#SinghamOurRealHero; ದೇವಗನ್ ಪರ ನಿಂತ ಹಿಂದಿ ಅಭಿಮಾನಿಗಳು, ಸೂರ್ಯ ಫ್ಯಾನ್ಸ್ ಗರಂ
ಅನೇಕ ಕಲಾವಿದರು ಟ್ವೀಟ್ ಮಾಡಿ ಕಿಚ್ಚನ ಬೆನ್ನಿಗೆ ನಿಂತಿದ್ದಾರೆ. ಹಿಂದಿ ಅಭಿಮಾನಿಗಳೀಗ ಅಜಯ್ ದೇವಗನ್ ಪರ ನಿಂತಿದ್ದು ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿತ್ತಿದ್ದಾರೆ.
ಕಿಚ್ಚ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷಾ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗ ಎಂದು ಎರಡು ಭಾಗವಾಗಿದ್ದು ಹಿಂದಿ ಅಭಿಮಾನಿಗಳು ಅಜಯ್ ದೇವಗನ್ ಪರ ನಿಂತಿದ್ದಾರೆ. ಹಿಂದಿ ಮಂದಿ ಹಿಂದಿ ರಾಷ್ಟ್ರ ಅಲ್ಲ ಎಂದರೆ ದಕ್ಷಿಣದ ಸಿನಿಮಾಗಳನ್ನು ಬಾಲಿವುಡ್‌ಗೆ ಡಬ್ ಮಾಡಬೇಡಿ ಎಂದು ಅಭಿಮಾನಿಗಳು ಕಿಡಿ ಕಾಡುತ್ತಿದ್ದಾರೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ್ದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಹಿಂದಿ ರಾಷ್ಟ್ರ ಭಾಷೆ, ಹಿಂದಿಗೆ ಯಾಕೆ ಸಿನಿಮಾ ಬಡ್ ಮಾಡುತ್ತೀರಿ ಎಂದು ಅಜಯ್ ದೇವಗನ್ ಪ್ರಶ್ನಿಸಿದ್ದರು. ಇದಕ್ಕೆ ಸುದೀಪ್ ಬುದ್ಧಿವಂತಿಕೆಯ ಉತ್ತರ ನೀಡುವ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವುದನ್ನು ಅಜಯ್ ದೇವಗನ್ ಗೆ ಅರಿವು ಮೂಡಿಸಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ರು. ಆದರೆ ಇಬ್ಬರು ಸ್ಟಾರ್ ನಟರ ನಡುವಿನ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.
ಅಜಯ್ ದೇವಗನ್ ವಿರುದ್ಧ ಕನ್ನಡಿಗರು ಮಾತ್ರವಲ್ಲದೆ ಅನೇಕ ದಕ್ಷಿಣ ಭಾರತದ ಸ್ಟಾರ್ಸ್ ಸಿಡಿದೆದ್ದರು, ಅಲ್ಲದೆ ಅಜಯ್ ದೇವಗನ್ ಅವರಿಗೆ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾ ಎಂದು ಕಿಡಿಕಾರಿದರು. ಕನ್ನಡ ಕಲಾವಿದರು, ಸ್ಟಾರ್ ಮಾತ್ರವಲ್ಲದೆ ಪರಭಾಷೆಯಿಂದಲೂ ಕಿಚ್ಚನ ಹೇಳಿಕೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ಕಲಾವಿದರ ಜೊತೆಗೆ ರಾಜಕಾರಣಿಗಳು ಸಹ ಸುದೀಪ್ ಪರ ನಿಂತಿದ್ದಾರೆ. ಅನೇಕ ಕಲಾವಿದರು ಟ್ವೀಟ್ ಮಾಡಿ ಕಿಚ್ಚನ ಬೆನ್ನಿಗೆ ನಿಂತಿದ್ದಾರೆ. ಹಿಂದಿ ಅಭಿಮಾನಿಗಳೀಗ ಅಜಯ್ ದೇವಗನ್ ಪರ ನಿಂತಿದ್ದು ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿತ್ತಿದ್ದಾರೆ.
ರಾಷ್ಟ್ರಭಾಷೆ ವಿವಾದ; ಸುದೀಪ್ ಬೆಂಬಲಕ್ಕೆ ನಿಂತ ಸಿಎಂ ಬಸವರಾಜ ಬೊಮ್ಮಾಯಿ
'ಸಿಂಗಂ ನಮ್ಮ ರಿಯಲ್ ಹೀರೋ' ಎಂದ ದೇವಗನ್ ಅಭಿಮಾನಿಗಳು
ಅಜಯ್ ದೇವಗನ್ ಅಭಿಮಾನಿಗಳು ಸಹ ದೇವಗನ್ ಪರ ನಿಂತಿದ್ದಾರೆ. ಟ್ವಿಟ್ಟರ್ ನಲ್ಲಿ ಸಿಂಗಂ ನಮ್ಮ ರಿಯಲ್ ಹೀರೋ ಎಂದು ಟ್ರೆಂಡ್ ಮಾಡುತ್ತಿದ್ದಾರೆ. #SinghamOurRealHero ಎಂದು ಹ್ಯಾಷ್ ಟ್ಯಾಗ್ ಹಾಕಿ ನೆಟ್ಟಿಗರು ಟ್ರೆಂಡ್ ಮಾಡಿದ್ದಾರೆ. ಹಿಂದಿ ಅಭಿಮಾನಿಗಳು ದಕ್ಷಿಣ ಭಾರತದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಜಯ್ ದೇವಗನ್ ಫೋಟೋ ಶೇರ್ ಮಾಡಿ ನಮ್ಮ ಸಿಂಗಂ ಎಂದು ಹೇಳುತ್ತಿದ್ದಾರೆ. ಸಿಂಗಂ ನಮ್ಮ ರಿಯಲ್ ಹೀರೋ ಎಂದು ಹಿಂದಿ ಮಂದಿ ಹೇಳುತ್ತಿದ್ದಂತೆ ತಮಿಳು ನಟ ಸೂರ್ಯ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಸೂರ್ಯ ಅಭಿಮಾನಿಗಳ ಕಿಡಿ
ತಮಿಳು ಅಭಿಮಾನಿಗಳು ಸಹ #SinghamOurRealHero ಎಂದು ನಟ ಸೂರ್ಯ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಸಿಂಗಂ ಸಿನಿಮಾ ಮೊದಲು ಮಾಡಿದ್ದು ನಟ ಸೂರ್ಯ. ಬಳಿಕ ಅದು ಹಿಂದಿಗೆ ರಿಮೇಕ್ ಆಗಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಹಾಗಾಗಿ ತಮಿಳು ಅಭಿಮಾನಿಗಳು ಸಿಂಗಂ ನಮ್ಮ ಹೀರೋ ಎಂದು ಹೇಳುತ್ತಿದ್ದಾರೆ. ಅಲ್ಲದೆ ರಿಮೇಕ್ ನಲ್ಲಿ ಕಾಣಿಸಿಕೊಂಡ ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಜಯ್ ದೇವಗನ್ ರಿಮೇಕ್ ಸಿಂಗಂ, ಸೂರ್ಯ ರಿಯಲ್ ಸಿಂಗಂ ಎಂದು ಹೇಳುತ್ತಿದ್ದಾರೆ. ಸೂರ್ಯ ಫೋಟೋ ಶೇರ್ ಅಭಿಮಾನಿಗಳು ರಿಯಲ್ ಎಂದು ಹೇಳುತ್ತಿದ್ದಾರೆ. ತಮಿಳು ಅಭಿಮಾನಿಗಳು ಅಜಯ್ ದೇವಗನ್ ವಿರುದ್ಧ ಸಿಡಿದೆದ್ದಿದ್ದಾರೆ.
ಸೌತ್ ಸಿನಿಮಾ ಸಕ್ಸಸ್ ಬಾಲಿವುಡ್‌ಗೆ ನಡುಕ ಹುಟ್ಟಿಸಿದೆ, ಇದು ದೊಡ್ಡ ಪಾಠ- ಮನೋಜ್ ಬಾಜಪೇಯಿ
ರಾಷ್ಟ್ರಭಾಷೆಯ ಕಿಡಿ ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗ ಎನ್ನುವ ಚರ್ಚೆಗೆ ತಿರುಗಿದೆ. ದಕ್ಷಿಣ ಭಾರತದ ಸಿನಿಮಾಗಳ ಭರ್ಜರಿ ಸಕ್ಸಸ್ ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿರುವುದು ಈ ಎಲ್ಲಾ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ದಕ್ಷಿಣ ಸಿನಿಮಾಗಳ ಹವಾಳಿಯಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಮಂದಿ ಹಿಂದಿ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಒಟ್ನಲ್ಲಿ ಈ ವಿವಾದ ಇನ್ನೆಲ್ಲಿಗೆ ತಲುಪತ್ತೊ ಕಾದು ನೋಡಬೇಕು.