ನಟಿ ಸಂಗೀತಾ ಶೃಂಗೇರಿ ಅಳೆದೂ ತೂಗಿ ಅದೆಂಥಾ ಮಾತು ಹೇಳ್ಬಿಟ್ರು ನೋಡಿ!

ನಂತರ, ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟನೆಯ 'ಓಂ ಶಾಂತಿ ಓಂ' ಚಿತ್ರವು ಅರ್ಜುನ್ ರಾಂಪಾಲ್ ಅವರಿಗೆ ಮತ್ತೊಮ್ಮೆ ಮರುಜನ್ಮ ನೀಡಿತು. ನಂತರ ಫರಾಹ್‌ ಖಾನ್ ನಟನೆಯ ಚಿತ್ರದ ನೆಗೆಟಿವ್ ರೋಲ್‌ ಕೂಡ ಅರ್ಜುನ್‌ಗೆ ಹೆಸರು ತಂದುಕೊಟ್ಟಿತು. 2008ರಲ್ಲಿ ಅರ್ಜುನ್ ರಾಂಪಾಲ್ ಅವರು ನಟಿಸಿದ 'ರಾಕ್ (Rock)ಚಿತ್ರದ ನಟನೆಗಾಗಿ ಅವರಿಗೆ ನ್ಯಾಷನಲ್ ಅವಾರ್ಡ್ (National Award) ದೊರಕಿತು. ಹೀಗೆ, ಸಾಕಷ್ಟು ಸೋಲುಗಳನ್ನು ಕಂಡು ಒಮ್ಮೆ ಗೆಲುವಿನ ನಗೆ ಕಂಡವರು ನಟ ಅರ್ಜುನ್ ರಾಂಪಾಲ್.

ಬಟ್ಟೆಯಲ್ಲಿ ಕಲ್ಲು ಸುತ್ತಿ ಹೊಡೆದ ನಟಿ ಮೃಣಾಲ್ ಠಾಕೂರ್; ಕೆಲವರ ಬಗ್ಗೆ ಕೆರಳಿ ಕೆಂಡಕಾರಿದ ಚೆಲುವೆ! 

ಒಮ್ಮೆ ಮನೆ ಬಾಡಿಗೆ ಕೊಡಲೂ ಆಗದ ಈ ನಟ ಒಂದು ಸಿನಿಮಾದಲ್ಲಿ 6 ವರ್ಷಗಳಷ್ಟು ಕಾಲ ಸಿಕ್ಕಿಹಾಕಿಕೊಂಡು ಒದ್ದಾಡಿಬಿಟ್ರು. ಬಳಿಕ 13 ಫ್ಲಾಪ್ ಕೊಟ್ಟು, ನಂತರ ನ್ಯಾಷನಲ್ ಅವಾರ್ಡ್‌ ಗೆದ್ದು ಬೀಗಿದ್ರು. ಆದ್ರೆ ಕೊನೆಯದಾಗಿ ನಟಿಸಿದ್ದು ವಿದ್ಯುತ್ ಜಮ್‌ವಾಲಾಸ್ ಕ್ರಾಕ್. (Vidyut Jammwal's Crack)