Asianet Suvarna News Asianet Suvarna News

'ಕಾಂತಾರ' ನೋಡಿ ಹೊಗಳಿದ ಹೃತಿಕ್ ರೋಷನ್; ಹಿಗ್ಗಾಮುಗ್ಗಾ ಟ್ರೋಲ್

'ಕಾಂತಾರ' ನೋಡಿ ಹೊಗಳಿದ ಹೃತಿಕ್ ರೋಷನ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 
 

hrithik roshan gets Trolled For Praising Rishab Shetty's Kantara sgk
Author
First Published Dec 13, 2022, 11:34 AM IST

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಕಾಂತಾರ ಹವಾ ಇನ್ನೂ ಕಡಿಮೆ ಆಗಿಲ್ಲ. ಒಂದಲ್ಲೊಂದು ವಿಚಾರದ ಮೂಲಕ ಕಾಂತಾರ ಸದ್ದು ಮಾಡುತ್ತಲ್ಲೇ ಇದೆ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ಪಡೆದ ಕಾಂತಾರ ಚಿತ್ರಕ್ಕೆ ಸ್ಟಾರ್ ಕಲಾವಿದರೂ ಫಿದಾ ಆಗಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ನೋಡಿ ಗೂಸ್‌ಬಮ್ಸ್ ಬಂತು ಎಂದು ಹೇಳಿದ್ದಾರೆ. ಅಷ್ಟೆಯಲ್ಲದೇ ಸಿನಿಮಾದಿಂದ ತುಂಬಾ ಕಲಿತೆ ಎಂದು ಹೇಳಿದ್ದಾರೆ. 

ಕಾಂತಾರ ಸಿನಿಮಾ ನೋಡಿ ಟ್ವೀಟ್ ಮಾಡಿರುವ ಹೃತಿಕ್ ರೋಷನ್, 'ಕಾಂತಾರ ಸಿನಿಮಾ ನೋಡಿ ತುಂಬಾ ಕಲಿತೆ. ಅದ್ಭುತವಾದ ನಿರ್ದೇಶ, ನಿರೂಪಣೆ ಮತ್ತು ನಟನೆ. ಕ್ಲೈಮ್ಯಾಕ್ಸ್ ನೋಡಿ ಗೂಸ್‌ಬಮ್ಸ್  ಬಂತು. ಇಡೀ ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದರಿ. ಹೃತಿಕ್ ರೋಷನ್ ಟ್ವೀಟ್‌ಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಇನ್ನು ಕೆಲವರು ಹೃತಿಕ್ ರೋಷನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಓವರ್ ಆಯ್ತು ಎಂದು ಕಾಲೆಳೆಯುತ್ತಿದ್ದಾರೆ. 

ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಟನೆ ಅದ್ಭುತವಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಕ್ಕಾಗಿ ಮಾತ್ರ ನಿರ್ಮಿಸಲಾಗಿದೆ. ನೀವು ಅದನ್ನು ಒಟಿಟಿಯಲ್ಲಿ ನೋಡಿದ್ರೆ ನಿಮಗೆ ಅಸಮಾನ್ಯ ಸಿನಿಮಾ ಹೇಗಾಗುತ್ತದೆ. ಸಾಮಾನ್ಯ ಸಿನಿಮಾ ಆಗುತ್ತೆ, ಗೂಸ್‌ಬಮ್ಸ್ ಹೇಗೆ ಬರುತ್ತೆ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ವಿಮರ್ಷಕ ಹೃತಿಕ್ ರೋಷನ್ ಮತ್ತೆ ಬಂದ್ರು' ಎಂದು ಹೇಳಿದ್ದಾರೆ.

ಕಾಂತಾರ ನೋಡಿ ತುಂಬಾ ಕಲಿತೆ; ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್

ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ, 'ಇದು ನನ್ನ ದೃಷ್ಟಿಯಲ್ಲಿ ಸಿನಿಮಾ ಅಲ್ಲ, ಸಿನಿಮಾ ಸಮಾಜಕ್ಕೆ ಏನಾದರೂ ಸಂದೇಶವನ್ನು ಕೊಡಬೇಕು. ಈ ಚಿತ್ರ ಮೂಢನಂಬಿಕೆಯನ್ನು ಮಾತ್ರ ಹರಡುತ್ತಿದೆ. ಹಣ ಗಳಿಸುವುದು ಎಲ್ಲಕ್ಕಿಂತ ಮುಖ್ಯವಲ್ಲ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಓಹ್ ನಿಜವಾಗಿಯೂ? ಆ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಬಿಟ್ಟರೆ ಬೇರೇನೂ ಇರಲಿಲ್ಲ. ಡ್ರಾಮ ಮಾಡಬೇಡಿ' ಎಂದು ಹೇಳಿದ್ದಾರೆ. 'ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಜೊತೆ ಮಾಡುತ್ತಿದ್ದಾರೆ ಅನಿಸುತ್ತೆ. ಹಾಗಾಗಿ ಇಷ್ಟೆಲ್ಲ  ಹೊಗಳಿದ್ದಾರೆ' ಎಂದು ಹೇಳಿದ್ದಾರೆ ಎಂದು  ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.

'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು; ಅಲೋಚಿಸಿ ಸಿನಿಮಾ ಮಾಡ್ಬೇಕಾ?

ಕಾಂತಾರ ಬಗ್ಗೆ

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ಮಿಂತಿದ್ದಾರೆ. ಕಿಶೋರ್ ಕುಮಾರ್, ಅಚ್ಯುತ್ ಸೇರಿದಂತೆ ಅನೇಕರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅನೇರ ರಂಗಭೂಮಿ ಕಲಾವಿದರು ನಟಿಸಿರುವುದು ವಿಶೇಷ. ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದೆ. 

 

Follow Us:
Download App:
  • android
  • ios