ಭಾಗ್ಯನ ಬಿಟ್ಟು ಬಂದು, ಶ್ರೇಷ್ಠಾ ಮನೇಲಿ ಪಾತ್ರೆ ತೊಳೆಯೋದು ತಾಂಡವ್‌ಗೆ ಬೇಕಿತ್ತಾ?
ತಾಂಡವ್ ಹೊಸ ಹೆಂಡತಿ ಶ್ರೇಷ್ಠಾ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾನೆ. ಆಕೆ ಲ್ಯಾಪ್ ಹಿಡಿದು ರಾಣಿಯಂತೆ ಕುಳಿತು ಆಫೀಸ್ ಕೆಲಸ ಮಾಡುತ್ತಿದ್ದಾಳೆ. ಸಿಂಕ್‌ನಲ್ಲಿ ಸಿಕ್ಕಾಪಟ್ಟೆ ನೀರು ತುಂಬಿಕೊಂಡಿದ್ದು, ಕೆಟ್ಟ ಸ್ಮೆಲ್ ಬರುತ್ತಿದೆ.
ಭಾಗ್ಯಲಕ್ಷ್ಮೀಗೆ ಕೋಪ ಬಂದಿದೆ. ಆಕೆ ಯಾರ ಜತೆಯೂ ಮಾತನಾಡುತ್ತಿಲ್ಲ. ಆದರೆ ಅದು ಗಮನಕ್ಕೆ ಬಂದಿರುವುದು ಆಕೆಯ ಮಗ ಗುಂಡಣ್ಣನಿಗೆ. ಸ್ಕೂಲಿಗೆ ರೆಡಿಯಾಗಿ ಹೊರಟ ಗುಂಡಣ್ಣನಿಗೆ ಯಾವತ್ತಿನಂತೆ ಅಮ್ಮ ಭಾಗ್ಯಾ ಮುತ್ತು ಕೊಡುತ್ತಿಲ್ಲ. ಮಾತೂ ಕೂಡ ಆಡುತ್ತಿಲ್ಲ. ಅದನ್ನು ಕಂಡು ಬೇಸರಗೊಂಡ ಮಗ ಅಮ್ಮನನ್ನು ಪ್ರಶ್ನಿಸುತ್ತಾನೆ. 'ಯಾಕಮ್ಮಾ, ನೀನು ಇವತ್ತು ಮಾತಾಡ್ತಾ ಇಲ್ಲ. ಯಾವತ್ತೂ ನನ್ನ ಸ್ಕೂಲಿಗೆ ಕಳಿಸೋ ಮೊದ್ಲು ನಗುನಗುತಾ ಕಳಿಸಿಕೊಡ್ತಾ ಇದ್ದೆ. ಮುತ್ತು ಕೂಡ ಕೊಡ್ತಾ ಇದ್ದೆ. ಆದ್ರೆ ಇವತ್ತು ಯಾಕಮ್ಮಾ ಮಾತೂಆಡ್ತಾ ಇಲ್ಲ' ಎನ್ನುವನು. ಅದನ್ನು ಮನೆಯವರೆಲ್ಲರೂ ಗಮನಿಸುವರು.
ಆದರೆ ಭಾಗ್ಯ ಅವನ ಮಾತಿಗೆ ಲಕ್ಷ್ಯ ಕೊಡುತ್ತಿಲ್ಲ. ಮಗನ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಅವನಿಗೆ ಒಂದು ಮಾತೂ ಕೂಡ ಹೇಳದೇ, ಬಾ ಎಂದು ಕೂಡ ಕರೆಯದೇ ಹಾಗೇ ಹೊರಡುವಳು. ಅದನ್ನು ನೋಡಿ ಮಗ ಅಮ್ಮ ಭಾಗ್ಯಾಳ ಹಿಂದೆ ಬಂದು ಆಕೆಯ ಕಾಲು ಹಿಡಿದುಕೊಳ್ಳುವನು. ಮನಸ್ಸಿನಲ್ಲಿ ಮಗನ ಬಗ್ಗೆ ಕರುಣೆ ಅನುಕಂಪ ಮೂಡಿದರೂ ಭಾಗ್ಯಾ
ಆ ಕ್ಷಣದಲ್ಲಿ ಏನೂ ಮಾತನಾಡುವುದಿಲ್ಲ. ಅದನ್ನೆಲ್ಲ ಆಗಷ್ಟೇ ಪಕ್ಕದಲ್ಲಿ ಬಂದು ನಿಂತಿರುವ ಕುಸುಮಾ ಗಮನಿಸುತ್ತಲೇ ಇದ್ದಾಳೆ. ಆದರೆ, ಆಕೆ ಬಳಿಯೂ ಈ ಪ್ರಶ್ನೆಗೆ ಉತ್ತರವಿಲ್ಲ.
ಇತ್ತ ತಾಂಡವ್ ಹೊಸ ಹೆಂಡತಿ ಶ್ರೇಷ್ಠಾ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾನೆ. ಆಕೆ ಲ್ಯಾಪ್ ಹಿಡಿದು ರಾಣಿಯಂತೆ ಕುಳಿತು ಆಫೀಸ್ ಕೆಲಸ ಮಾಡುತ್ತಿದ್ದಾಳೆ. ಸಿಂಕ್‌ನಲ್ಲಿ ಸಿಕ್ಕಾಪಟ್ಟೆ ನೀರು ತುಂಬಿಕೊಂಡಿದ್ದು, ಕೆಟ್ಟ ಸ್ಮೆಲ್ ಬರುತ್ತಿದೆ. ಅದನ್ನು ನೋಡಿ ರೋಸಿ ಹೋದ ತಾಂಡವ್, 'ಶ್ರೇಷ್ಠಾ, ಏನಮ್ಮಾ ಇದು? ಸಿಂಕ್‌ನಿಂದ ಗಬ್ಬು ನಾಥ ಬರುತ್ತಿದೆ, ನೀರು ತುಂಬಿಕೊಂಡಿದೆ. ಇದೇನು ಸಿಂಕಾ ಇಲ್ಲಾ ಸ್ವಿಮ್ಮಿಂಗ್ ಫೂಲಾ?' ಎಂದು ಕೇಳುವನು.
ಕಿಚನ್ ಅಂದ್ರೆ ಅವೆಲ್ಲಾ ಕಾಮನ್ ಅಲ್ವಾ ತಾಂಡವ್. ತರಕಾರಿ ಸಿಪ್ಪೆ ಬಿದ್ದಿರುತ್ತೆ, ನೀರು ಕಟ್ಕೊಂಡಿರುತ್ತೆ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಬೇಕು' ಎನ್ನವಳು. ಅದನ್ನು ಕೇಳಿ ಇನ್ನೂ ರೋಸಿ ಹೋದ ತಾಂಡವ್ 'ನಮ್ಮನೆಲ್ಲಿ ಹೀಗೆಲ್ಲಾ ಆಗಲ್ಲ. ಅಮ್ಮ ಮತ್ತೆ ಭಾಗ್ಯಾ ತುಂಬಾ ನೀಟ್ ಆಗಿ ಇಟ್ಕೊಂಡಿರ್ತಾರೆ' ಎನ್ನವನು ತಾಂಡವ್. ಈ ಮಾತು ಕೇಳಿ ಶ್ರೇಷ್ಠಾಗೆ ತುಂಬಾ ಕೋಪ ಬರುವುದು. ಕೋಪದಿಂದ ಕುದಿಯುತ್ತಿದ್ದರೂ ಮನಸ್ಸಿನಲ್ಲಿ 'ಏನೂ ಮಾಡೋಕಾಗಲ್ಲ, ಇನ್ನು ಸ್ವಲ್ವ ದಿನ ಇದನ್ನೆಲ್ಲಾ ನಾನು ಸಹಿಸಿಕೊಳ್ಳಲೇಬೇಕು' ಎಂದುಕೊಂಡ ಶ್ರೇಷ್ಠಾ 'ನಿಮ್ಮನೆಲ್ಲಿ ಯಾರೂ ಕೆಲಸಕ್ಕೆ ಹೋಗಲ್ಲ ಅಲ್ವಾ?' ಎನ್ನವಳು.
ತಾಂಡವ್ ಪರಿಸ್ಥಿತಿ ಈಗ ತುಂಬಾ ಕೆಟ್ಟದಾಗಿದೆ. ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತೆ ಆಗಿದೆ. ಅತ್ತ ವಾಪಸ್ ಮನೆಗೂ ಹೋಗಲಾರ, ಇತ್ತ ಶ್ರೇಷ್ಠಾ ಜತೆ ಖುಷಿಯಿಂದ ಸಂಸಾರವನ್ನೂ ಮಾಡಲಾರ. ಅನೈತಿಕ ಸಂಬಂಧಕ್ಕೆ ಸರಿಯಾದ ಬೆಲೆಯನ್ನೇ ತೆರುತ್ತಿದ್ದಾನೆ ತಾಂಡವ್ ಎಂದು ನೆಟ್ಟಿಗರು ಭಾಗ್ಯಾ ಪರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಮುಂದೇನು ಆಗಲಿದೆ? ಭಾಗ್ಯಾ ಗತಿ ಏನು? ಶ್ರೇಷ್ಠಾ ಮನೆಯಲ್ಲಿ ತಾಂಡವ್ ಕೆಲಸದವನಂತೆ ಇರುತ್ತಾನಾ? ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ನೋಡಬೇಕು.