ಅಕ್ಷಯ್ ಕುಮಾರ್ ಜೊತೆ ರೂಮಿನಲ್ಲಿದ್ದಾಗ ರವೀನಾ ಟಂಡನ್‌ಗೆ ಸಿಕ್ಕಿಬಿದ್ರಾ ಐಶ್ವರ್ಯಾ ರೈ?
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ನಡುವೆ, ಐಶ್ವರ್ಯಾ ಅವರ ಹಳೆಯ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅವರೊಂದಿಗಿನ ಹಳೆಯ ಸಂಬಂಧದ ಬಗ್ಗೆ ಐಶ್ವರ್ಯಾ ಅವರ ಮಾತುಗಳು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಅಭಿಷೇಕ್ ಬಚ್ಚನ್ ಜೊತೆಗೆ ದಾಂಪತ್ಯಕ್ಕೆ ಐಶ್ವರ್ಯಾ ರೈ ಡೈವೋರ್ಸ್ ಮಾಡ್ಕೋತಾರಂತೆ ಎಂಬ ವದಂತಿ, ಐಶ್ವರ್ಯಾ ರೈ ಬಗೆಗಿನ ಗಾಸಿಪ್ ಫ್ಯಾಕ್ಟರಿಗೆ ಬಿಡುವೇ ಇಲ್ಲದ ಕೆಲಸ ನೀಡಿದೆ. ವದಂತಿಗಳ ನಡುವೆ, ಚಲನಚಿತ್ರ ಪ್ರೇಕ್ಷಕರು ವಿಶ್ವ ಸುಂದರಿಯ ಹಳೆಯ ವೀಡಿಯೊಗಳನ್ನು ಅಗೆದು ತೆಗೆಯುತ್ತಿದ್ದಾರೆ. ಅವರ ಕೆಲವು ಮಾತುಗಳು ವೈರಲ್ ಆಗುತ್ತಿವೆ. ರೆಡ್ಡಿಟ್‌ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಐಶ್ವರ್ಯಾ ಕಾಣಿಸಿಕೊಂಡಿದ್ದ ʼಕಾಫಿ ವಿತ್ ಕರಣ್ʼ ಕ್ಲಿಪ್ ಅನ್ನು ನೆಟಿಜನ್ ಹಂಚಿಕೊಂಡಿದ್ದಾರೆ.
ಆ ಸಂಚಿಕೆಯಲ್ಲಿ, ಐಶ್ವರ್ಯಾ ಅನ್ನು ಮಾತನಾಡಿಸುತ್ತ ಕರಣ್, ನಿಮ್ಮ ಬಗ್ಗೆ ಅತ್ಯಂತ ವಿಚಿತ್ರವಾದ ಗಾಸಿಪ್‌ಗಳು ಇವೆ, ಕೇಳಿದ್ದೀರಾ ಎಂದು ಕೇಳುತ್ತಾರೆ. ಆಗ ಐಶ್ವರ್ಯಾ ರೈ ಹೇಳಿರುವುದು ಹೀಗೆ: "ಹೌದು, ನನ್ನ ವೃತ್ತಿಜೀವನದ ಆರಂಭದಲ್ಲಿ ಅಂಥದೊಂದು ಸುದ್ದಿಗೆ ನಾನು ತುಂಬಾ ಕೋಪಗೊಂಡಿದ್ದೆ. ಆ ಗಾಸಿಪ್ ಪ್ರಕಟಿಸಿದ್ದ ಮ್ಯಾಗಜಿನ್ ಅನ್ನು ಕೋರ್ಟ್‌ಗೆ ಎಳೆದಿದ್ದೆ. ಏಕೆಂದರೆ ಆ ಲೇಖನದಲ್ಲಿ ಹೀಗೆ ಬರೆದಿತ್ತು- ನಾನು ಅಕ್ಷಯ್ ಕುಮಾರ್ ಜೊತೆಯಲ್ಲಿ ರೂಮಿನಲ್ಲಿದ್ದಾಗ ರವೀನಾ ಟಂಡನ್ ಅಲ್ಲಿಗೆ ಬಂದಳು. ಆಕೆ ನನ್ನನ್ನು ತರಾಟೆಗೆ ತೆಗೆದುಕೊಂಡಳು ಅಂತ. ಇದು ಸಂಪೂರ್ಣವಾಗಿ ಸುಳ್ಳು ಎಂದು ಎಲ್ಲರಿಗೂ ತಿಳಿದಿತ್ತು."
ಈ ವಿಚಾರದ ಬಗ್ಗೆ ಗೊಂದಲ ಮಾಡಿಕೊಳ್ಳುವುದು ಬೇಡ. ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ತುಂಬಾ ಕಾಲ ಪ್ರಣಯದಲ್ಲಿ ತೊಡಗಿದ್ದರು. ಇಬ್ಬರೂ 1994ರ ಹಿಟ್ ಚಿತ್ರ ಮೊಹ್ರಾದಲ್ಲಿ ಸಹ-ನಟರಾಗಿದ್ದರು ಮತ್ತು ಆಗಿನ ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಸೇರಿದ್ದರು. ಇಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಅವರಿಬ್ಬರೂ ಬೇರ್ಪಟ್ಟರು. ಆ ಸಂದರ್ಭದಲ್ಲೇ, ಇವರ ಪ್ರಣಯಭಂಗ ಆಗೋದಕ್ಕೆ ಐಶ್ವರ್ಯ ರೈ ಕಾರಣ ಎಂದು ಈ ಗಾಸಿಪ್‌ನಿಂದ ಮತ್ತೊಂದು ಸುದ್ದಿ ಹುಟ್ಟಿಕೊಂಡಿತ್ತು.
ಇನ್ನೊಂದು ಪಾಡ್‌ಕ್ಯಾಸ್ಟ್‌ನಲ್ಲಿ ಅಕ್ಷಯ್‌ಕುಮಾರ್- ರವೀನಾ ಸಂಬಂಧ ಹಾಗೂ ಬ್ರೇಕಪ್ ಬಗ್ಗೆ ರವೀನಾಗೇ ಪ್ರಶ್ನೆ ಕೇಳಲಾಗಿತ್ತು. ಆಗ ರವೀನಾಗೆ, 90ರ ದಶಕದಲ್ಲಿ ಅಕ್ಷಯ್ ಜೊತೆ ನಿಮಗಿದ್ದ ಸಂಬಂಧವನ್ನು ಈಗ ಹೇಗೆ ಸ್ವೀಕರಿಸುತ್ತೀರಿ ಎಂದು ಕೇಳಲಾಯಿತು. ಅವಳು ಪ್ರತಿಕ್ರಿಯಿಸಿದ್ದು ಹೀಗೆ- “ಅಕ್ಷಯ್ ಯಾರ ಜೊತೆಗೆ ಪ್ರೀತಿ ಮಾಡಿದ್ದನೋ ಅವರೆಲ್ಲರ ಜೊತೆಗೂ ಜಗಳ ಮಾಡಿದ್ದ ಎಂದು ಕಾಣುತ್ತದೆ. ಒಮ್ಮೆ ನಾನು ಅವನ ಜೀವನದಿಂದ ಹೊರಬಂದ ನಂತರ, ನಾನು ಬೇರೆಯವರೊಂದಿಗೆ ಡೇಟಿಂಗ್ ಮಾಡತೊಡಗಿದೆ. ಅವನು ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದ. ಆದ್ದರಿಂದ ನಮ್ಮಿಬ್ಬರ ನಡುವೆ ಅಸೂಯೆಗೆ ಜಾಗ ಇರಲಿಲ್ಲ" ಎಂದಿದ್ದಳು.
ಈ ನಡುವೆ ಮುಂಬೈನಲ್ಲಿ ನಡೆದ ಫಿಲ್ಮ್‌ಫೇರ್ OTT ಅವಾರ್ಡ್ಸ್ 2024ರಲ್ಲಿ ಅಭಿಷೇಕ್ ಬಚ್ಚನ್ ಭಾಗವಹಿಸಿ ಹೇಳಿದ ಮಾತು ವೈರಲ್ ಆಗಿದೆ. "ಮದುವೆಯಾದ ಪುರುಷರು ಮಾಡಬೇಕಾದ ಒಂದು ಕೆಲಸವೇನು?" ಎಂದು ಅಭಿಷೇಕ್ ಬಳಿ ಸಲಹೆ ಕೇಳಲಾಯಿತು. "ಇದು ತುಂಬಾ ಸಿಂಪಲ್. ನಿರ್ದೇಶಕರು ಏನು ಹೇಳ್ತಾರೋ ನಾವದನ್ನು ಚಾಚೂ ತಪ್ಪದೆ ಮಾಡ್ತೀವಿ. ಹಾಗೇ ಮನೆಯಲ್ಲೂ ಮಾಡಿದರಾಯಿತು. ಎಲ್ಲಾ ಮದುವೆಯಾದ ಪುರುಷರೂ ಇದನ್ನೇ ಮಾಡುತ್ತಾರೆ. ಹೆಂಡತಿ ಹೇಳಿದಂತೆ ಅವರು ಕೆಲಸ ಮಾಡ್ತಾರೆ" ಎಂದಿದ್ದಾರೆ.
ಹಾಲಿವುಡ್ ಜೋಡಿ ಖರೀದಿಸಿದ ಮುಖೇಶ್ ಅಂಬಾನಿ ಮಗಳ ಮನೇಲಿ ಏನೇನಿದೆ?
ಅಭಿಷೇಕ್ ಬಚ್ಛ್ ಹಾಗೂ ಐಶ್ವರ್ಯಾ ರೈ ವಿಚ್ಛೇನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೂಮರ್ ನಿಜ ಅನ್ನೋದನ್ನ ಸಾಬೀತುಪಡಿಸುವಂತೆ ಕೆಲವೊಂದು ವಿಚಾರಗಳು ಅವರ ಬಾಳಿನಲ್ಲಿ ಆಗುತ್ತಿದೆ. ಇಲ್ಲಿಯವರೆಗೂ ಹೀಗೆ ಕೇಳಿಬರುತ್ತಿರುವ ರೂಮರ್‌ಗಳು ನಿಜವಲ್ಲ ಎನ್ನುವ ಯಾವುದೇ ಹೇಳಿಕೆ ಇಬ್ಬರಿಂದಲೂ ಬಂದಿಲ್ಲ. ಇತ್ತೀಚೆಗೆ ಪುತ್ರ ಆರಾಧ್ಯಳ 13ನೇ ವರ್ಷದ ಜನ್ಮದಿನಕ್ಕೆ ಐಶ್ವರ್ಯಾ ರೈ ಹಂಚಿಕೊಂಡ ಫೋಟೋದಲ್ಲಿ ಅಭಿಷೇಕ್ ಬಚ್ಛನ್ ಇದ್ದಿರಲಿಲ್ಲ. ಅಭಿಷೇಕ್ ಇದರಲ್ಲಿ ಭಾಗವಹಿಸಿರಲಿಲ್ಲ ಎನ್ನುವ ಮಾತಿನೊಂದಿಗೆ ಇಬ್ಬರ ಡಿವೋರ್ಸ್ ಹೆಚ್ಚೂ ಕಡಿಮೆ ಖಚಿತ ಎನ್ನುವ ಮಾತುಗಳು ಬಂದಿದ್ದವು.
ಟಾಲಿವುಡ್ ಯುವ ನಟನೊಂದಿಗೆ 2ನೇ ಮದ್ವೆಗೆ ಸಿದ್ಧರಾದ ನಟಿ ನಿಹಾರಿಕಾ ಕೊನಿಡೆಲಾ?