ಲಾಕ್‌ಡೌನ್‌ನಿಂದಾಗಿ ಅನೇಕರ ಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬಿದಿದ್ದೆ. ಈ ಸಂಕಷ್ಟದಿಂದ ಪಾರಾಗಬೇಕು ಎಂದು ಇತ್ತೀಚಿಗೆ ಚಿತ್ರರಂಗದ ಹಿರಿಯ ಕಲಾವಿದರು, ನಿರ್ಮಾಪಕರು , ನಿರ್ದೇಶಕರರಲ್ಲರೂ ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಚರ್ಚಿಸಿ ಕೆಲವೊಂದು ತೀರ್ಮಾನಗಳನ್ನು ಕೈಗೊಂಡಿದ್ದಾರೆ. 

ನಾನ್ ಸರಿ ಇಲ್ಲ, ನಾನು ಸಾಯಬೇಕು: ಕನ್ನಡ ನಟಿಯ ಮತ್ತೊಂದು ಆಘಾತಕಾರಿ ಪೋಸ್ಟ್

ಈ ಮಧ್ಯೆ ಕನ್ನಡ ನಟಿಯೊಬ್ಬರ ಡಿಪ್ರೆಷನ್ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದ್ದು ಖಾಸಗಿ ವೆಬ್‌ಸೈಟ್‌ವೊಂದರಲ್ಲಿ ಆ ನಟಿ ಮಾತನಾಡಿದ್ದಾರೆ .ಮೈತ್ರಿಯಾ ತಮ್ಮ ಜೀವನದ ಬಗ್ಗೆ ಯಾರಿಗೂ ತಿಳಿಯದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು! ಈಗಾಗಲೇ  ಎರಡು ಸಿನಿಮಾಗಳಲ್ಲಿ ಮಿಂಚಿ ಎಲ್ಲರ ಗಮನ ಸೆಳೆದ ನಟಿ ಮೈತ್ರಿಯಾ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆವೊಂದನ್ನು ಎದುರಿಸಿದ್ದಾರೆ. 

ಕಳೆದ ವರ್ಷ ಕಿಡ್ನಿ ಫೇಲ್ಯೂರ್‌ನಿಂದ ತಾಯಿಯನ್ನು ಕಳೆದುಕೊಂಡ ಮೈತ್ರಿಯಾ ಅದಾದ 48 ದಿನಕ್ಕೆ ಹಾರ್ಟ್‌ ಅಟ್ಯಾಕ್‌ನಿಂದ ತಂದೆಯನ್ನು ಕಳೆದುಕೊಂಡಿದ್ದಾರೆ. ಇಬ್ಬರು ದಿಢೀರನೆ ಕಳೆದುಕೊಂಡ ನೋವಿನಲ್ಲಿ ಮೈತ್ರಿಯಾ ಡಿಪ್ರೆಷನ್‌ಗೆ ಒಳಗಾಗಿದ್ದರು.  ಇದು ಡಿಪ್ರೆಷನ್‌ ಎಂದು ತಿಳಿಯದೆ ನರಳುತ್ತಿದ್ದರು ಆದರೆ ಸರಿಯಾದ ಸಮಯಕ್ಕೆ ಆಪ್ತರ ಸಹಾಯದಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಡಿಪ್ರೆಷನ್‌ ಹೋರಾಟ:

ಮೈತ್ರಿಯಾ ಡಿಪ್ರೆಷನ್‌ನಿಂದ ಹೊರ ಬರಲು ತುಂಬಾನೇ ಕಷ್ಟಪಟ್ಟಿದ್ದಾರೆ. ಯೋಗ, ಧ್ಯಾನ ಹಾಗೂ ಸ್ಫೂರ್ತಿ ನೀಡುವಂತ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದರಂತೆ. ಡಿಪ್ರೆಷನ್‌ನಿಂದಾಗಿ ಎಲ್ಲಾ ವಿಚಾರದಲ್ಲೂ ಆಸಕ್ತಿ ಕಳೆದುಕೊಂಡಿದ್ದರು. ಮ್ಯೂಸಿಕ್ ಕೇಳಿದರೆ ಸಾಕು ಡ್ಯಾನ್‌ ಮಾಡುತ್ತಿದ್ದ ಮೈತ್ರಿಗೆ ಅದು ಕಿರಿಕಿರಿ ಅನಿಸುತ್ತಿತ್ತಂತೆ ಆದರೆ ಕುಟುಂಬದವರ ಸಪೋರ್ಟ್‌ನಿಂದಾಗಿ ಇದರಿಂದ ಹೊರ ಬರಲು ಸಾಧ್ಯವಾಯಿತು ಎಂದಿದ್ದಾರೆ.

ಅಣ್ಣನ ಅಗಲಿಕೆಯ ನೋವಿನಲ್ಲಿ ಡಿಪ್ರೆಶನ್‌ಗೆ ಜಾರಿದ ಧ್ರುವ ಸರ್ಜಾ!

ಮೈತ್ರಿಯಾ ಕಮ್‌ ಬ್ಯಾಕ್:

ಚಿಕ್ಕ ವಯಸ್ಸಿನಿಂದಲ್ಲೂ ಮಾರ್ಷಲ್ ಆಟ್ಸ್‌ ಕಳೆಯ ಬೇಕೆಂದು ಆಸಕ್ತಿ ಹೊಂದಿದ್ದ ಮೈತ್ರಿಯಾ ಈಗ ಹಠ ಮಾಡಿ ಕಲಿಯುತ್ತಿದ್ದಾರೆ. ಈ ಸಮಯದಲ್ಲಿ 'ಆಗಂತುಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಹಾರರ್‌ ಸಿನಿಮಾ ಆಗಿದ್ದು ಅರ್ಧದಷ್ಟು ಶೂಟಿಂಗ್ ಮುಗಿದಿದೆ. ಇದರಲ್ಲಿ ಅಮ್ಮ-ಮಗಳ ಬಾಂಧವ್ಯದ ಕತೆಯೂ ಇದೆ ಎಂದು ಹೇಳಿಕೊಂಡಿದ್ದಾರೆ.