Asianet Suvarna News Asianet Suvarna News

ನಾನು ದೇಹವಲ್ಲ, ಮನಸ್ಸೂ ಅಲ್ಲ ಅಂದ್ರು ನಟ ರಜನಿಕಾಂತ್; ಹಾಗಿದ್ರೆ ಅವ್ರು ಯಾರು, ಹೇಳಿದ್ದಾರೆ ನೋಡಿ

ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ನಟ ರಜನಿಕಾಂತ್ ಅವರು ಆಧ್ಯಾತ್ಮಿಕ ಸಾಧನೆ ಮೂಲಕ ಅನಾರೋಗ್ಯದಿಂದ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ ಎನ್ನಬಹುದು. ಅಂದಹಾಗೆ, ನಟ ರಜನಿಕಾಂತ್ ಸದ್ಯಕ್ಕೆ 'ಲಾಲ್ ಸಲಾಮ್' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

I am the port of this universal power says Super star Rajinikanth srb
Author
First Published Feb 11, 2024, 4:07 PM IST

ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ (Rajinikanth) ಅವರು ಆಧ್ಯಾತ್ಮದ (Spiritual)ದಾರಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಅವರು ಪ್ರತಿವರ್ಷ ಒಮ್ಮೆ ಹಿಮಾಲಯಕ್ಕೆ ತಮ್ಮ ಆಧ್ಯಾತ್ಮ ಸಾಧನೆಗಾಗಿ ಹೋಗುತ್ತಾರೆ, 15-20 ದಿನಗಳು ಅಲ್ಲಿದ್ದು ಬರುತ್ತಾರೆ ಎನ್ನಲಾಗಿದೆ. ನಟ ರಜನಿಕಾಂತ್ ಅವರು ಆ ಬಗ್ಗೆ ಮಾತನಾಡುವುದು ಕಡಿಮೆಯಾದರೂ ಅವರು ಮಾತನಾಡುವಾಗ ಕೆಲವೊಮ್ಮೆ ಆದ್ಯಾತ್ಮದ ಬಗ್ಗೆ ಮಾತನಾಡುತ್ತಾರೆ, ತಮಗೆ ತಿಳಿದಿದ್ದನ್ನು ಬಹಿರಂಗವಾಗಿ ಹೇಳುತ್ತಾರೆ. ಅಂತಹುದೇ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.

ನಟ ರಜನಿಕಾಂತ್ ಅವರು ಸಭೆಯೊಂದರಲ್ಲಿ ಮಾತನಾಡುತ್ತ 'ತಿಳಿದುಕೊಳ್ಳುವುದು ಬೇರೆ , ಅರ್ಥ ಮಾಡಿಕೊಳ್ಳುವುದು ಬೇರೆ, ಅರಿವು ಹೊಂದುವುದು ಬೇರೆ' ಎಂದಿದ್ದಾರೆ ನಟ ರಜನಿಕಾಂತ್. ಆಧ್ಯಾತ್ಮಕ್ಕೆ ಸಂಬಂಧಪಟ್ಟು ಮಾತನಾಡುತ್ತಿದ್ದ ನಟ ರಜನಿಕಾಂತ್ ಅವರು 'ನಾನು ಈ ದೇಹವಲ್ಲ, ನಾನು ಈ ಮನಸ್ಸು ಅಲ್ಲ, ನಾನು ಈ ವಿಶ್ವದ ಶಕ್ತಿಯ ಒಂದು ಭಾಗ. ಎಂದರೆ, ನಾನು ದೇವರ ಒಂದು ಭಾಗ' ಎಂದು ಅರ್ಥವಾದರೆ ಇಲ್ಲಿ ತಿಳಿದುಕೊಳ್ಳುಲು ಮತ್ತೇನೂ ಇಲ್ಲ' ಎಂದಿದ್ದಾರೆ ನಟ ರಜನಿಕಾಂತ್. 

RRR ಯಶಸ್ಸಿನ ಬಳಿಕ ರಾಮ್ ಚರಣ್ ಮಾತಿನ ಧಾಟಿಯೇ ಬದಲಾಯ್ತು; ಇದೇನಿದು ಜಾದೂ ಗುರೂ..!

ವಿಶ್ವದ ಶಕ್ತಿ ಬೇರೆ ಅಲ್ಲ, ನಾನು ಬೇರೆ ಅಲ್ಲ, ನಾನು ಅದೇ ಶಕ್ತಿಯ ಒಂದು ಚೂರು ಎಂದು ತಾವು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾಗಿ ನಟ ರಜನಿಕಾಂತ್ ಹೇಳಿದ್ದಾರೆ ಎನ್ನಬಹುದು. ರಜನಿಕಾಂತ್ ಅವರು ಕನ್ನಡ ಚಿತ್ರಗಳ ಮೂಲಕ ವೃತ್ತಿ ಜೀವನದಲ್ಲಿ ಸಖತ್ ಮಿಂಚಿರುವ ನಟ. ತಮಿಳು ಚಿತ್ರಗಳ ಮೂಲಕ ಹಾಗೂ ಅದರ ಬೇರೆಬೇರೆ ಭಾಷೆಗಳ ಡಬ್ಬಿಂಗ್ ಸಿನಿಮಾಗಳ ಮೂಲಕ ನಟ ರಜನಿಕಾಂತ್ ಅವರು ಭಾರತದ ಲೆವಲ್‌ನಲ್ಲಿ ಸೂಪರ್ ಸ್ಟಾರ್ ಪಟ್ಟ ಪಡೆದವರು. ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸುತ್ತಿರುವ ನಟ ರಜನಿಕಾಂತ್ ಅವರು ಕಳೆದೊಂದು ದಶಕದಿಂದ ಆಧ್ಯಾತ್ಮದ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!

ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ನಟ ರಜನಿಕಾಂತ್ ಅವರು ಆಧ್ಯಾತ್ಮಿಕ ಸಾಧನೆ ಮೂಲಕ ಅನಾರೋಗ್ಯದಿಂದ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ ಎನ್ನಬಹುದು. ಅಂದಹಾಗೆ, ನಟ ರಜನಿಕಾಂತ್ ಸದ್ಯಕ್ಕೆ 'ಲಾಲ್ ಸಲಾಮ್' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರು 'ತಲೈವರ್ 171' ಚಿತ್ರದ ಶೂಟಿಂಗ್ ಮುಗಿಸಿದ್ದು ಅದು ಸದ್ಯವೇ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಡಾ ರಾಜ್‌ ಮಗನಾಗಿ ನೀವ್ಯಾಕೆ 'ಸ್ಮೋಕಿಂಗ್-ಡ್ರಿಂಕಿಂಗ್' ದೃಶ್ಯಗಳಲ್ಲಿ ನಟಿಸ್ತೀರಾ; ಸ್ಪಷ್ಟ ಉತ್ತರ ಕೊಟ್ರು ನಟ ಶಿವಣ್ಣ!

ಕಳೆದ ವರ್ಷ ನಟ ರಜನಿಕಾಂತ್ ಹಾಗು ತಮನ್ನಾ ಭಾಟಿಯಾ ಜೋಡಿ ನಟನೆಯ 'ಜೈಲರ್' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ತಲೈವರ್ 171 (Thalaiver171) ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಹಾಗೂ ಹಲವು ಘಟಾನುಘಟಿ ಸ್ಟಾರ್ ನಟರು ಕೂಡ ನಟಿಸುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ನಟ ರಜನಿಕಾಂತ್ ಚಾರ್ಮ್ ಹಾಗು ಬೇಡಿಕೆ ಸ್ವಲ್ಪವೂ ಕುಂದಿಲ್ಲ, ಸ್ಟಾರ್ ಡಮ್ ಕುಗ್ಗಿಲ್ಲ.

ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್‌ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!

Follow Us:
Download App:
  • android
  • ios