ಸೂಪರ್ ಹಿಟ್ ಪಾರ್ಟಿ ಸಾಂಗ್‌ಗಳನ್ನು ನೀಡಿದ ಹನಿ ಸಿಂಗ್ ತನ್ನ ಕೆರಿಯರ್‌ನ ತುತ್ತತುದಿಯಲ್ಲಿದ್ದಾಗ ಡಿಪ್ರೆಷನ್‌ಗೆ ಒಳಗಾಗಿದ್ದರು. ಡಿಪ್ರೆಷನ್‌ಗೊಳಗಾದ ಪರಿಣಾಮ ಮದ್ಯ ವ್ಯಸನಿಯಾದರು.

ಯುವ ಜನರ ನೆಚ್ಚಿನ ಸಿಂಗರ್ ಆಗಿದ್ದ ಹನಿ ಸಿಂಗ್ ಅತೀಪ ಮಾನಸಿಕ ಖಿನ್ನತೆಯಿಂದ ಬಳಲಿದರು. ಅಂತಹ ಸಂದರ್ಭದಲ್ಲಿ ಹನಿ ಸಿಂಗ್‌ನನ್ನು ಮೇಲೆತ್ತಿದ್ದು ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ.

ಹೃತಿಕ್ ಒಮ್ಮೆ ಡಿಪ್ರೆಷನ್‌ನಿಂದ ಬಳಲುತ್ತಿದ್ದರಂತೆ; ಕಾರಣ ಕಂಗನಾ ನಾ?

ಆ ಘಟ್ಟ್ ನನಗೆ ಬಹಳ ಭೀಖರ ಸಮಯವಾಗಿತ್ತು. ನನ್ನ ಮಾನಸಿಕ ಆರೋಗ್ಯದಲ್ಲಿ ಏನಾಗುತ್ತಿತ್ತು ಎಂಬುದರ ಅರಿವು ನನಗೆ ಇರಲಿಲ್ಲ. ಇದರಿಂದಲೇ ನಾನು ಮದ್ಯ ವ್ಯಸನಿಯಾದೆ. ನನಗೆ ನಿದ್ರೆ ತೀರಾ ಕಡಿಮೆಯಾಗಿ ರೋಗ ಹೆಚ್ಚಾಗುತ್ತಾ ಹೋಯಿತು.

3-4 ತಿಂಗಳೂ ಖಿನ್ನತೆಯಿಂದ ಬಳಲಿದ ಸಿಂಗ್, ಯಾವತ್ತೂ ತಮ್ಮ ಅಸ್ವಸ್ಥತೆಯನ್ನು ಅಡಗಿಸಬೇಡಿ, ಅದನ್ನು ಹಂಚಿಕೊಳ್ಳಿ ಎಂದೇ ಹೇಳಿದ್ದಾರೆ. ಅಂದಿನ ಪರಿಸ್ಥಿಯಲ್ಲಿ ನನ್ನನ್ನು ನಾನು ನಿಭಾಯಿಸಿಕೊಳ್ಳಲು ದೀಪಿಕಾ ಪಡುಕೋಣೆ ಮತ್ತು ಶಾರೂಖ್ ಖಾನ್ ನೆರವಾದರು.

ತಂದೆ-ತಾಯಿಯನ್ನು ಕಳೆದುಕೊಂಡ ನಟಿಯ ಡಿಪ್ರೆಷನ್‌; ಮೈತ್ರಿಯಾ ಸ್ಫೂರ್ತಿ ಕಥೆ!

ದೀಪಿಕಾ ದೆಹಲಿಯ ಖ್ಯಾತ ವೈದ್ಯರೊಬ್ಬರ ನಂಬರ್ ನೀಡಿದ್ದರು ಎಂದು ಅವರು ಹೇಳಿದ್ದಾರೆ. ರೋಹಿತ್ ಶೆಟ್ಟಿಯ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಹನಿಸಿಂಗ್ ದೀಪಿಕಾ ಮತ್ತು ಶಾರೂಖ್ ಜೊತೆ ಕೆಲಸ ಮಾಡಿದ್ದರು.

ತನ್ನ ಪರಿಸ್ಥಿತಿಯಲ್ಲಿ ತನ್ನ ಕುಟುಂಬ ತೋರಿಸಿದ ಬೆಂಬಲವನ್ನೂ ಹನಿ ಸಿಂಗ್ ನೆನಪಿಸಿಕೊಳ್ಳುತ್ತಾರೆ. ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ. ನನ್ನ ಕುಟುಂಬ ಸ್ನೇಹಿತರು ನನ್ನ ಕಾಳಜಿ ವಹಿಸಿದ್ದರು. ಇಂಡಸ್ಟ್ರಿಯಿಂದಲೂ ಬಹಳಷ್ಟು ಜನ ನನಗೆ ನೆರವಾದ್ರು.ಅವರೆಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು, ನಾನು ಹುಶಾರಾದೆ ಎಂದಿದ್ದಾರೆ.

ಖಿನ್ನತೆಯಲ್ಲಿರುವವರ ಬಳಿ ಈ ಮಾತುಗಳನ್ನಾಡಿ, ನಿಮ್ಮ ಬೆಂಬಲವೇ ಅವರ ಚಿಕಿತ್ಸೆ

ಇದೇ ಖಿನ್ನತೆಯಲ್ಲಿದ್ದಾಗಲೇ ಹೃತಿಕ್ ರೋಷನ್‌ಗಾಗಿ ಧೀರೆ ಧೀರೆ ಹಾಡು ಮಾಡಿದ್ದರು ಸಿಂಗ್. ಇದರಲ್ಲಿ ಸೋನಂ ಕಪೂರ್ ಕೂಡಾ ಇದ್ದರು.ಇಡೀ ಹಾಡನ್ನು ಸಿಂಗ್ ಐಫೋನಲ್ಲಿ ರೆಕಾರ್ಡ್‌ ಮಾಡಿ ಲ್ಯಾಪ್‌ಟಾಪ್‌ನಲ್ಲೇ ಕಂಪೋಸ್‌ ಮಾಡಿದ್ದರು. ಈ ಹಾಡು 2015 ಆಗಸ್ಟ್ 31ಕ್ಕೆ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು.