Asianet Suvarna News Asianet Suvarna News

ಇಂಥ ಬಾಯ್‌ಫ್ರೆಂಡ್ ಎಲ್ಲೂ ಸಿಗಲ್ಲ; ಗರ್ಲ್‌ಫ್ರೆಂಡ್ ಚಪ್ಪಲಿ ಹಿಡಿದು ಓಡಾಡಿದ ಹೃತಿಕ್ ರೋಷನ್

ನೀತಾ ಅಂಬಾನಿ ಕಾರ್ಯಕ್ರಮದಲ್ಲಿ  ಹೃತಿಕ್ ರೋಷನ್ ತನ್ನ ಗರ್ಲ್‌ಫ್ರೆಂಡ್ ಸಬಾ ಅಜಾದ್ ಅವರ ಚಪ್ಪಲಿ ಹಿಡಿದು ಓಡಾಡಿದ ಫೋಟೋ ವೈರಲ್ ಆಗಿದೆ.  

Hrithik Roshan Holds His Girl Friend Saba Azad's Heels photo Viral Photo sgk
Author
First Published Apr 4, 2023, 6:20 PM IST | Last Updated Apr 4, 2023, 6:20 PM IST

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎರಡು ದಿನಗಳು ನಡೆದ ಈ ಫ್ಯಾಷನ್ ಈವೆಂಟ್‌ನಲ್ಲಿ ಬಾಲಿವುಡ್‌ ಗಣ್ಯರು ಹಾಗೂ ಹಾಲಿವುಡ್‌ನ ಅನೇಕ ಮಂದಿ ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ದಂಪತಿ ಅಮೆರಿಕಾದಿಂದ ಬಂದಿದ್ದರು. ಅನುಷ್ಕಾ ಶರ್ಮಾ, ಅಲಿಯಾ ಭಟ್, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಐಶ್ವರ್ಯಾ ರೈ, ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಪ್ರತಿಯೊಬ್ಬರು ತಮ್ಮ ಡ್ರೆಸ್ ಹಾಗೂ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನಟ-ನಟಿಯರು ಮಸ್ತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ.  

ಅನೇಕ ಗಣ್ಯರು ಒಂದೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕೆಲವರು ಡಾನ್ಸ್ ಮಾಡಿ ಸುದ್ದಿಯಾದ್ರೆ ಇನ್ನೂ ಕೆಲವರು ವಿವಾದಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಚಪ್ಪಲಿ ಹಿಡಿದು ಓಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು   ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ಜೊತೆ ಎಂಟ್ರಿ ಕೊಟ್ಟಿದ್ದರು. 

ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದರು. ಇಬ್ಬರೂ ನಗುತ್ತಾ ಕ್ಯಾಮರಾ ಮುಂದೆ ನಿಂತರು. ಸಬಾ ಅಜಾದ್ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಹೈ ಹಾಲ್ಸ್ ಹಾಕಿದ್ದರು. ಕಾರ್ಯಕ್ರಮದಲ್ಲಿ ಹೃತಿಕ್ ಗರ್ಲ್‌ಫ್ರೆಂಡ್ ಸಬಾ ಅವರ ಹೈ ಹೀಲ್ಸ್ ಕೈಯಲ್ಲಿ ಹಿಡಿದು ಓಡಾಡಿರುವ ದೃಶ್ಯ ಕ್ಯಾಮರಾಗೆ ಸೆರೆಯಾಗಿದೆ. ಹೃತಿಕ್ ಮತ್ತು ಸಬಾ ಅವರ ರೊಮ್ಯಾಂಟಿಕ್ ಕ್ಷಣಗಳ ಜೊತೆಗೆ ಚಪ್ಪಲಿ ಹಿಡಿದು ಓಡಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಬಾ ಫೋಟೋಗೆ ಪೋಸ್ ನೀಡುತ್ತಿದ್ದರೆ ಹೃತಿಕ್ ಗರ್ಲ್‌ಫ್ರೆಂಡ್ ಹೈ ಹೀಲ್ಸ್ ಹಿಡಿದು ಮಾತನಾಡುತ್ತಾ ನಿಂತಿದ್ದಾರೆ. ಈ ಫೋಟೋ ಅಭಿಮಾನಿಗಳ ಗಮನಸೆಳೆಯುತ್ತಿದೆ. 

'ಡೇಟ್ ನೈಟ್‌'ಗೆ ಆಟೋ ಏರಿದ ಪ್ರಿಯಾಂಕಾ ಚೋಪ್ರಾ; ನೆಚ್ಚಿನ ವ್ಯಕ್ತಿ ಜೊತೆ ಮುಂಬೈ ಸುತ್ತಾಟ

ಹೃತಿಕ್ ಫೋಟೋಗಳನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಹೃತಿಕ್ ಅವರನ್ನು ಹಾಡಿಹೊಗಳುತ್ತಿದ್ದಾರೆ. ವಾವ್ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ತಮ್ಮ ಜೀವನದಲ್ಲೂ ಇಂಥ ವ್ಯಕ್ತಿ ಬೇಕು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇದು ಅತಿಯಾಯ್ತು ಎಂದು ಹೇಳುತ್ತಿದ್ದಾರೆ. 

ಅಭಿಮಾನಿಗಳ ಹೃದಯ ಗೆದ್ದ ಸಲ್ಮಾನ್ ಖಾನ್ ಈ ನಡೆ; ವಿಡಿಯೋ ವೈರಲ್

ಹೃತಿಕ್ ಮತ್ತ ಸಬಾ ಇಬ್ಬರೂ ಇದೇ ವರ್ಷ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಈ ವರ್ಷ ನವೆಂಬರ್ ನಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಈ ಜೋಡಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಸದ್ಯ ಸಂತೋಷವಾಗಿ ಖುಷಿ ಖುಷಿಯಿಂದ ಓಡಾಡಿಕೊಂಡಿದ್ದಾರೆ ಹೃತಿಕ್ ಮತ್ತು ಸಬಾ. 

Latest Videos
Follow Us:
Download App:
  • android
  • ios