Asianet Suvarna News Asianet Suvarna News

ಜೂ.ಎನ್ ಟಿ ಆರ್ ಭೇಟಿಯಾದ ಗೃಹ ಸಚಿವ ಅಮಿತ್ ಶಾ; ಕುತೂಹಲ ಮೂಡಿಸಿದ ಇಬ್ಬರ ಮೀಟಿಂಗ್

ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಅವರನ್ನು ಭೇಟಿಯಾಗಿದ್ದಾರೆ. ಭಾನುವಾರ (ಆಗಸ್ಟ್ 21) ಹೈದರಾಬಾದ್ ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. 

Home minister Amit Shah meets RRR star Jr NTR in Hyderabad sgk
Author
Bengaluru, First Published Aug 22, 2022, 11:23 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಅವರನ್ನು ಭೇಟಿಯಾಗಿದ್ದಾರೆ. ಭಾನುವಾರ (ಆಗಸ್ಟ್ 21) ಹೈದರಾಬಾದ್ ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ. ಅಮಿತ್ ಶಾ ತೆಲುಗು ಸ್ಟಾರ್ ಭೇಟಿಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್ ಟಿ ರಾಮರಾವ್ ಅವರ ಮೊಮ್ಮಗ ಜೂನಿಯರ್ ಎನ್ ಟಿ ಆರ್ ಅವರನ್ನು ಅಮಿತ್ ಶಾ ದಿಢೀಟ್ ಭೇಟಿಯಾಗಿರುವುದು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಮೂಲಗಳ ಪ್ರಕಾರ ಇದು ಕೇವಲ ಸೌಜನ್ಯದ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ 2023ರ ಚುಮಾವಣೆಯ ಹಿನ್ನಲ್ಲೇ ಮುಂಚಿತವಾಗಿ ಜೂ ಎನ್ ಟಿ ಆರ್ ಭೇಟಿಯಾಗಿ ನಟನನ್ನು ಒಲಿಸಿಕೊಳ್ಳುವ ಬಿಜೆಪಿ ತಂತ್ರ ಎನ್ನುವ ಮಾತು ಕೇಳಿಬರುತ್ತಿದೆ. 

ಅಮಿತ್ ಶಾ ಮತ್ತು ಜೂ.ಎನ್ ಟಿ ಆರ್ ಇಬ್ಬರು ಸುಮಾರು 15 ನಿಮಿಷಕ್ಕೂ ಅಧಿಕ ಸಮಯ ಮಾತುಕತೆ ನಡೆಸಿದರು. ನಂತರ ಹೈದರಾಬಾದ್‌ನ ಶಂಶಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಅಮಿತ್ ಶಾ ಮತ್ತು  ಜೂ ಎನ್ ಟಿ ಆರ್ ಇಬ್ಬರು ಮಾತುಕತೆ ನಡೆಸಿದರು. ಬಳಿಕ ಇಬ್ಬರು ಭೋಜನ ಮಾಡಿದರು. ಆ ಸಮಯದಲ್ಲಿ ಅಮಿತ್ ಶಾ ಸೂಪರ್ ಹಿಟ್ ಆರ್ ಆರ್ ಆರ್ ಸಿನಿಮಾ ಸಕ್ಸಸ್‌ಗೆ ಶುಭಾರೈಸಿದರು ಎನ್ನಲಾಗಿದೆ. ಇದು ಕೇವಲ ಶುಭಹಾರೈಕೆಯ ಭೇಟಿ ಅಷ್ಟೆ ಎಂದು ಬಿಜಿಪಿ ಹೇಳಿಕೊಂಡಿದೆ. ಆದರೆ ಜೂ ಎನ್ ಟಿ ಆರ್ ಭೇಟಿ ಪಕ್ಷಕ್ಕೆ ಸಕಾರಾತ್ಮಕವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಲೀಕ್ ಆಯ್ತಾ ಜೂ.ಎನ್ಟಿಆರ್ ಮೊಬೈಲ್ ನಂಬರ್..? ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್!

ಜೂ.ಎನ್ ಟಿ ಆರ್ ಸದ್ಯ ಆರ್ ಆರ್ ಆರ್ ಸೂಪರ್ ಸಕ್ಸಸ್ ಬಳಿಕ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್ ಟಿ ಆರ್ ಅವರ 30ನೇ ಸಿನಿಮಾವಾಗಿದ್ದು ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರಕ್ಕೆ ನಾಯಕಿ ಯಾರು ಎನ್ನುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದರೆ ಇನ್ನು ಅಧಿಕೃತ ಮಾಹಿತಿ ಬಹಿರಗವಾಗಿಲ್ಲ. ಈ ಸಿನಿಮಾ ಬಳಿಕ ಜೀ ಎನ್ ಟಿ ಆರ್  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರುತ್ತಿದೆ. 

ಜ್ಯೂ. ಎನ್‌ಟಿಆರ್‌ ಚಿತ್ರಕ್ಕೆ ಶಿವಣ್ಣನ ಸಿನಿಮಾ ಟೈಟಲ್‌ ಇಡ್ತಾರಾ?

ಸದ್ಯ ಜೂ.ಎನ್ ಟಿ ಆರ್ ಆರ್ ಆರ್ ಆರ್ ಸಕ್ಸಸ್‌ನಲ್ಲೇ ಇದ್ದಾರೆ. ಅದೇ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಅಮಿತ್ ಶಾ ಭೇಟಿಯಾಗಿರುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಜೂ.ಎನ್ ಟಿ ಆರ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಜೂ.ಎನ್ ಟಿ ಆರ್ ಅವರೆ ಸ್ಪಷ್ಟನೆ ನೀಡಬೇಕಿದೆ.   

Follow Us:
Download App:
  • android
  • ios