ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಬಿಡುಗಡೆ ದಿನದಂದೇ ಕನ್ನಡದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಅದು ಕೂಡ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾವಾಗಿರುವುದರಿಂದ ಎರಡು ಸಿನಿಮಾಗಳ ನಡುವೆ ಪೈಪೋಟಿ ನಡೆಯಲಿದೆ ಎಂದು ಸಿನಿಮಾ ವಿಶ್ಲೇಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva sarja) ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್(Martin) ಬಿಡುಗಡೆ ದಿನಾಂಕ ಘೋಷಣೆಯಾಗಿ ತಿಂಗಳೇ ಆಗಿದೆ. ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಮಾರ್ಟಿನ್ ಸಿನಿಮಾ ಸೆಪ್ಟಂಬರ್ 30ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ. ನಿರ್ದೇಶಕ ಎ.ಪಿ. ಅರ್ಜುನ್AP Arjun) ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು ಇಬ್ಬರ ಕಾಂಬಿನೇಷನ್ ಇಬ್ಬರ ಕಾಂಬಿನೇಷನ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಅಂದಹಾಗೆ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾದ ಟೀಸರ್ ಏಪ್ರಿಲ್ 10 ರಂದು ರಿಲೀಸ್ ಮಾಡಲಿದ್ದು ಅಂದೇ ರಿಲೀಸ್ ಡೇಟ್ ಸಹ ಅನೌನ್ಸ್ ಆಗಿತ್ತು. ಇದೀಗ ಅದೇ ದಿನದಂದೇ ಕನ್ನಡದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಅದು ಕೂಡ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾವಾಗಿರುವುದರಿಂದ ಎರಡು ಸಿನಿಮಾಗಳ ನಡುವೆ ಪೈಪೋಟಿ ನಡೆಯಲಿದೆ ಎಂದು ಸಿನಿಮಾ ವಿಶ್ಲೇಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅಂದಹಾಗೆ ಸೆಪ್ಟಂಬರ್ 30ರಂದು ಧ್ರುವ ಸರ್ಜಾ ಸಿನಿಮಾ ರಿಲೀಸ್ ದಿವನೇ ತೆರೆಗೆ ಬರುತ್ತಿರುವ ಮತ್ತೊಂದು ಸಿನಿಮಾ ರಿಷಬ್ ಶೆಟ್ಟಿ(Rishab Shetty) ನಟನೆಯ ಕಾಂತಾರ(Kantara).
ಹೌದು, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಕಾಂತಾರ. ಈ ಸಿನಿಮಾದ ದಿನಾಂಕವನ್ನು ಇತ್ತೀಚಿಗಷ್ಟೆ ಘೋಷಣೆ ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕಾಂತಾರ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಸಹಜವಾಗಿಯೇ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬೆಡ್‌ವೆಟ್ ಮಾಡಿಕೊಳ್ತಿದ್ದ ಪುಟ್ಟ ಧ್ರುವ ಸರ್ಜಾ, ಚಿರು ಹೆಲ್ಪ್ ನೆನೆದು ಕಣ್ಣೀರು!
ಮಾರ್ಟಿನ್ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಎರಡನೇ ಸಿನಿಮಾ. ಧ್ರುವ ಸರ್ಜಾ ಚೊಚ್ಚಲ ಅದ್ದೂರಿ ಸಿನಿಮಾಗೆ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲದೆ ಈ ಜೋಡಿ ಗೆದ್ದು ಬೀಗಿತ್ತು. ಅಲ್ಲದೇ ಧ್ರುವ ಸರ್ಜಾ ವರ್ಷಕ್ಕೆ ಒಂದರಂತೆ ಸಿನಿಮಾ ಮಾಡುತ್ತಾರೆ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಮಾರ್ಟಿನ್ ಲುಕ್‌ನಲ್ಲಿ ಧ್ರುವ ಮಾಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ ಈ ಸಿನಿಮಾದಲ್ಲಿ ರೋಚಕ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದು ಚಿತ್ರಕರಣ ಸಹ ಭರ್ಜರಿಯಾಗಿ ನಡೆಯುತ್ತಿದೆ.
ಜ್ಯೂನಿಯರ್ ಮೊನಾಲಿಸಾ ಹಿಂದೆ ಬಿದ್ದ ಶೆಟ್ರು: 'ಹರಿಕಥೆ ಅಲ್ಲ ಗಿರಿಕಥೆ' ಲವ್ ಸಾಂಗ್ ರಿಲೀಸ್!
ಇತ್ತ ರಿಷಬ್ ಶೆಟ್ಟಿ ಸಿನಿಮಾ ಅಂದರೆ ಕನ್ನಡಿಗರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿರುತ್ತದೆ. ವಿಭಿನ್ನ ಸಿನಿಮಾಗಳನ್ನು ಮಾಡುವುದರಲ್ಲಿ ರಿಷಬ್ ಎತ್ತಿದ ಕೈ. ಇವರದ್ದೇ ಆದ ನೋಡುಗ ಬಳಗವಿದೆ. ಜೊತೆಗೆ ಕಾಂತಾರ ಸಿನಿಮಾ ಮೂಡಿಬರುತ್ತಿರುವುದು ಹೊಂಬಾಳೆ ಬ್ಯಾನರ್‌ನಲ್ಲಿ. ಕೆಜಿಎಫ್-2 ಮೂಲಕ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಹೊಂಬಾಳೆ ಬ್ಯಾನರ್‌ನಲ್ಲಿ ಚಿತ್ರ ಬರ್ತಿದೆ ಅಂದರೆ ಸಹಜವಾಗಿ ಚಿತ್ರಾಭಿಮಾನಿಗಳ ನಿರೀಕ್ಷಎ ದುಪ್ಪಟ್ಟಾಗಿ ಇರುತ್ತದೆ. ಅಲ್ಲದೇ ಕಾಂತಾರ ಟ್ರೈಲರ್ ಕೆಜಿಎಫ್ 2 ಸಿನಿಮಾ ರಿಲೀಸ್ ವೇಳೆ ಬಿಡುಗಡೆ ಆಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಅಲ್ಲದೇ ಈ ಸಿನಿಮಾ ಕರ್ನಾಟಕದ ಜಾನಪದ ಕ್ರೀಡೆ ಕಂಬಳದ ಬಗ್ಗೆ ಇದೆ. ಹಾಗಾಗಿ ಕಾಂತಾರ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಸದ್ಯ ಈ ಎರಡು ಬಹುನಿರೀಕ್ಷೆಯ ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿದ್ದು ಪ್ರೇಕ್ಷಕರು ಯಾವ ಸಿನಿಮಾಗೆ ಬಹುಪರಾಕ್ ಹೇಳ್ತಾರೆ, ಯಾವ ಸಿನಿಮಾ ಗೆದ್ದು ಬೀಗಲಿದೆ ಎಂದು ಕಾದು ನೋಡಬೇಕಿದೆ.
