ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!

ಕನ್ನಡ ಚಿತ್ರರಂಗದಲ್ಲಿ ಅವರು ಮಾಡಿದ ಅನುಪಮ ಸೇವೆಗಾಗಿ ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಟ ವಿಷ್ಣುವರ್ಧನ್ ಅವರು ಡಾ ವಿಷ್ಣುವರ್ಧನ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅಂಥ ವಿಷ್ಣುವರ್ಧನ್ ತಮ್ಮ 59ನೆಯ ವಯಸ್ಸಿನಲ್ಲಿ 30 ಡಿಸೆಂಬರ್ 2009 ರಂದು ನಿಧನರಾಗಿದ್ದಾರೆ.

Actor Vishnuvardhan escapes from death once in Muthina Haara Movie shooting srb

ಕನ್ನಡದ ಮೇರು ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಅದೆಂಥಹ ಅತ್ಯದ್ಭುತ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. 'ನಾಗರಹಾವು' ಚಿತ್ರದಿಂದ ಪ್ರಾರಂಭವಾದ ವಿಷ್ಣುವರ್ಧನ್ (Vishnuvardhan) ಸಿನಿಪಯಣ 'ಆಪ್ತರಕ್ಷಕ' ವರೆಗೆ ಬರೋಬ್ಬರಿ 200 ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿನ ಸಂಚಾರ ಮಾಡಿದೆ. ಒಂದಕ್ಕಿಂತ ಇನ್ನೊಂದು ವಿಭಿನ್ನ ಎಂಬಂತಿರುವ ಅವರ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಿಸುವ ಮೂಲಕ ನಟ ವಿಷ್ಣುವರ್ಧನ್ ಮೇರು ನಟ ಬಿರುದು ಸಂಪಾದಿಸಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಅವರು ಮಾಡಿದ ಅನುಪಮ ಸೇವೆಗಾಗಿ ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಟ ವಿಷ್ಣುವರ್ಧನ್ (Dr Vishnuvardhan) ಅವರು ಡಾ ವಿಷ್ಣುವರ್ಧನ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅಂಥ ವಿಷ್ಣುವರ್ಧನ್ ತಮ್ಮ 59ನೆಯ ವಯಸ್ಸಿನಲ್ಲಿ 30 ಡಿಸೆಂಬರ್ 2009 (30 December 2009) ರಂದು ಇಹಲೋಕ ತ್ಯಜಿಸಿರುವುದು ಗೊತ್ತೇ ಇದೆ. ಆದರೆ ಅದಕ್ಕೂ ಮೊದಲೇ ನಟ ವಿಷ್ಣುವರ್ಧನ್ ಸಾವಿನ ಸಮೀಪಕ್ಕೆ ಹೋಗಿ ವಾಪಸ್ ಬಂದಿದ್ದಾರೆ. ಅದು ಕೆಲವೇ ಜನರಿಗೆ ಗೊತ್ತಿದೆ ಅಷ್ಟೇ!. ಹಾಗಿದ್ದರೆ ಅದು ಯಾವಾಗ? ಎಲ್ಲಿ, ಏನಾಗಿತ್ತು? 

ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್‌ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!

ವಿಷ್ಣುವರ್ಧನ್ ಹಾಗು ಸುಹಾಸಿನಿ (Vishnuvardhan and Suhasini) ಜೋಡಿಯ 'ಮುತ್ತಿನ ಹಾರ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಒಂದು ದುರ್ಘಟನೆ ನಡೆದಿತ್ತು. ರಾಜಸ್ಥಾನದ ಮರಳುಗಾಡು ಸೇರಿದಂತೆ ದೇಶದ ಹಲವು ಕಡೆ ಮುತ್ತಿನ ಹಾರ ಚಿತ್ರದ ಶೂಟಿಂಗ್ ನಡೆದಿತ್ತು. ನಾಯಕ ನಟ ವಿಷ್ಣುವರ್ಧನ್ 'ಹೆಲಿಕ್ಯಾಪ್ಟರ್‌'ನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಅದೇನು ಯಡವಟ್ಟಾಯಿತೋ ಏನೋ, ವಿಷ್ಣುವರ್ಧನ್ ಹೆಲಿಕ್ಯಾಪ್ಟರ್‌ನಿಂದ ಕೆಳಗೆ ಬಿದ್ದುಬಿಟ್ಟರು. ಅಲ್ಲಿದ್ದವರೆಲ್ಲಾ ವಿಷ್ಣು ಅವರು ಸತ್ತೇ ಹೋದರು ಎಂದೇ ಭಾವಿಸಿದ್ದರಂತೆ. ಅಷ್ಟು ಮೇಲಿಂದ ಬಿದ್ದರೆ ಬದುಕಲು ಅಸಾಧ್ಯವೆಂದೇ ಭಾವಿಸಿ ಎಲ್ಲರೂ ಗಾಬರಿಬಿದ್ದು ನೋಡುತ್ತಿದ್ದರೆ ವಿಷ್ಣುವರ್ಧನ್ ಬಿದ್ದಲ್ಲಿಂದ ನಿಧಾನವಾಗಿ ಎದ್ದು ಬಂದರಂತೆ. 

ಡಾ ರಾಜ್‌ ಮಗನಾಗಿ ನೀವ್ಯಾಕೆ 'ಸ್ಮೋಕಿಂಗ್-ಡ್ರಿಂಕಿಂಗ್' ದೃಶ್ಯಗಳಲ್ಲಿ ನಟಿಸ್ತೀರಾ; ಸ್ಪಷ್ಟ ಉತ್ತರ ಕೊಟ್ರು ನಟ ಶಿವಣ್ಣ!

ಹೆಲಿಕ್ಯಾಪ್ಟರ್‌ನಿಂದ ಬಿದ್ದರೂ ಸಾಯದೇ ಎದ್ದು ಬಂದಿದ್ದು ನೋಡಿ ಅಲ್ಲಿದ್ದವರೆಲ್ಲರೂ ಖುಷಿಯಿಂದ ಕುಣಿದಾಡಿದರಂತೆ. ಅವರು ಸಾವಿನ ಸಮೀಪ ಹೋಗಿ ಪುನರ್ಜನ್ಮ ಪಡೆದು ಬಂದಿದ್ದಾರೆ ಎಂತಲೇ ಎಲ್ಲರೂ ಮಾತನಾಡಿಕೊಂಡರಂತೆ. ಅಂದಿನ ಘಟನೆಯ ಪ್ರತ್ಯಕ್ಷದರ್ಶಿಗಳು, ಯೂನಿಟ್‌ನಲ್ಲಿ ಕೆಲಸ ಮಾಡುತ್ತಿದ್ದವರು  ಹೇಳುವಂತೆ, ಅಂದು ನಡೆದ ಘಟನೆಯಲ್ಲಿ ನಟ ವಿಷ್ಣುವರ್ಧನ್ ಅಕ್ಷರಶಃ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. 

'ನಾನು ದೇವರ ಮಗು' ಎಂದ್ರು ನಟಿ ಸಾಯಿ ಪಲ್ಲವಿ; ಕಕ್ಕಾಬಿಕ್ಕಿಯಾಗ್ಬೇಡಿ, ಕಾರಣ ಇರ್ಬಹುದಾ ನೋಡಿ..!

ಕಾರಣ, ಹಾಗೆ ಬಿದ್ದು ಸಾಯದೇ ಎದ್ದು ಬರುವುದು ಸಾಮಾನ್ಯವಾಗಿ ಸಾಧ್ಯವೇ ಇಲ್ಲ ಎನ್ನಲಾಗಿದೆ. ಆದರೆ ಅಂದು ವಿಷ್ಣು ಸಾವನ್ನು ಗೆದ್ದು ಬಂದಿದ್ದರು. ಅಂದಹಾಗೆ, ಡಾ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ್ದ  ಮುತ್ತಿನ ಹಾರ ಚಿತ್ರವು 12 ಆಗಸ್ಟ್ 1990 ರಂದು (22 August 1990) ಬಿಡುಗಡೆಯಾಗಿತ್ತು. ನಟ ವಿಷ್ಣುವರ್ಧನ್-ಸುಹಾಸಿನಿ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. 

ಅನ್ನ ಕೊಟ್ಟ ಊರಿಗೆ 'ದೊಡ್ಡ ಗಿಫ್ಟ್' ಕೊಡಲು ಪ್ಲಾನ್; ದೊಡ್ಡಣ್ಣನ ಹೃದಯ ಅದೆಷ್ಟು ದೊಡ್ಡದು ..!

Latest Videos
Follow Us:
Download App:
  • android
  • ios