Asianet Suvarna News Asianet Suvarna News

ಇದೇ ವರ್ಷ ಗರ್ಲ್‌ಫ್ರೆಂಡ್ ಜೊತೆ ಹೃತಿಕ್ ರೋಷನ್ ಮದುವೆ; ಇಲ್ಲಿದೆ ವಿವರ

ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಈ ವರ್ಷವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Hrithik Roshan likely planning to get married to girlfriend Saba Azad in November 2023 sgk
Author
First Published Mar 3, 2023, 2:40 PM IST

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಹೃತಿಕ್ ಮತ್ತು ಸಬಾ ಅಜಾದ್ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೈ ಕೈಹಿಡಿದು ಓಡಾಡುತ್ತಿದ್ದ ಈ ಜೋಡಿ ಇತ್ತೀಚಿಗಷ್ಟೆ ಸಾರ್ವಜನಿಕವಾಗಿಯೇ ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಇಬ್ಬರೂ ಏರ್ಪೋರ್ಟ್ ನಲ್ಲಿ ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ವೈರಲ್ ವಿಡಿಯೋ ಬೆನ್ನಲ್ಲೇ ಹೃತಿಕ್ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್ ಗ್ರೀಕ್‌ಗಾಡ್ ಮತ್ತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದು ಈ ವರ್ಷವೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಇದಕ್ಕೆ ಕಾರಣವಾಗಿದ್ದು ಒಂದು ಟ್ವೀಟ್. 2023  ನವೆಂಬರ್‌ನಲ್ಲಿ ಹೃತಿಕ್ ರೋಷನ್ ಮದುವೆಯಾಗಲಿದ್ದಾರೆ ಎಂದು ಎನ್ನುವ ಟ್ವೀಟ್ ವೈರಲ್ ಆಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹೃತಿಕ್ ಮತ್ತು ಸಬಾ ಮದುವೆ ವಿಚಾರ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಹೃತಿಕ್ ಅಥವಾ ಸಬಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಇದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಎಲ್ಲರೆದುರೇ ಗರ್ಲ್‌ಫ್ರೆಂಡ್‌ಗೆ ಲಿಪ್‌ ಕಿಸ್ ಕೊಟ್ಟ ಹೃತಿಕ್ ರೋಷನ್; ವಿಡಿಯೋ ವೈರಲ್

ಹೃತಿಕ್ ಕುಟುಂಬದ ಜೊತೆ ಸಬಾ ತುಂಬಾ ಚೆನ್ನಾಗಿದ್ದಾರೆ. ಅಷ್ಟೆಯಲ್ಲದೇ ಹೃತಿಕ್ ಇಬ್ಬರೂ ಮಕ್ಕಳ ಜೊತೆಯೂ ಸಬಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿಯೇ ಹೃತಿಕ್ ಕುಟುಂಬ ಸಬಾ ಅವರನ್ನು ತುಂಬಾ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಕರಣ್ ಜೋಹರ್ ಅದ್ದೂರಿಯಾಗಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಹೃತಿಕ್ ಮತ್ತು ಸಬಾ ಇಬ್ಬರೂ ಹಾಜರಾಗಿದ್ದರು. ಅಲ್ಲಿ ಎಲ್ಲರಿಗೂ ಹೃತಿಕ್ ತನ್ನ ಗರ್ಲ್ಫ್ರೆಂಡ್ ಎಂದು ಸಬಾ ಅವರನ್ನು ಪರಿಚಯಿಸಿದ್ದರು ಎನ್ನಲಾಗಿದೆ. ಅಲ್ಲಿ ತಮ್ಮ ಸಂಬಂಧವನ್ನು ಅಧಿಕೃತ ಗೊಳಿದ್ದರು ಎನ್ನಲಾಗಿದೆ. 

ಹೃತಿಕ್ ಕಾರಣಕ್ಕೆ ಡಾನ್ಸ್ ಮಾಡೋದನ್ನೇ ಬಿಟ್ಟೆ; ಫ್ಯಾಮಿಲಿ ಮ್ಯಾನ್ ಸ್ಟಾರ್ ಮನೋಜ್ ಬಾಜಪಾಯಿ ಶಾಕಿಂಗ್ ಹೇಳಿಕೆ

 ಹೃತಿಕ್ ಬಳಿ ಇರುವ ಸಿನಿಮಾಗಳು 

ಹೃತಿಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಹೃತಿಕ್ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ಕಾಣಿಸಿಕೊಳ್ಳುತ್ತಿದ್ದು ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. 

Follow Us:
Download App:
  • android
  • ios