Asianet Suvarna News Asianet Suvarna News

ಕನ್ನಡದಲ್ಲಿ ನಟಿಸಲು ಇಷ್ಟ, ಯಶ್ ಅತಿಥ್ಯ ಅತ್ಯುತ್ತಮ: ದುಲ್ಖರ್‌ ಸಲ್ಮಾನ್‌

ಕನ್ನಡದಲ್ಲಿ ಅನೇಕ ಒಳ್ಳೊಳ್ಳೆ ಸಿನಿಮಾಗಳು ಬಂದಿವೆ. ಅನೇಕ ಅದ್ಭುತ ನಟರಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸೋದಕ್ಕೆ ನನಗೆ ಇಷ್ಟಇದೆ.’ ಮಲಯಾಳಂ ಸೂಪರ್‌ ಸ್ಟಾರ್‌ ದುಲ್ಖರ್‌ ಸಲ್ಮಾನ್‌ ಸ್ಯಾಂಡಲ್‌ವುಡ್‌ ಕುರಿತಾದ ಪ್ರಶ್ನೆಗೆ ಹೀಗೆ ಉತ್ತರ ನೀಡಿದ್ದಾರೆ.

I Want to Act in Kannada Movies Says Dulquer Salmaan gvd
Author
First Published Feb 1, 2023, 10:43 AM IST

‘ಕನ್ನಡದಲ್ಲಿ ಅನೇಕ ಒಳ್ಳೊಳ್ಳೆ ಸಿನಿಮಾಗಳು ಬಂದಿವೆ. ಅನೇಕ ಅದ್ಭುತ ನಟರಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸೋದಕ್ಕೆ ನನಗೆ ಇಷ್ಟಇದೆ.’ ಮಲಯಾಳಂ ಸೂಪರ್‌ ಸ್ಟಾರ್‌ ದುಲ್ಖರ್‌ ಸಲ್ಮಾನ್‌ ಸ್ಯಾಂಡಲ್‌ವುಡ್‌ ಕುರಿತಾದ ಪ್ರಶ್ನೆಗೆ ಹೀಗೆ ಉತ್ತರ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಪ್ರಶ್ನೋತ್ತರದಲ್ಲಿ ಒಂದು ಗಂಟೆ ಕಾಲ ಅವರು ಫ್ಯಾನ್ಸ್‌ ಜೊತೆ ಹರಟಿದರು. ಈ ವೇಳೆ ಕನ್ನಡ ಚಿತ್ರರಂಗದ ಬಗೆಗೂ ಪ್ರಶ್ನೆಗಳು ಹರಿದುಬಂದವು. ‘ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೆಲ್ಲ ನಟಿಸಿದ್ದೀರಿ. 

ಕನ್ನಡ ಸಿನಿಮಾದಲ್ಲಿ ನಟಿಸೋ ಸಾಧ್ಯತೆ ಇದೆಯಾ?’ ಅನ್ನೋ ಪ್ರಶ್ನೆಗೆ ಉತ್ತರಿಸಿದ ದುಲ್ಖರ್‌, ‘ಕನ್ನಡ ಸಿನಿಮಾಗಳಲ್ಲಿ ನಟಿಸೋದಕ್ಕೆ ಆಸಕ್ತಿ ಇದೆ’ ಎಂದಿದ್ದಾರೆ. ‘ಯಶ್‌ ಅವರ ಬಗ್ಗೆ ಏನ್‌ ಹೇಳ್ತೀರಾ?’ ಅಂದಾಗ ಯಶ್‌ ಮೈಸೂರಿನಲ್ಲಿ ತಮ್ಮ ತಂಡಕ್ಕೆ ನೀಡಿದ ಸತ್ಕಾರವನ್ನು ದುಲ್ಖರ್‌ ಸ್ಮರಿಸಿಕೊಂಡರು. ‘ಯಶ್‌ ವಿನಯವಂತ ಮತ್ತು ಬೆಸ್ಟ್‌ ಹೋಸ್ಟ್‌. ನಾವು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದಾಗ ನನಗೆ ಮತ್ತು ನಮ್ಮಿಡೀ ತಂಡಕ್ಕೆ ಒಳ್ಳೆ ಊಟ ಕೊಟ್ಟು ಅವರು ಸತ್ಕರಿಸಿದ ರೀತಿಯನ್ನು ಮರೆಯಲಾರೆ. ರಾಕಿಂಗ್‌ ಸ್ಟಾರ್‌ಗೆ ತುಂಬು ಪ್ರೀತಿ’ ಎಂದು ದುಲ್ಖರ್‌ ಉತ್ತರಿಸಿದರು.

ಪತ್ನಿಗೆ ದುಲ್ಕರ್ ಸ್ವೀಟ್ ವಿಶ್; ಬಿಳಿ ಕೂದಲು, ಮಗಳ ಸ್ಕೂಲ್‌, ಹೊಸ ಮನೆ....ವೈರಲ್ ಪೋಸ್ಟ್‌

ನೆಟ್ಟಿಗರಿಗೆ ಟಾಂಗ್: ಸಾಮಾನ್ಯವಾಗಿ ದುಲ್ಕರ್ ಸಲ್ಮಾನ್ ಏನೇ ಮಾಡಿದ್ದರೂ ವೈರಲ್ ಆಗುತ್ತದೆ. ಮೊದಲ ಸಲ ಪಬ್ಲಿಕ್ ಕಾಮೆಂಟ್‌ಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. 'ನಾನು ಏನೇ ಮಾಡಿದ್ದರು ಜನರು ಕಾಮೆಂಟ್ ಮಾಡುತ್ತಾರೆ. ನಾನು ಯಾವ ರೀತಿ ಸಿನಿಮಾ ಮಾಡಬೇಕು ಯಾರ ಜೊತೆ ಮಾಡಬೇಕು ಹೇಗಿರಬೇಕು ಎಂದು ಬಿಟ್ಟಿ ಸಲಹೆ ನೀಡಲು ಮುಂದಿರುತ್ತಾರೆ. ಉದಾಹರಣೆ ಕೊಡಬೇಕು ಅಂದ್ರೆ ಈ ವರ್ಷ ನಾಲ್ಕು ಭಾಷೆ ಸಿನಿಮಾಗಳಲ್ಲಿ ನಟಿಸಿರುವೆ. ಅವರ ಪ್ರಕಾರ ಒಂದೇ ಸಲ ನಾಲ್ಕು ದೋಣಿಗಳ ಮೇಲೆ ಕಾಲು ಇಡಬಾರದಂತೆ ಮುಳುಗಿ ಬಿಡುತ್ತೀನಿ ಅಂತ. ಎಲ್ಲಿ ಯಾವಾಗ ಏನು ಮಾಡಬೇಕು ಎಂದು ನನಗೆ ಗೊತ್ತಿದೆ' ಎಂದು ದುಲ್ಕರ್ ಮಾತನಾಡಿದ್ದಾರೆ. 

ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿರುವುದಕ್ಕೆ ಕಾರಣವೇನು ಎಂದು ದುಲ್ಕರ್ ರಿವೀಲ್ ಮಾಡಿದ್ದಾರೆ. 'ಪ್ರೀತಿ ಮತ್ತು ಪ್ಯಾಷನ್‌ನಿಂದ ನಾನು ಸಿನಿಮಾಗಳಲ್ಲಿ ನಟಿಸುತ್ತಿರುವೆ. ನಾನು ಯಾವ ಜೆನರೇಷನ್‌ನಲ್ಲಿ ಇದ್ದೀನಿ ಅಂದ್ರೆ ಪ್ರತಿಯೊಬ್ಬರೂ ಅನುಭವ ಬಯಸುತ್ತಾರೆ. ಎಷ್ಟು ಲಕ್ಷ್ಯೂರಿ ಇದೆ ಅಂದ್ರೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಾವು ಪ್ರಯಾಣ ಮಾಡಿಕೊಂಡು ನಾವು ಇಷ್ಟ ಪಟ್ಟ ರೀತಿಯಲ್ಲಿ ಜೀವನ ಮಾಡಬಹುದು, ಡಾಕ್ಯೂಮೆಂಟ್ ಮಾಡಬಹುದು ಏನ್ ಏನೋ ಮಾಡಬಹುದು. ಇದನ್ನು ನಾನು ಸಿನಿಮಾ ಮೂಲಕ ಮಾಡಲು ಇಷ್ಟ ಪಡುತ್ತೀನಿ ಇದು ಬೇರೆ ಭಾಷೆಗಳಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಮೂಲಕ ಸಾಧ್ಯ. ಇದರಿಂದ ಬೇರೆ ರೀತಿ ಕಲ್ಚರಲ್‌ ಎಕ್ಸಪೀರಿಯನ್ಸ್‌ ಕೂಡ ಸಿಗುತ್ತದೆ' ಎಂದು ದುಲ್ಕರ್ ಹೇಳಿದ್ದಾರೆ.

ನಾನು ಚಿತ್ರರಂಗದಲ್ಲಿಯೇ ಉಳಿಯುತ್ತೇನೆಂದು ಅಂದುಕೊಂಡಿರಲಿಲ್ಲ; ದುಲ್ಕರ್ ಸಲ್ಮಾನ್

ಸಿನಿಮಾ ಬಿಡ್ತಾರಾ?: ದುಲ್ಕರ್ ಸಲ್ಮಾನ್ ಸಂದರ್ಶನವೊಂದರಲ್ಲಿ ತಮ್ಮ ಚಲನಚಿತ್ರಗಳ ಬಗ್ಗೆ 'ಅಸಹ್ಯ' ವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು, ನಾನು ಆಗಾಗ್ಗೆ ನನ್ನ ಬಗ್ಗೆ ಸಾಕಷ್ಟು ನಕಾರಾತ್ಮಕ ಲೇಖನಗಳನ್ನು ಓದುತ್ತೇನೆ ಎಂದು ದುಲ್ಕರ್ ಸಲ್ಮಾನ್ ಒಪ್ಪಿಕೊಂಡರು.ಕೆಲವರು ನಾನು ನಟನೆಯನ್ನು ತ್ಯಜಿಸಬೇಕು. ನಾನು ಇಲ್ಲಿ ಇರಬಾರದು ಎಂದು ಹೇಳಿದ್ದಾರೆ.ಇದು ನನ್ನ ಕಾಲ್‌  ಅಲ್ಲ. ಇದು ನಿಜವಾಗಿಯೂ ಹಾರ್ಶ್‌.ನಾನು ನನ್ನ ವೃತ್ತಿಜೀವನದಲ್ಲಿ ಹಲವಾರು ಚಲನಚಿತ್ರಗಳನ್ನು ಮಾಡಿದ್ದೇನೆ, ಆದರೆ ಇದು ನಿಜವಾಗಿಯೂ ಪಾತ್ರ ಮತ್ತು ಅ  ನಾನು ನಿರೂಪಿಸುವ ಪಾತ್ರವು ತುಂಬಾ ವಿಶಿಷ್ಟ, ನೀವು ಯಾರೊಬ್ಬರ ಮನಸ್ಸಿನಲ್ಲಿ ಇಣುಕಿ ನೋಡುತ್ತಿರುವಂತೆ ತೋರುತ್ತಿದೆ. ನನಗೆ, ಇದು ಸಂಪೂರ್ಣವಾಗಿ ಹೊಸ ಅನುಭವವಾಗಿದೆ.ಹಿಂದೆಂದಿಗಿಂತಲೂ ಈಗ ಈ ಪ್ರದೇಶದ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿರುವುದರಿಂದ ದಕ್ಷಿಣದ ಪ್ರದರ್ಶಕರು ಮತ್ತು ನಿರ್ದೇಶಕರು ಈಗ ವ್ಯಾಪಕವಾದ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ.‌' ಎಂದು ನಟ ಬಹಿರಂಗಪಡಿಸಿದರು.

Follow Us:
Download App:
  • android
  • ios