Asianet Suvarna News Asianet Suvarna News

ಜನರ ಕಷ್ಟ ನೋಡಿಯೂ ನೋಡದಂತೆ ಸುಮ್ಮನೆ ಇರಲಾರೆ; ಬಹುಭಾಷಾ ನಟ ಸೋನು ಸೂದ್

ನಟ ಸೋನು ಸೂದ್ ಪಂಜಾಬ್‌ನ ಮೋಗಾದಲ್ಲಿ ಜನಿಸಿದರು. ಅವರ ತಂದೆ ಬಿಸಿನೆಸ್ ಮ್ಯಾನ್ ಮತ್ತು ತಾಯಿ ಟೀಚರ್. ಅವರು ನಾಗಪುರದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

I cant neglect society problem always says Indian actor Sonu Sood srb
Author
First Published Dec 14, 2023, 2:52 PM IST

ಭಾರತದ ಬಹುಭಾಷಾ ನಟ ಸೋನು ಸೂದ್ ಎಲ್ಲರಿಗೂ ಚಿರಪರಿಚಿತ. 1999ರಲ್ಲಿ ತಮ್ಮ ಸಿನಿಮಾ ಕೆರಿಯರ್ ಪ್ರಾರಂಭಿಸಿದ ನಟ ಸೋನು ಸೂದ್, ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಪಂಜಾಬಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದವರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಹಲವರಿಗೆ ಸಹಾಯಹಸ್ತ ಚಾಚುವ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ ನಟ ಸೋನು ಸೂದ್. ತಮ್ಮ ಟ್ರಸ್ಟ್ ಮೂಲಕ ಭಾರತದಲ್ಲಿ ಹಲವರಿಗೆ ಅಗತ್ಯವಿರುವ ಸಹಾಯ ಮಾಡುತ್ತಿರುವ ಸೋನು ಸೂದ್ ನಟನೆಗಿಂತ ಹೆಚ್ಚಾಗಿ ಇತ್ತೀಚೆಗೆ ಸಮಾಜಮುಖಿ ಕೆಲಸಗಳ ಮೂಲಕ ಪ್ರಸಿದ್ಧಿ ಪಡೆಯುತ್ತಿದ್ದಾರೆ. 

ನಟ ಸೋನು ಸೂದ್ ಪಂಜಾಬ್‌ನ ಮೋಗಾದಲ್ಲಿ ಜನಿಸಿದರು. ಅವರ ತಂದೆ ಬಿಸಿನೆಸ್ ಮ್ಯಾನ್ ಮತ್ತು ತಾಯಿ ಟೀಚರ್. ಅವರು ನಾಗಪುರದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಡಿಗ್ರಿ ಬಳಿಕ ಅವರು ಕೆಲಸ ಹುಡುಕಿಕೊಂಡು ಮುಂಬೈಗೆ ಹೋದರು. ಅವರು ಮನೆಯಿಂದ ಮುಂಬೈಗೆ ಹೋದಾಗ ಅವರು 5500 ರೂ. ತೆಗೆದುಕೊಂಡು ಹೋಗಿದ್ದರಂತೆ. ಮುಂಬೈನಲ್ಲಿ ಸಿಕ್ಕ ಮೊಟ್ಟಮೊದಲ ಮಾಡೆಲಿಂಗ್ ಚಾನ್ಸ್‌ನಲ್ಲಿ ಅವರು ರೂ. 500 ಗಳಿಸಿ ಅದನ್ನು ತಮ್ಮ ಜೀನ್ಸ್‌ಗಾಗಿ ಬಳಸಿಕೊಂಡರಂತೆ. 

ಒಂಬತ್ತನೇ ಕ್ಲಾಸ್ ಓದುತ್ತಿದ್ದಾಗ ಅಪ್ಪ ಕಲಿಸಿದ ಪಾಠ, ಜೀವ ಇರೋವರೆಗೂ ಮರೆಯಲಾರೆ; ಅನುಪಮ್ ಖೇರ್

ಸೋನು ಸೂದ್ 1999ರಲ್ಲಿ ಮೊಟ್ಟಮೊದಲು ನಟಿಸಿದ ಸಿನಿಮಾ ತಮಿಳಿನ 'ಖಲ್ಲಝಾಗರ್'. ಬಳಿಕ 2002ರಲ್ಲಿ ಬಾಲಿವುಡ್‌ನಲ್ಲಿ 'ಶೇಹಾದ್ ಇ ಅಜಾಮ್' ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಬಾಲಿವುಡ್ ಜರ್ನಿ ಪ್ರಾರಂಭಿಸಿದರು. ದಬಾಂಗ್, ಜೋಧಾ ಅಕ್ಬರ್, ಗಬ್ಬರ್ ಈಸ್ ಬ್ಯಾಕ್, ಸಿಂಬಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ 'ವಿಷ್ಣುವರ್ಧನ' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ನಟಿ ಅನುಷ್ಕಾ ಶರ್ಮಾ ನಟನೆಯ ಸುಪ್ರಸಿದ್ಧ ಸಿನಿಮಾ 'ಅರುಂಧತಿ'ಯಲ್ಲಿ ಇದೇ ಸೋನು ಸೂದ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. 

ಕಂಫರ್ಟ್ ಬಯಸುವ ನಟಿಯಲ್ಲ, ತಲೆ ತಗ್ಗಿಸಿ ಕೆಲಸ ಮಾಡುವುದಷ್ಟೇ ಗೊತ್ತು; ಪ್ರಿಯಾಂಕಾ ಚೋಪ್ರಾ

ಒಟ್ಟಿನಲ್ಲಿ, ನಟ ಸೋನು ಸೂದ್ ತಮ್ಮ ನಟನೆಯ ಜತೆಜತೆಯಲ್ಲಿ ತಮಗೆ ಹೆಸರು, ಕೀರ್ತಿ ಹಾಗೂ ಒಳ್ಳೆಯ ಜೀವನ ಕೊಟ್ಟ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಂತೂ ನಟ ಸೋನು ಸೂದ್ ಮಾಡಿರುವ ಸಹಾಯ ಹಾಗೂ ದಾನ-ಧರ್ಮಗಳಿಗೆ ಲೆಕ್ಕವಿಲ್ಲ. ಅಗತ್ಯವಿರುವವರಿಗೆ ತಮ್ಮ ಟ್ರಸ್ಟ್ ಮೂಲಕ ಸತತ ಹಲವು ವರ್ಷಗಳಿಂದ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಇತ್ತೀಚೆಗೆ ತಮ್ಮ ಸಿನಿಮಾ ನಟನೆ ವಿಷಯದಲ್ಲಿ ಸಾಕಷ್ಟು ಚೂಸಿ ಆಗಿದ್ದಾರೆ ಎನ್ನಬಹುದು. ಏನೇ ಇರಲಿ, ನಟ ಸೋನು ಸೂದ್ ನಟನೆ ಜತೆಗೆ ಮಾನವೀಯ ಮೌಲ್ಯಗಳಿಗೂ ಹೆಚ್ಚಿನ ಒತ್ತು ಕೊಡುತ್ತಿರುವುದು ಮೆಚ್ಚಬೇಕಾದ ಸಂಗತಿ. 

Follow Us:
Download App:
  • android
  • ios