RRR ಯಶಸ್ಸಿನ ಬಳಿಕ ರಾಮ್ ಚರಣ್ ಮಾತಿನ ಧಾಟಿಯೇ ಬದಲಾಯ್ತು; ಇದೇನಿದು ಜಾದೂ ಗುರೂ!
ನಟ ರಾಮ್ ಚರಣ್ ಅವರು ಹಿರಿಯ ತೆಲುಗು ನಟ ಚಿರಂಜೀವಿ ಅವರ ಮಗ. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಮಗಧೀರ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ನಟ ರಾಮ್ ಚರಣ್ ಸಿನಿಮಾ ಹಿನ್ನೆಲೆ ಇದ್ದರೂ ಗೆಲುವು-ಸೋಲು ಎರಡನ್ನೂ ನೋಡಿ ಬೆಳೆಯುತ್ತಿದ್ದಾರೆ.
ತೆಲುಗು ಚಿತ್ರರಂಗದ ಹ್ಯಾಂಡ್‌ಸಮ್ ಹೀರೋಗಳಲ್ಲಿ ಒಬ್ಬರಾದ ನಟ ರಾಮ್ ಚರಣ್ (Ram Charan) ಅವರು ತಮಗೆ ಸಿಕ್ಕ ಯಶಸ್ಸು ಹಾಗೂ ಅದನ್ನು ಕಾಪಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. 'ಸಕ್ಸಸ್ ಸಿಕ್ಕ ಮೇಲೆ ಅದರ ಬಗ್ಗೆ ಯೋಚಿಸಿದಾಗ ನನಗೆ ಒಂದು ವಿಷಯ ಸ್ಪಷ್ಟವಾಗಿದೆ. ಒಂದು ಚಿಕ್ಕ ಕಥೆಯ ಎಳೆಯನ್ನು ಬೆಳೆಸಿ ಸ್ಕ್ರೀನ್ ಪ್ಲೇ ಮಾಡಿ ಮಾಸ್ ಆಡಿಯನ್ಸ್‌ಗೆ ಒಂದು ಸಿನಿಮಾ ಮಾಡಿದಾಗ ಅದು ಹೇಗೆ ಇಡೀ ಸಿನಿಮಾ ಟೀಮ್ ಅನ್ನು ಯಶಸಸ್ಸಿನ ಅಲೆಯಲ್ಲಿ ತೇಲಿಸುತ್ತದೆ ಎಂಬುದು ನನಗೀಗ ಮನವರಿಕೆಯಾಗಿದೆ' ಎಂದಿದ್ದಾರೆ ನಟ ರಾಮ್ ಚರಣ್.
ನಾನು ಮುಂದೊಂದು ದಿನ ನಿರ್ಮಾಪಕನಾಗಿ ಸಿನಿಮಾ ಮಾಡಿದರೆ, ಕಥೆಯನ್ನುಮಾಸ್ ಆಡಿಯನ್ಸ್‌ಗೆ ಇಷ್ಟವಾಗುವ ರೀತಿಯಲ್ಲಿ, ಅಂದರೆ 'ಮಾಸ್ ಸಿನಿಮಾ' ಅಲ್ಲ, ಬದಲಿಗೆ ನಾನು ಹೇಳುವುದು 'ಮಾಸ್ ಆಡಿಯನ್ಸ್'-ಮಾಡುತ್ತೇನೆ. ಸಿನಿಮಾದ ಕಥೆಯನ್ನು ಮೊದಲು ನಾನು ನೋಡುತ್ತೇನೆ. ಅದು ನನಗೆ ಇಷ್ಟವಾದರೆ ಮಾತ್ರ ಅದನ್ನು ಮುಂದುವರೆಸುತ್ತೇನೆ. ಏಕೆಂದರೆ, ಒಮ್ಮೆ ಬಂದ ಸಕ್ಸಸ್ ಎಂಬ ಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಏಕೆಂದರೆ, ಇಲ್ಲಿ ಯಾವುದೂ ಪರಿಶ್ರಮವಿಲ್ಲದೇ ಬರುವುದಿಲ್ಲ' ಎಂದಿದ್ದಾರೆ ನಟ ರಾಮ್ ಚರಣ್.
ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!
ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ನಟ ರಾಮ್ ಚರಣ್ ಅವರು ಹಿರಿಯ ತೆಲುಗು ನಟ ಚಿರಂಜೀವಿ ಅವರ ಮಗ. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಮಗಧೀರ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ನಟ ರಾಮ್ ಚರಣ್ ಸಿನಿಮಾ ಹಿನ್ನೆಲೆ ಇದ್ದರೂ ಗೆಲುವು-ಸೋಲು ಎರಡನ್ನೂ ನೋಡಿ ಬೆಳೆಯುತ್ತಿದ್ದಾರೆ. ರಾಮ್ ಚರಣ್ ನಟನೆಯ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿದ್ದರು ಹಲವು ಸಿನಿಮಾಗಳು ಸೋತಿವೆ. ಆದರೆ, ಅವರು ಯಾವತ್ತೂ ತಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ ಎನ್ನಬಹುದು.
ಅಂದಹಾಗೆ, ನಟ ರಾಮ್ ಚರಣ್ ಹಾಗು ನಟ ಜ್ಯೂನಿಯರ್ ಎನ್‌ಟಿಆರ್ (junior NTR) ಅವರಿಬ್ಬರ ನಟನೆ ಹಾಗೂ ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ತೆರೆಗೆ ಬಂದಿದ್ದ 'ಆರ್‌ಅರ್‌ಅರ್ (RRR)' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿ ಹಲವು ದಾಖಲೆ ಮಾಡಿದೆ. ಅಷ್ಟೇ ಅಲ್ಲ, ಆ ಚಿತ್ರದ ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ 'ನಾಟೂ ನಾಟೂ ಹಾಡಿಗೆ 'ಆಸ್ಕರ್' (Oskar) ಪ್ರಶಸ್ತಿ ಕೂಡ ಲಭಿಸಿದೆ. ಈ ಮೂಲಕ ನಟ ರಾಮ್ ಚರಣ್ ಹಾಗೂ ನಟ ಜ್ಯೂನಿಯರ್ ಎನ್‌ಟಿಆರ್ ಅವರಿಬ್ಬರೂ ಇಂಟರ್‌ನ್ಯಾಷನಲ್ ಹೀರೋಗಳಾಗಿ ಖ್ಯಾತಿ ಪಡೆದಿದ್ದಾರೆ.
ಪುನೀತ್-ಶಿವಣ್ಣ ಜತೆಗಿನ 'ಲಾಸ್ಟ್ ಈವೆಂಟ್' ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಎಂಥಾ ಉತ್ತರ ಕೊಟ್ರು ನೋಡಿ!