Asianet Suvarna News Asianet Suvarna News

ಮತ್ತೆ ಬಾಲಿವುಡ್ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಲು ನನಗಿಷ್ಟವಿಲ್ಲ; ಪ್ರಿಯಾಂಕಾ ಚೋಪ್ರಾ

ನಾನು ಬಾಲಿವುಡ್ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಮಾತ್ರವಲ್ಲ ಸ್ಟಾರ್‌ ನಟಿಯಾಗಿ ಬೆಳೆದ ಮೇಲೆ ಕೂಡ ಇಲ್ಲಿ ಸಾಕಷ್ಟು ರಾಜಕೀಯವನ್ನು ನೋಡಿದ್ದೇನೆ.

I dont want to fall again in bollywood politics says priyanka chopra srb
Author
First Published Dec 18, 2023, 5:54 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಂತಿಂಥವರಲ್ಲ. ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದವರು. ಆದರೆ, ಇತ್ತೀಚೆಗೆ ಕೆಲವು ಸಂದರ್ಶನಗಳಲ್ಲಿ ನಟಿ ಪ್ರಿಯಾಂಕಾ ತಾವು ಬೆಳೆದು ಬಂದ ದಾರಿಯ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ. ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ಕೆರಿಯರ್ ಶುರು ಮಾಡಿದ್ದು ಬಾಲಿವುಡ್‌ನಲ್ಲಿ. ನಿಕ್ ಜೊನಾಸ್ ಅವರನ್ಜು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ತೊರೆದರು ಎಂದೇ ಹಲವರು ಅಂದುಕೊಂಡಿದ್ದಾರೆ. ಆದರೆ ಸತ್ಯ ಸಂಗತಿ ಏನು?

ನಟಿ ಪ್ರಿಯಾಂಕಾ ಈಗ ಅಮೆರಿಕದ ಸೊಸೆ, ಅಲ್ಲಿ ಇರುವುದು ಸರಿಯಾಗಿಯೇ ಇದೆ. ಆದರೆ, ಅವರು ಬಾಲಿವುಡ್ ಚಿತ್ರಗಳನ್ನುಈಗಲೂ ಒಪ್ಪಿ ನಟಿಸಬಹುದಲ್ಲ ಎಂಬುದು ಹಲವರ ಅನಿಸಿಕೆ. ಏಕೆಂದರೆ, ಈಗ ಟ್ರೆಂಡ್ ಬದಲಾಗಿದೆ. ಮದುವೆ ಬಳಿಕವೂ ಕೂಡ ನಟಿಯರು ನಟನೆ ಮುಂದುವರಿಸುತ್ತಿದ್ದಾರೆ. ಐಶ್ವರ್ಯ ರೈ, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾ ಸೇರಿದಂತೆ ಹಲವರು ಮದುವೆ ಬಳಿಕ ಕೂಡ ಬಾಲಿವುಡ್‌ನಲ್ಲಿ ನಟನೆ ಮಾಡುತ್ತಲೇ ಇದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಮಾತ್ರ ಸದ್ಯ ಯಾವುದೇ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಾಕೆ ಎಂಬುದು ಹಲವರ ಪ್ರಶ್ನೆ!

ನಟಿ ಪ್ರಿಯಾಂಕಾ ಹೇಳುವಂತೆ 'ನಾನು ಬಾಲಿವುಡ್ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಮಾತ್ರವಲ್ಲ ಸ್ಟಾರ್‌ ನಟಿಯಾಗಿ ಬೆಳೆದ ಮೇಲೆ ಕೂಡ ಇಲ್ಲಿ ಸಾಕಷ್ಟು ರಾಜಕೀಯವನ್ನು ನೋಡಿದ್ದೇನೆ. ಒಮ್ಮೆ ಮೂಲೆಗುಂಪು ಮಾಡುವುದು, ಇನ್ನೊಮ್ಮೆ ಅವಕಾಶ ಕೊಟ್ಟು ಕರೆಯುವುದು ಯಾವತ್ತೂ ನಡೆಯುತ್ತಲೇ ಇತ್ತು, ಕೆಲವರನ್ನು ಸಂತೃಪ್ತಿ ಪಡಿಸಲು ನಾವು ಕೆಲಸ ಮಾಡಬೇಕು ಎಂಬುದು ನನಗೆ ಮನದಟ್ಟಾಗಿ ಹೋಗಿತ್ತು. ಆದರೆ, ನನಗೆ ನನ್ನದೇ ಆದ ಕೆಲವು ಕನಸುಗಳು, ಪ್ರಾಜೆಕ್ಟ್‌ಗಳು ಇದ್ದವು. ಫೌಂಡೇಶನ್‌ಗಳ ಮೂಲಕ ಹಲವರಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ಕಾರಣಕ್ಕೆ ನಾನು ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದೆ. 

ಆದರೆ, ಈಗ ನನಗೆ ಅಂತಹ ಅನಿವಾರ್ಯತೆ ಇಲ್ಲ. ನಾನು ನನ್ನದೇ ಸ್ಕೂಲ್ ನಡೆಸುತ್ತಿದ್ದೇನೆ. ಕೆಲವು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಗಂಡ ನಿಕ್ ಜೊನಾಸ ಅವರ ಪ್ರಾಜೆಕ್ಟ್‌ಗಳಲ್ಲಿ ಕೂಡ ನನ್ನನ್ನು ತೊಡಗಿಸಿಕೊಂಡು ನನ್ನಿಂದ ಸಾಧ್ಯವಾಗುವ ಸಹಾಯ ಮಾಡುತ್ತೇನೆ. ಅದು ಬಿಟ್ಟರೆ ಬಾಲಿವುಡ್‌ಗೆ ಬಂದು ಅವಕಾಶ ಕೇಳುವ ಯಾವುದೇ ಆಸಕ್ತಿಯಾಗಲೀ ಉದ್ದೇಶವಾಗಲಿ ನನಗಿಲ್ಲ. ಬಾಲಿವುಡ್‌ ರಾಜಕೀಯದಿಂದ ನಾನು ಬಹಳಷ್ಟು ಬಳಲಿದ್ದೇನೆ. ಈಗ ಮತ್ತೆ ಅದರಲ್ಲಿ ಸಿಕ್ಕಿಹಾಕಿಕೊಳ್ಳಲು ನನಗೆ ಯಾವುದೇ ಅಗತ್ಯವಿಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

Follow Us:
Download App:
  • android
  • ios