ವಿಶ್ವಸುಂದರಿ ಐಶ್ವರ್ಯಾ ರೈ ಮದುವೆ ವಿಚಾರ ಎಷ್ಟು ಸದ್ದು ಮಾಡಿತ್ತೋ, ಆಕೆಯ ಪ್ರೆಗ್ನೆನ್ಸಿ ವಿಷಯವೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಾಕಷ್ಟು ಸೆನ್ಸೇಷನಲ್‌ ಸಹ ಕ್ರಿಯೇಟ್ ಮಾಡಿತ್ತು. ಮಗಳಾದರೆ ಹೇಗಿರುತ್ತಾಳೆ? ಮಗನಾದರೆ ಹೇಗಿರಬಹುದು ಎಂಬ ಚರ್ಚೆ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಆರಾಧ್ಯ ಹುಟ್ಟಿದ ಮೇಲೆ ಸುದ್ದಿಗೆ ಮತ್ತಷ್ಟು ಆಹಾರವಾಯಿತು...ಆಕೆಯನ್ನು ನಡೆ, ನುಡಿ, ಹಾವ, ಭಾವ ಎಲ್ಲದರ ಬಗ್ಗೆ ಮಂದಿ ಕಮೆಂಟ್ ಮಾಡಲು ಆರಂಭಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಆರಾಧ್ಯ ಕಣ್ಣು ಮಿಟುಕಿಸುವುದು, ಕಾಲು...ಎಲ್ಲವೂ ಚರ್ಚೆಗೆ ಒಳಗಾಗಿತ್ತು. ಇದೀಗ ತನ್ನ ಎಂಟನೇ ಹುಟ್ಟುಹಬ್ಬದಂದು ಚೆಂದ ಕಾಣುವಂತೆ ಡ್ರೆಸ್ ಮಾಡಿಕೊಂಡಿದ್ದಕ್ಕೂ ಟ್ರಾಲ್‌ಗೆ ಆಹಾರವಾಗಿದ್ದಾಳೆ!

ಐಶ್ವರ್ಯಾ ರೈ ಸೌಂದರ್ಯದ ಗುಟ್ಟಿದು!

ಹುಟ್ಟುತ್ತಲೇ ಸ್ಟಾರ್ ಕಿಡ್ ಅಗಿ ಬೆಳೆದ ಆರಾಧ್ಯ ಕ್ಯಾಮೆರಾ ಎದುರು ಹೇಗಿರಬೇಕು ಎಂಬುದನ್ನು ಚಿಕ್ಕ ವಯಸ್ಸಿನಿಂದಾನೇ ಅಭ್ಯಾಸವಾಗಿಬಿಟ್ಟಿದೆ ಎಂದೆನಿಸುತ್ತದೆ. ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಫೋಸ್ ಕೊಡದಿದ್ದರೂ, ಈಕೆ ಮಾತ್ರ ಪಿಳಿ ಪಿಳಿ ಕಣ್ಣು ಬಿಡುತ್ತಾ ಕ್ಯಾಮೆರಾಗೆ ಫೋಸ್ ನೀಡುತ್ತಾಳೆ. ಮುಗ್ಧತೆ ಹಾಗೂ ನಾಟಿ ಫೇಸ್ ಎಂಥವರನ್ನೂ ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಕೆಲವು ದಿನಗಳ ಹಿಂದೆ ಬಿ-ಟೌನ್ ಕುಟುಂಬದವರ ಜೊತೆ ಆರಾಧ್ಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ಬಚ್ಚನ್ ಫ್ಯಾಮಿಲಿ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಆದರೆ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಆರಾಧ್ಯಾ ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆದಳು.

ಲಿಟಲ್‌ ಐಶ್ವರ್ಯ ರೈ ಡ್ಯಾನ್ಸಿಂಗ್ ಫೋಟೋ ವೈರಲ್!

ಹೌದು! ಇದು ಸ್ಟಾರ್ ಕಿಡ್ ಅಂತಾನೋ ಅಥವಾ ಆರಾಧ್ಯಳಿಗೆ ತಾಯಿಯಂತೆ ಮೇಕಪ್‌ ಇಷ್ಟಾನೋ ಗೊತ್ತಿಲ್ಲ. ಹಳದಿ ಡ್ರಸ್ ಧರಿಸಿದ ಪುಟಾಣಿ ಕಣ್ಣಿಗೆ ಮಾಡಿದ ಮೇಕಪ್‌ ಹಾಗೂ ತುಟಿಗೆ ಹಚ್ಚಿದ ಲಿಪ್‌ಸ್ಟಿಕ್‌ ಗಮನಿಸಿದ ನೆಟ್ಟಿಗರು 'ಮಗಳ ಮೇಲೆ ಮೇಕಪ್‌ ನೋಡಿ ನಾನು ಹೆದರಿದೆ' ಹಾಗೂ 'ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತೆ ಐಶ್ವರ್ಯಾ ಹೀಗೆ ಮಾಡಬಾರದಿತ್ತು...' ಎಂದೆಲ್ಲ ಕಮೆಂಟ್ ಮಾಡಿದ್ದಾರೆ.

ಚಿತ್ರನಟರ ಮಕ್ಕಳು. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಮೇಕ್ ಅಪ್ ಮಾಡಿಕೊಳ್ಳುವುದೆಂದರೆ ತುಸು ಹೆಚ್ಚಿಗೇ ಆಸಕ್ತಿ. ಹುಟ್ಟಿದ ಹಬ್ಬದ ದಿನ ತನ್ನಿಷ್ಟದಂತೆ ಇದ್ದಳು ಎನಿಸುತ್ತೆ. ಅದಕ್ಕೂ ಬೇಕಾ ಈ ಟ್ರಾಲ್?

 

 
 
 
 
 
 
 
 
 
 
 
 
 

#abhishekbachchan #aishwaryarai & birthday girl #aaradhyabachchan had fun with "jhula" 😊☺️

A post shared by Viral Bhayani (@viralbhayani) on Nov 16, 2019 at 7:12am PST