Asianet Suvarna News Asianet Suvarna News

ಗರ್ಲ್‌ಫ್ರೆಂಡ್ ಜೊತೆಯೇ ವಾಸಿಸಲು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ಹೃತಿಕ್ ರೋಷನ್

ಗರ್ಲ್‌ಫ್ರೆಂಡ್ ಜೊತೆ ವಾಸಿಸಲು ಮದುವೆಗೂ ಮುನ್ನ ಹೃತಿಕ್ ರೋಷನ್ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

Hrithik Roshan buys apartment to move with his girlfriend Saba Azad before marriage sgk
Author
First Published May 17, 2023, 12:13 PM IST | Last Updated May 17, 2023, 12:28 PM IST

ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ದೇಶ-ವಿದೇಶ ಅಂತ ಸುತ್ತಾಡುತ್ತಿದ್ದು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಯಾವುದೇ ಕಾರ್ಯಕ್ರಮ, ಈವೆಂಟ್ ಅಥವ ಹಬ್ಬಗಳಲ್ಲಿ ಹೃತಿಕ್ ಜೊತೆಯೇ ಇರುತ್ತಾರೆ ಸಬಾ. ಇಬ್ಬರೂ ಸದ್ಯದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿರುವ ಬೆನ್ನಲ್ಲೆ ಹೃತಿಕ್ ಗರ್ಲ್‌ಫ್ರೆಂಡ್ ಜೊತೆ ಹೊಸ ಅಪಾಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಮೂಲಗಳ ಪ್ರಕಾರ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದು ಐಷಾರಾಮಿ ಅಪಾರ್ಟ್ಮೆಂಟ್‌ ಖರೀದಿಸಿದ್ದಾರಂತೆ. ಇಬ್ಬರೂ ಹೊಸ ಮನೆಗೆ ಸದ್ಯದಲ್ಲೇ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು - ವರ್ಸೋವ ರಸ್ತೆಯಲ್ಲಿ ಹೃತಿಕ್ ಮತ್ತು ಸಬಾ ಹೊಸ ಮನೆ ಇದ್ದು 3 ಫ್ಲೋರ್ ಇರುವ ಅಪಾರ್ಟ್ಮೆಂಟ್‌ ಇದಾಗಿದೆ. ಬರೋಬ್ಬರಿ 100 ಕೋಟಿ ರೂಪಾಯಿಗೆ ಈ ಹೊಸ ಮನೆ ಖರೀದಿ ಮಾಡಿದ್ದಾರಂತೆ ಹೃತಿಕ್. ಹೊಸ ಅಪಾರ್ಟ್‌ಮೆಂಟ್‌ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16 ನೇ ಫ್ಲೋರ್ ಡ್ಯುಪ್ಲೆಕ್ಸ್‌ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿರುವುದು ನೋಡಿದ್ರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

ಈ ಮೊದಲು ಸಹ ಹೃತಿಕ್ ಗರ್ಲ್‌ಫ್ರೆಂಡ್ ಗಾಗಿ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಹೃತಿಕ್ ರೋಷನ್ ಮನೆ ಖರೀದಿ ವಿಚಾರವನ್ನು ತಳ್ಳಿ ಹಾಕಿದ್ದರು. ಇದೀಗ ಮತ್ತೆ ಸುದ್ದು ಮಾಡುತ್ತಿದ್ದು ಇಬ್ಬರೂ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ.  

ಮದುವೆ ಮನೆಯಲ್ಲಿ ಹೃತಿಕ್ ರೋಷನ್ ಮಸ್ತ್ ಡಾನ್ಸ್; ಪಡೆದಿರುವ ಹಣ ಕೇಳಿದ್ರೆ ಅಚ್ಚರಿ ಪಡ್ತೀರಿ

ಸಬಾ ಬಗ್ಗೆ ಹೇಳುವುದಾದರೇ ಗಾಯಕಿ, ಸಂಗೀತಗಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಗಾಯನದ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.  ವೆಬ್ ಸರಣಿಯಲ್ಲಿ ಮಿಂಚಿದ್ದಾರೆ. ಕೊನೆಯದಾಗಿ ಸಬಾ ರಾಕೆಟ್ ಬಾಯ್ಸ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹೃತಿಕ್ ರೋಷನ್ ಬಗ್ಗೆ ಹೇಳುವುದಾದರೆ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸೈಪ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಹೃತಿಕ್​ ರೋಷನ್​, ಸಭಾ ಸಂಬಂಧದ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಜಗನ್ನಾಥ್ ಗುರೂಜಿ

 ಇದು 2017ರಲ್ಲಿ ರಿಲೀಸ್ ಆಗಿದ್ದ ತಮಿಳಿನ ಸೂಪರ್ ಹಿಟ್ ವಿಕ್ರಮ್ ವೇದಾ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹೃತಿಕ್ ಸದ್ಯ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios