ಮುಂಬೈ (ನ.15) ಭಾರತದಲ್ಲಿಯೇ ಖ್ಯಾತಿ ಪಡೆದುಕೊಂಡಿರುವ ಸೋನು ನಿಗಮ್ ಯಾರಿಗೆ ತಾನೆ ಗೊತ್ತಿಲ್ಲ.  ಕನ್ನಡ, ತಮಿಳು, ಬಂಗಾಳಿ, ಗುಜುರಾತಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕಮಾಲ್ ತೋರಿದ್ದಾರೆ.

ಗಾಯಕ ಸಂದರ್ಶನವೊಂದರಲ್ಲಿ ತಮ್ಮ ಪುತ್ರನ ಬಗ್ಗೆ ಮಾತನಾಡಿದ್ದಾರೆ.  ಭಕ್ತಿಗೀತೆ, 'ಈಶ್ವರ್ ಕಾ ವೋ ಸಚ್ಚಾ ಬಂಡಾ' ಪ್ರಚಾರದ ವೇಳೆ ಮಾತನಾಡಿದ್ದಾರೆ.  ನಿಮ್ಮ ಪುತ್ರ ಮುಂದೆ ಗಾಯಕರಾಗುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ತೆರೆ ಮೇಲೆ ಅದೃಷ್ಟ ಪರೀಕ್ಷೆಗೆ ಹೋಗಿ ಫ್ಲಾಪ್ ಆದ ಸಿಂಗರ್ಸ್

ನಿಜವಾಗಿ ಹೇಳಬೇಕು ಎಂದರೆ ನನ್ನ ಮಗ ಗಾಯಕನಾಗುವುದು ನನಗೆ ಬೇಕಿಲ್ಲ, ಅದರಲ್ಲಿಯೂ ಆತ  ಭಾರತದಲ್ಲಿ ವಾಸಮಾಡುತ್ತಿಲ್ಲ, ದುಬೈನಲ್ಲಿ ವಾಸಮಾಡುವ ಆಲೋಚನೆಯಲ್ಲಿ ಇದ್ದಾನೆ ಎಂದಿದ್ದಾರೆ.

ಸಿಂಗರ್ ಪುತ್ರನಾಗಿ ಜನ್ಮತಾಳಿದರೂ ಆತನಿಗೆ ಯುಎಇಯ ಪ್ರಸಿದ್ಧ ಆಟ ಪೋರ್ಟ್ ನೈಟ್ ನಲ್ಲಿ ವಿಶೇಷ ಆಸಕ್ತಿ ಇದೆ. ಆತ ಕೂಡ ಅಷ್ಟೆ ಚೆನ್ನಾಗಿ ಆಡುತ್ತಾನೆ. ಆತನಿಗೆ ಆಯ್ಕೆ ಸ್ವಾತಂತ್ರ್ಯ ಇದೆ ಎಂದಿದ್ದಾರೆ.

ನೀವು ಎಷ್ಟಯ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಲೈಕ್ ಪಡೆದುಕೊಂಡಿರಿ, ಖರೀದಿ ಮಾಡಿ ಯಾವುದನ್ನು ಗಳಿಸಿಕೊಂಡಿದ್ದೀರಿ ಎಂದು ನೆನಪಿಸಿಕೊಂಡರೆ ನಿದ್ರೆ ಬರುವುದಿಲ್ಲ. ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಮುಖ್ಯ ಎಂದು ವಿವರಣೆ ನೀಡಿದ್ದಾರೆ.