Asianet Suvarna News Asianet Suvarna News

ನನಗೆ ಗಂಡ ಬೇಡವೇ ಬೇಡ; ಭಾರತಿ ಸಿಂಗ್‌ - ಕರೀನಾ ಕಪೂರ್ ವೈರಲ್ ವಿಡಿಯೋ!

ಗಂಡನಿಗಿಂತ ಆಹಾಯ ಮುಖ್ಯ ಎಂದ ಕರೀನ ಕಪೂರ್. ಮತ್ತೆ ತಾಯಿ ಆಗಬೇಕು ಎನ್ನುವ ಬಯಕೆ ತೋರಿಕೊಂಡ ಭಾರತಿ ಸಿಂಗ್.  

I want to be mom again says Bharati singh in Kareena Kapoor What women want show vcs
Author
First Published Apr 4, 2023, 10:21 AM IST | Last Updated Apr 4, 2023, 10:28 AM IST

ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಿಂದಿ ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಮ್ಮ ಕಾಮಿಡಿ ಮೂಲಕವೇ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ಇದೇ ಮೊದಲ ಭಾರತಿ ಗೆಸ್ಟ್‌ ಆಗಿ ಕರೀನಾ ಕಪೂರ್ ಟಾಕ್‌ ಶೋ What Women Wantನಲ್ಲಿ ಮಾತನಾಡಲು ಬಂದಿದ್ದಾರೆ. ಈ ವೇಳೆ ನಾನು ಮತ್ತೆ ತಾಯಿ ಆಗಬೇಕು ಎನ್ನುವ ಆಸೆ ಹೇಳಿಕೊಂಡಿದ್ದಾರೆ. 

ಭಾರತಿ ತುಂಬಾ ಸಿಂಪಲ್ ಆಂಡ್ ಹಂಬಲ್ ನಟಿ. ಪ್ಯಾಪರಾಜಿಗಳು ಮತ್ತು ಅಭಿಮಾನಿಗಳನ್ನು ತಮ್ಮ ಸ್ನೇಹಿತರ ರೀತಿ ಮಾತನಾಡಿಸುತ್ತಾರೆ. ಹೀಗಾಗಿ ಬಲು ಬೇಗ ಎಲ್ಲರಿಗೂ ಕನೆಕ್ಟ್‌ ಆಗುತ್ತಾರೆ. ದಪ್ಪ ಇದ್ದೀನಿ ತುಂಬಾ ಮಾತನಾಡುತ್ತೀನಿ ಅನ್ನೋ ಯೋಚನೆ ಇಲ್ಲವೇ ಇಲ್ಲ...ಹೀಗಿರುವಾಗ ಭಾರತಿ ಕರೀನಾ ಕಪೂರ್ ಎದುರು ಕುಳಿತುಕೊಂಡು ಮಾತನಾಡಲು ಕೊಂಚ ಯೋಚನೆ ಮಾಡುತ್ತಿದ್ದರು, ತುಂಬಾ ನಾಚಿಕೆ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 

ಉರ್ಫಿ ರೀತಿ ಮೈ ತೋರಿಸಿಕೊಂಡು ಓಡಾಡೋಕೆ ಧೈರ್ಯ ಇಲ್ಲ: ಟಾಂಗ್ ಕೊಟ್ಟ ಕರೀನಾ ಕಪೂರ್

ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿರುವ ಪ್ರೋಮೋದಲ್ಲಿ ಭಾರತಿ ತಮ್ಮ ತ್ವಚೆ ಮತ್ತು ಹೇಗೆ ಕಾಣಿಸುತ್ತೀನಿ ಅನ್ನೋ ಯೋಚನೆ ತುಂಬಾನೇ ಇತ್ತು ಆ ಯೋಚನೆ ಬರುವುದು ಕರೀನಾ ಕಪೂರ್ ಫೋಟೋ ನೋಡಿದಾಗ ಎಂದು ಹೇಳಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಕರೀನಾ ರೆಡಿಯಾಗಿರುವ ಫೋಟೋವನ್ನು ನೋಡಿದೆ ಆಗ ನಾನು ರೆಡಿಯಾಗುತ್ತಿದ್ದೆ. ಏನಪ್ಪಾ ಇದು ನನ್ನ ತ್ವಚೆ ಹೀಗಿದೆ ಎಂದು ಯೋಚನೆ ಮಾಡುತ್ತಿದ್ದೆ' ಎಂದು ಭಾರತಿ ಹಾಸ್ಯ ಮಾಡಿದ್ದಾರೆ. ಅಲ್ಲದೆ ಕರೀನಾ ಸಿಕ್ಕಾಪಟ್ಟೆ ಪಾರ್ಟಿಗಳಿಗೆ ಹೋಗುತ್ತಾರೆ ಎಂದು ಕಾಲೆಳೆದಿದ್ದಾರೆ. 

ಎಲ್ಲಿ ನೋಡಿದರೂ ಕರೀನಾ ಬಾಂಬ್ ಲಡ್ಕಿ ರೀತಿ ರೆಡಿಯಾಗಿ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಪಾರ್ಟಿ ಮಾಡುತ್ತಾರೆ. ನೀವು ಫೋಟೋ ನೋಡಿರೆ ಟೂತ್‌ಪಿನ್‌ನ ಮೇಲೆ ಚೆರಿ ಇರುತ್ತದೆ ಎಷ್ಟು ಐಷಾರಾಮಿ ಎನ್ನುತ್ತಾರೆ. ಆಗ ಕರೀನಾ ಹೌದು ನಾವೆಲ್ಲಾ ಕ್ಲಾಸ್ ಹಿಡಿದುಕೊಂಡು ಪಾರ್ಟಿಯಲ್ಲಿ ಸುಮ್ಮನೆ ಮಾತನಾಡುವವರು ಎಂದಿದ್ದಾರೆ'. ತಕ್ಷಣವೇ ಭಾರತಿ ನಾವು ಪಂಜಾಬಿಗಳು 3 ರಿಂದ 4 ಗ್ಲಾಸ್ ಕುಡಿದಿಲ್ಲ ಅಂದ್ರೆ ಸಮಾಧಾನ ಆಗಲ್ಲ. ಬಾಲ್ಯದಿಂದಲೂ ನಾನು ತುಂಬಾ ದಪ್ಪಗಿರುವೆ ಎಷ್ಟು ದಪ್ಪ ಇದ್ದೆ ಅಂದ್ರೆ ತಾಯಿ ಹೊಟ್ಟೆಯಲ್ಲಿ ಜಾಗ ಸಾಲದೆ ಹೊರ ನುಗ್ಗಿಕೊಂಡು ಬಂದೆ' ಎಂದಿದ್ದಾರೆ ಭಾರತಿ. 

ಮಗುವಿಗೆ ಜನ್ಮ ನೀಡಿ 12 ದಿನಕ್ಕೆ ಕೆಲಸಕ್ಕೆ ಮರಳಿದ ಭಾರತಿ ಸಿಂಗ್ ಭಾವುಕ

ಭಾರತಿ ಸಿಂಗ್ ಸಿಕ್ಕಾಪಟ್ಟೆ ಫುಡ್ಡಿ ಅಂತ. 'ಕರೀನಾ ನೀನು ನನಗೆ ಒಂದು ಪ್ರಶ್ನೆ ಕೇಳಬಹುದು ಗಂಡ ಅಥವಾ ಆಹಾರ ಯಾವುದನ್ನು ಬಿಟ್ಟು ಇರಬಹುದು ಎಂದು. ನಾನು ಗಂಡ ಎನ್ನುವೆ ಏಕೆಂದರೆ ಆಹಾರ ಇಲ್ಲದೆ ನಾನು ಜೀವನ ಮಾಡಲ್ಲ' ಎನ್ನುವ ಹೇಳಿಕೆ ವೈರಲ್ ಆಗಿದೆ. ಕರೀನಾ ಎಲ್ಲಾ ವೆಡ್‌ ಹೇರ್‌ ಮತ್ತು ಗ್ಲಾಸಿ ಮೇಕಪ್ ಧರಿಸಿಕೊಂಡು ಫೋಸ್ ಕೊಟ್ಟರೆ ನನಗೂ ಆಸೆ ಆಗುತ್ತೆ. ಮರುಳಿನ ಮೇಲೆ ಮಲಗಿಕೊಂಡು ಫೋಸ್ ಕೊಡಬೇಕು ಆಗ ಇರಿ ಇರಿ ಎಂದು ಬಿಲ್ಡ್‌ ತೆಗೆದುಕೊಳ್ಳಬೇಕು. ಆದರೆ ನಾನು ಮತ್ತೆ ತಾಯಿ ಆಗಬೇಕು ಅನ್ನೋ ಆದೆ ಏಕೆಂದರೆ ಆ ಫೇಸ್‌ನ ನಾನು ತುಂಬಾ ಎಂಜಾಯ್ ಮಾಡಿರುವೆ' ಎಂದು ಭಾರತಿ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios