ಬಾಲಿವುಡ್ ಖ್ಯಾತ ನಿರೂಪಕಿ ಭಾರತಿ ಸಿಂಗ್ ಮಗುವಿಗೆ ಜನ್ಮ ನೀಡಿ 12 ದಿನಕ್ಕೆ ಕೆಲಸಕ್ಕೆ ಮರಳಿದ್ದಾರೆ. ಪುಟ್ಟ ಕಂದನನ್ನು ಬಿಟ್ಟು ಕೆಲಸಕ್ಕೆ ಬಂದ ಭಾರತಿ ಸಿಂಗ್ ಭಾವುಕರಾಗಿದ್ದಾರೆ. ಭಾರತಿ ಸಿಂಗ್ ಕೆಲಸದ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಾಮಿಡಿ ಕ್ವೀನ್, ಡಾನ್ಸರ್, ನಿರೂಪಕಿ ಭಾರತಿ ಸಿಂಗ್(Bharti Singh) ಮತ್ತು ಹರ್ಷ್ ಲಿಂಬಾಚಿಯಾ(Haarsh) ದಂಪತಿ ಏಪ್ರಿಲ್ 3ರಂದು ಗಂಡು ಮಗುವನ್ನು(baby boy) ಸ್ವಾಗತಿಸಿದ್ದರು. ಈ ಬಗ್ಗೆ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡು ಗಂಡು ಮಗುವನ್ನು ಸ್ವಾಗತಿಸಿರುವುದಾಗಿ ಹೇಳಿದ್ದರು. ಅಭಿಮಾನಿಗಳು ಮತ್ತು ಸ್ನೇಹಿತರು ಭಾರತಿ ಸಿಂಗ್ ಹರ್ಷ್ ದಂಪತಿಗೆ ಶುಭಾಶಯ ತಿಳಿಸಿದ್ದರು.

ಇದೀಗ ಮಗುವಿಗೆ ಜನ್ಮ ನೀಡಿ 12 ದಿನಕ್ಕೆ ಕೆಲಸಕ್ಕೆ ಮರಳಿದ್ದಾರೆ. ಪುಟ್ಟ ಕಂದನನ್ನು ಬಿಟ್ಟು ಕೆಲಸಕ್ಕೆ ಬಂದ ಭಾರತಿ ಸಿಂಗ್ ಭಾವುಕರಾಗಿದ್ದಾರೆ. ಭಾರತಿ ಸಿಂಗ್ ಸದ್ಯ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಖತ್ರಾ ಖತ್ರಾ ಶೋ ನಡೆಸಿಕೊಡುತ್ತಿದ್ದಾರೆ. ಶುಕ್ರವಾರ ಕೆಲಸಕ್ಕೆ ಮರಳಿರುವ ಭಾರತಿ ಸಿಂಗ್ ಪಾಪರಾಜಿಗಳ ಕ್ಯಾಮರಾಗೆ ಸರೆಯಾಗಿದ್ದಾರೆ. ಭಾರತಿ ಸಿಂಗ್ ಕೆಲಸದ ಬದ್ಧತೆ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರು ಭಾರತಿ ಸಿಂಗ್ 'ನಾನು ಇಂದು ತುಂಬಾ ಅಳುತ್ತಿದ್ದೆ. ಮಗುವಿಗೆ ಕೇವಲ 12 ದಿನಗಳಾಗಿದೆ. ಆದರೆ ಕೆಲಸವು ಮುಖ್ಯ' ಎಂದು ಹೇಳಿದ್ದಾರೆ.

ಭಾರತಿ ಸಿಂಗ್ ಬದಲಿಗೆ ಸುರಭಿ ಚಂದನಾ ಶೋ ಹೋಸ್ಟ್ ಮಾಡಿದ್ದರು. ಇದೀಗ ಮತ್ತೆ ಭಾರತಿ ಸಿಂಗ್ ಹಿಂದಿರುಗಿರುಗಿರುವುದು ಅಭಿಮಾನಿಗಳಿಗೆ ಸಂತಸ ಮೂಡಿದೆ. ಅಂದಹಾಗೆ ಸಿಂಗ್ ತನ್ನ ಮಗುವಿನ ಫೋಟೋವನ್ನು ಇನ್ನು ಶೇರ್ ಮಾಡಿಲ್ಲ. ಇತ್ತೀಗೆ ಆಸ್ಪತ್ರೆಯಿಂದ ಹೊರಬರುತ್ತಿರುವಾಗಿ ಭರತಿ ಪತಿ ಹರ್ಷ್ ಮಗುವನ್ನು ಎತ್ತಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಕೆಲಸ ರಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಭಾರತಿ ಸಿಂಗ್ ಮಗುವಿಗೆ ಜನ್ಮ ನೀಡುವವರೆಗೂ ಕೆಲಸ ಮಾಡಿದ್ದರು. ಗರ್ಭಿಣಿ ಭಾರತಿ ಸಿಂಗ್ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಗನ ನಿಕ್‌ ನೇಮ್‌ ಬಹಿರಂಗ ಪಡಿಸಿದ ಕಾಮಿಡಿಯನ್‌ Bharti singh

ಭಾರತಿ ಸಿಂಗ್ ಅನೇಕ ವರ್ಷಗಳಿಂದ ಹಿಂದಿ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅತ್ಯಂತ ಜನಪ್ರಿಯ ಶೋಗಳನ್ನು ತುಂಬಾ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ.

View post on Instagram

ಭಾರತಿ ಸಿಂಗ್-ಹರ್ಷ್ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೇಗೆ?

ಭಾರತಿ ಸಿಂಗ್ ಮತ್ತು ಹರ್ಷ್ ಇಬ್ಬರು ಮದುವೆಗೆ ಮೊದಲು ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟ್‌ ಮಾಡುತ್ತಿದ್ದರು. ಮೊದಲು ಸ್ನೇಹಿತರಾಗಿದ್ದ ಇವರ ಸಂಬಂಧ ನಂತರ ಅದು ಪ್ರೀತಿಗೆ ತಿರುಗಿತು. ರಿಯಾಲಿಟಿ ಶೋ ಕಾಮಿಡಿ ಸರ್ಕಸ್‌ನಲ್ಲಿ ಇಬ್ಬರೂ ಮೊದಲು ಭೇಟಿಯಾದರು. ಭಾರತಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಸೇರಿದರು, ಹರ್ಷ್ ಚಿತ್ರಕಥೆಗಾರರಾಗಿದ್ದರು. ಈ ಕಾರ್ಯಕ್ರಮದ ವೇಳೆ ಇಬ್ಬರೂ ಸ್ನೇಹಿತರಾದರು.

ಗಂಡು ಮಗುವಿಗೆ ಜನ್ಮ ನೀಡಿದ ಹಾಸ್ಯ ನಟಿ ಭಾರತಿ ಸಿಂಗ್

ಒಂದು ವರ್ಷದ ಗೆಳೆತನದ ನಂತರ ಹರ್ಷ್ ಭಾರತಿಯನ್ನು ಇಷ್ಟಪಡಲಾರಂಭಿಸಿದರು. ಒಂದು ದಿನ ಹರ್ಷ ಭಾರತಿಗೆ ಪ್ರಪೋಸ್ ಮಾಡಿದರು. ಆದರೆ, ಅದು ನಿಜವೋ ಅಥವಾ ತಮಾಷೆಯೋ ಎಂದು ಭಾರತಿಗೆ ಅರ್ಥವಾಗಿರಲಿಲ್ಲವಂತೆ. ದಪ್ಪಗಿದ್ದ ಭಾರತಿ, ಹರ್ಷ್ ಅಂತ ವ್ಯಕ್ತಿ ಪ್ರಪೋಸ್ ಮಾಡ್ತಾರೆ, ತೆಳ್ಳಗಿರುವ ವ್ಯಕ್ತಿಯನ್ನು ಮದುವೆ ಆಗುತ್ತೇನೆ ಎಂದು ಯಾವಾಗಲು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದರು.

ಭಾರತ್ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಅವರು ಗೋವಾದಲ್ಲಿ 5 ದಿನಗಳ ಮದುವೆಯ ಸಮಾರಂಭ ನಡೆದಿತ್ತು. ಅನೇಕ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.