'ತಾನು ಐಶ್ವರ್ಯ ರೈ ಅಂದುಕೊಂಡಿದ್ದಾಳೆ', 'ನೀನೇನು ವಿಶ್ವಸುಂದ್ರಿ ಐಶ್ವರ್ಯಾ ರೈ ಯಾ?'.. ಕೊಬ್ಬು ಹೊಡಿಯೋ ಹುಡುಗೀರನ್ನು ಇವತ್ತಿಗೂ ಹುಡುಗರು ರೇಗಿಸೋದು, ಝಾಡಿಸೋದು ಹೀಗೆ ಐಶ್ವರ್ಯಾ ರೈ ಹೆಸರು ಹೇಳಿಯೇ. ಐಶ್ವರ್ಯಾ ಮಿಸ್ ವಲ್ಡ್ ಕಿರೀಟ ಧರಿಸಿ ದಶಕಗಳೇ ಕಳೆದರೂ ಹುಡುಗರ ಪಾಲಿಗೆ ಅವಳಿನ್ನೂ ವಿಶ್ವ ಸುಂದರಿ ಮತ್ತು ಅವಳೊಬ್ಬಳೇ ವಿಶ್ವ ಸುಂದರಿ. ಐಶ್ವಯಾ ರೈ ಎಂಬ ಕರಾವಳಿ ಸುಂದರಿ ಬಾಲಿವುಡ್ಗೆ ಕಾಲಿಟ್ಟು ವಿಶ್ವವನ್ನೇ ದಂಗು ಬಡಿಸಿದ್ದು, ಹುಡುಗರ ನಿದ್ದೆ ಕದ್ದದ್ದು, ಇಬ್ಬಿಬ್ಬರು ಹೀರೋಗಳ ಜೊತೆಗೆ ಡೇಟಿಂಗ್ ಮಾಡಿ ಕೊನೆಗೆ ಅಭಿಷೇಕ್ ಬಚ್ಚನ್ನ ಮದುವೆ ಆಗಿದ್ದು, ಆರಾಧ್ಯಾ ಎಂಬ ಮುದ್ದಾದ ಕೂಸಿಗೆ ಜನ್ಮ ನೀಡಿದ್ದೆಲ್ಲ ಹಳೇ ಕತೆ. ಮದುವೆಗೂ ಮುನ್ನ ಗಾಸಿಪ್ ಪ್ರಿಯರಿಗೆ ಸಖತ್ ಆಹಾರ ಒದಗಿಸುತ್ತಿದ್ದ ಐಶ್ ಬೇಬಿ ಮದ್ವೆ ಆಗಿದ್ದೇ ಆಗಿದ್ದು ಬಚ್ಚನ್ ಫ್ಯಾಮಿಲಿಯ ಶ್ರದ್ಧಾವಂತ ಸೊಸೆಯೇ ಆಗಿಬಿಟ್ಟಳು. ತಾನು 'ಕಜರಾರೇ..' ಎಂದು ಮಾದಕವಾಗಿ ನರ್ತಿಸಿದ ಮಾವ ಬಿಗ್ ಬಿ ಅಮಿತಾಬ್ ಬಚ್ಚನ್ ರಿಂದ ಹಿಡಿದು ಅತ್ತೆ ಜಯಾ, ನಾದಿನಿ ಎಲ್ಲರಿಗೂ ಅಚ್ಚುಮೆಚ್ಚಾದಳು. ಇತ್ತೀಚೆಗೆ ಜಯಾಬಚ್ಚನ್ ಮೀಡಿಯಾದವರ ಎದುರೇ ಸೊಸೆ ಐಶ್ನ ಹಾಡಿ ಹೊಗಳಿದ್ದಲ್ಲದೇ, 'ಇಂಥಾ ಸೊಸೆ ಸಿಕ್ಕಿದ್ದು ನಮ್ಮ ಪುಣ್ಯ' ಎಂದು ಹೇಳಿದರು. ಅಪ್ಪಿತಪ್ಪಿ ಕರೀಶ್ಮಾ ಕಪೂರ್‌ನೇನಾದ್ರೂ ಮಗ ಅಭಿ ಮದುವೆ ಆಗ್ತಿದ್ರೆ ನಮ್ಮ ಸಂಸಾರದ ಸ್ಥಿತಿ ನೆಟ್ಟಗಿರುತ್ತಿರಲಿಲ್ಲ ಅಂತಾನೂ ಹೇಳಿದ್ರು. 

ಐಶ್ವರ್ಯಾ ಮಗಳನ್ನೂ ಬಿಡದ ಟ್ರಾಲಿಗರು! 

ಆದರೆ ಐಶ್ ಮದುವೆಯಾಗಿ ಮಗಳು ಆರಾಧ್ಯಾಗೆ ಎಂಟು ವರ್ಷ ಕಳೆದ ಮೇಲೂ ಇದೀಗ ಐಶ್ ಬಗ್ಗೆ ಒಂದು ಗಾಸಿಪ್ ಓಡಾಡಲು ಶುರುವಾಗಿದೆ. ಅದು ಮತ್ತೇನಲ್ಲ, ಈಕೆ ಸಲ್ಮಾನ್ ಖಾನ್ ನಿಂದ ಪಾರಾಗಲು ವಿವೇಕ್ ನ ತನ್ನ ಗುರಾಣಿಯಾಗಿ ಮಾಡ್ಕೊಂಡಳು ಅನ್ನೋದು. ಒಂದಾನೊಂದು ಕಾಲದಲ್ಲಿ ಐಶ್ವರ್ಯಾ ರೈ ಎಂಬ ಜಗದೇಕ ಸುಂದರಿಯೂ ಸಲ್ಮಾನ್ ಖಾನ್ ಎಂಬ ಸೊಗಸುಗಾರನೂ ಲವ್ವಿಡವ್ವಿ ಮಾಡ್ತಿದ್ದದ್ದು ಎಲ್ಲರಿಗೂ ಗೊತ್ತು. ಆಮೇಲೆ ಅವಳು ಸಲ್ಮಾನ್ ಖಾನ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು, ಆತ ತಾನೊಬ್ಬ ಸ್ಟಾರ್ ಅನ್ನೋದನ್ನೂ ಮರೆತು ಭಗ್ನಪ್ರೇಮಿಯಾಗಿ ಕುಡಿದು ಬಂದು ಐಶ್ ಮನೆ ಮುಂದೆ ಗಲಾಟೆ ಮಾಡಿದ್ದು.. ಎಲ್ಲ ನಡೆದಿತ್ತು. ಇದಾದ ಮೇಲೆ ಐಶ್ ಡೇಟಿಂಗ್ ಶುರು ಮಾಡಿದ್ದು ವಿವೇಕ್ ಓಬೇರಾಯ್ ಜೊತೆಗೆ. ಆದರೆ ಅಪ್ಪಿತಪ್ಪಿ ಎಲ್ಲೂ ಐಶ್ ತನ್ನ ಹಾಗೂ ವಿವೇಕ್ ಸಂಬಂಧದ ಬಗ್ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ. ಆದರೆ ವಿವೇಕ್ ತೋಳಿಗೆ ತೋಳು ಏರಿಸಿಕೊಂಡು ಪಾರ್ಟಿಗೆ ಬಂದಳು, ಲಾಂಗ್ ಡ್ರೈವ್ ಹೋದಳು. ಫಾರಿನ್ ಟ್ರಿಪ್ಪೂ ಮಾಡಿದ್ಲು. ಎಲ್ಲೆಡೆ ಈ ಜೋಡಿ ಬಗ್ಗೆ ರಂಗು ರಂಗಿನ ಕತೆಗಳು ಓಡಾಡಿದವು. ಆದರೆ ಆಮೇಲೆ ಈಕೆ ವಿವೇಕ್‌ನ ಬಿಟ್ಟು ಗುರು ಚಿತ್ರದ ವೇಳೆ ಅಭಿಷೇಕ್ ಬಚ್ಚನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಳು. ಕೊನೆಗೆ ಅಭಿ ಕೊರಳಿಗೇ ಮಾಲೆ ಹಾಕಿ ಆತನ ಮಗಳಿಗೆ ತಾಯಿಯಾದಳು. 

 'ನನ್ನ ಜುಟ್ಟು ಹಿಡಿದು ಮನೆಯಿಂದ ಹೊರದಬ್ಬಿದ್ರು' ಅತ್ತೆ ಮೇಲೆ ಐಶ್ವರ್ಯಾ ರೈ ಆರೋಪ ..

ಆದರೆ ಯಾವತ್ತೂ ವಿವೇಕ್ ಬಗ್ಗೆ ಏನೂ ಹೇಳಲಿಲ್ಲ. ಈ ಸುಂದರಿ ಕೈಕೊಟ್ಟ ಮೇಲೆ ಆತ ಕೆಲವು ವರ್ಷಗಳ ಹಿಂದೆ ಕರ್ನಾಟಕದ ನಂಟಿರುವ ಜೀವರಾಜ್ ಆಳ್ವಾ ಹಾಗೂ ನಂದಿನಿ ಆಳ್ವಾ ಅವರ ಪುತ್ರಿಯನ್ನು ವಿವಾಹವಾದ. ಇತ್ತೀಚಿನ ಸಂದರ್ಶವೊಂದರಲ್ಲಿ ಐಶ್ವರ್ಯಾ ರೈ ತನ್ನ ಹಾಗೂ ವಿವೇಕ್ ಓಬೇರಾಯ್ ಸಂಬಂಧದ ಬಗ್ಗೆ ಒಂದಿಷ್ಟು ಹಿಂಟ್ ಕೊಟ್ಟಳು. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಆಗಿದ್ವಿ. ಅದರಾಚೆಗೆ ನಮ್ಮಿಬ್ಬರ ಮಧ್ಯೆ ನೀವು ಊಹಿಸಿದಂಥದ್ದು ಏನೂ ನಡೆದಿಲ್ಲ ಅನ್ನೋ ಟೋನ್ನಲ್ಲಿ ಮಾತನಾಡಿದಳು. ಕೇವಲ ಫ್ರೆಂಡ್ಶಿಪ್ ಮಾತ್ರ ಆಗಿದ್ರೆ ಒಬ್ಬ ಹುಡುಗನ ಜೊತೆಗೆ ಇಷ್ಟೆಲ್ಲ ಒಟ್ಟಿಗೆ ಸುತ್ತಾಡಿ, ಫಾರಿನ್ ಟ್ರಿಪ್ ಮಾಡೋದೆಲ್ಲ ಸಾಧ್ಯನಾ ಅಂತೆಲ್ಲ ಕಿಂಡಲ್ ಮಾಡುವವರಿಗೆ ಐಶ್ ಬಳಿ ಉತ್ತರವಿಲ್ಲ. ಆದರೆ ನಮ್ಮಿಬ್ಬರದು ನಿರ್ಮಲ ಸ್ನೇಹ ಮಾತ್ರ ಅನ್ನುವ ಮೂಲಕ ಅಂದಕಾಲತ್ತಿಲ್ ಶುರುವಾದ ಗಾಸಿಪ್ಗೆ ತೆರೆ ಎಳೆಯೋ ಪ್ರಯತ್ನ ಮಾಡಿರುವುದಂತೂ ಸ್ಪಷ್ಟವಾಗಿದೆ,