ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾಗೆ ಲಿಪ್ ಕಿಸ್ ಮಾಡಿದ ವಿಡಿಯೋ ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಲವ್ ಸ್ಟೋರಿ ಈಗಾಗಲೇ ವೈರಲ್ ಆಗಿದೆ. ಇಬ್ಬರೂ ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಹೃತಿಕ್ ಮತ್ತು ಸಬಾ ಅಜಾದ್ ಫೋಟೋಗಳುಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೈ ಕೈಹಿಡಿದು ಓಡಾಡುವ ಈ ಜೋಡಿ ಇದೀಗ ಸಾರ್ವಜನಿಕವಾಗಿಯೇ ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇಬ್ಬರೂ ಏರ್ಪೋರ್ಟ್ ನಲ್ಲಿ ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೃತಿಕ್ ಮತ್ತು ಸಬಾ ಮೊದಲು ರೆಸ್ಟೋರೆಂಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದರು. ಬಳಿಕ ಸದಾ ಒಟ್ಟಿಗೆ ಓಡಾಡುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಸದ್ಯದಲ್ಲೇ ಇಬ್ಬರೂ ಮದುವೆ ಸಹ ಆಗುತ್ತಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಹೃತಿಕ್ ಆಗಲಿ ಅಥವಾ ಸಬಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಏರ್ಪೋರ್ಟ‌ನಲ್ಲಿ ಕಾಣಿಸಿಕೊಂಡಿರುವ ಹೃತಿಕ್ ಮತ್ತು ಗರ್ಲ್‌ಫ್ರೆಂಡ್ ವಿಡಿಯೋ ವೈರಲ್ ಆಗಿದೆ. ಬೀಳ್ಕೊಡಲು ಏರ್ಪೋರ್ಟ್‌ಗೆ ಬಂದಿದ್ದ ಸಬಾ ಅಜಾದ್‌ಗೆ ಹೃತಿಕ್‌ ಕಿಸ್ ಮಾಡಿ ಕಾರಿನಿಂದ ಇಳಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರೂ ಬೇಗ ಮದುವೆಯಾಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸೂಪರ್‌ಸ್ಟಾರ್‌ ಮಾತ್ರವ, ಪರ್ಫೇಕ್ಟ್‌ ಫ್ಯಾಮಿಲಿ ಮ್ಯಾನ್‌ ಹೃತಿಕ್‌ ರೋಷನ್‌

ಹೊಸ ಮನೆ ಖರೀದಿಸಿದ ಹೃತಿಕ್-ಸಬಾ 

ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದು ಹೊಸ ಮನೆ ಸಹ ಖರೀದಿಸಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಸಿಕ್ಕಾಪಟ್ಟೆ ಸಸದ್ದು ಮಾಡಿತ್ತು. ಮನ್ನತ್ ಎನ್ನುವ ಅಪಾರ್ಟ್ಮೆಂಟ್‌ಗೆ ಇಬ್ಬರೂ ಶಿಫ್ಟ್ ಆಗುತ್ತಿದ್ದು, ಈಗಾಗಲೇ ಹೊಸ ಮನೆಯ ನವೀಕರಣ ಕೆಲಸ ಪ್ರಾರಂಭವಾಗಿದ್ದು ಎನ್ನಲಾಗಿದೆ. 3 ಫ್ಲೋರ್ ಇರುವ ಅಪಾರ್ಟ್ಮೆಂಟ್‌ ಅದಾಗಿದ್ದು ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರಂತೆ ಹೃತಿಕ್. ಹೊಸ ಅಪಾರ್ಟ್‌ಮೆಂಟ್‌ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16 ನೇ ಫ್ಲೋರ್ ಡ್ಯುಪ್ಲೆಕ್ಸ್‌ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎಂದರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

View post on Instagram


ಅಬ್ಬಬ್ಬಾ..48ರ ಹರೆಯದಲ್ಲೂ ಹೃತಿಕ್ ರೋಷನ್‌ 8 Pack Abs! ಸೀಕ್ರೆಟ್ ಏನು ?

ಹೃತಿಕ್ ಬಳಿ ಇರುವ ಸಿನಿಮಾಗಳು 

ಹೃತಿಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಹೃತಿಕ್ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ಕಾಣಿಸಿಕೊಳ್ಳುತ್ತಿದ್ದು ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ.