Asianet Suvarna News Asianet Suvarna News

ಖ್ಯಾತ ರಿಯಾಲಿಟಿ ಶೋ ನಿರೂಪಕ ರಾಘವ್ 'Racist'ಎಂದ ಟ್ರೋಲಿಗರು!

ಈಶಾನ್ಯ ಭಾಗದಲ್ಲೂ ನನಗೆ ಸ್ನೇಹಿತರಿದ್ದಾರೆ, ಕುಟುಂಬ ಸಂಪರ್ಕವಿದೆ ನನ್ನನ್ನು ರೇಸಿಸ್ಟ್ ಎಂದು ಹೇಳಬೇಡಿ ಎಂದು ಮನವಿ ಮಾಡಿಕೊಂಡ ನಿರೂಪಕ. 

Hindi anchor Raghav Juyal reacts to being called racist vcs
Author
Bangalore, First Published Nov 16, 2021, 4:40 PM IST
  • Facebook
  • Twitter
  • Whatsapp

ಬಾಲಿವುಡ್ (Bollywood) ಜನಪ್ರಿಯ ನಟ, ಕೊರಿಯೋಗ್ರಾಫರ್ ಕಮ್ ನಿರೂಪಕ ರಾಘವ್ ಜುಯಲ್ (Raghav Juyal) ಸೋಷಿಯಲ್ ಮೀಡಿಯಾದಲ್ಲಿ (Social Media) ತುಂಬಾನೇ ಆ್ಯಕ್ಟಿವ್. ತಮ್ಮ ಶಾಕಿಂಗ್ ಮತ್ತು ಡ್ಯಾಮೇಜಿಂಗ್ ಹೇಳಿಕೆಗಳನ್ನು ನೀಡಿ ಆಗಾಗ ಕಾಂಟ್ರೋವರ್ಸಿಯಲ್ಲಿರುತ್ತಾರೆ (Controversey). ಇತ್ತೀಚಿಗೆ ರಿಯಾಲಿಟಿ ಶೋ ವೇದಿಕೆ ಮೇಲೆ ಕಾಮಿಡಿ ಮಾಡಲು ಹೋಗಿ ಟ್ರೋಲ್ ಆಗಿದ್ದಾರೆ. 

ಹೌದು! ರಾಘವ್ ಡ್ಯಾನ್ಸ್ ರಿಯಾಲಿಟಿ (Dance Reality Show) ಶೋ 'Dance Deewane' ನಿರೂಪಣೆ ಮಾಡುತ್ತಾರೆ. ಯಾವುದೇ ಸ್ಕ್ರಿಪ್ಟ್‌ ಇಲ್ಲದೆ ಆನ್‌ ಸ್ಪಾಟ್ ಆ್ಯಂಕರಿಂಗ್ ಮಾಡುವುದಕ್ಕೆ ರಾಘವ್ ತುಂಬಾನೇ ಫೇಮಸ್. ಆದರೆ ಕೆಲವೊಮ್ಮೆ ತಮ್ಮ ಸ್ಮಾರ್ಟ್‌ನೆಸ್‌ ಕೈ ಕೊಟ್ಟಿದ್ದೂ ಇದೆ. ವೇದಿಕೆ ಮೇಲೆ ಸ್ಪರ್ಧಿ ಜೊತೆ ಮಾತನಾಡುವಾಗ ಗಿಬ್ರಿಷ್ ಚೈನೀಸ್ (Gibberish Chinese) ಭಾಷೆಯಲ್ಲಿ ಮಾತನಾಡಿದ್ದಾರೆ. ರಾಘವ್ ಹೇಳಿರುವ ಸಾಲುಗಳು ತಪ್ಪು ಅರ್ಥ ನೀಡಿರುವ ಕಾರಣ ಈಶಾನ್ಯ (North Eastern) ಭಾಗದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೇ ರಾಘವ್ ದಿನೇ ದಿನೇ ಜನಾಂಗೀಯರಾಗುತ್ತಿದ್ದಾರೆ ಎನ್ನಲಾಗಿದೆ. 

ಟ್ರೋಲ್ (Troll) ಹಾಗೂ ಮೆಸೇಜ್‌ಗಳನ್ನು ಗಮನಿಸಿ ರಾಘನ್‌ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಅಲ್ಲಿ ನಡೆದ ಘಟನೆ, ರಾಘವ್ ಈ ರೀತಿಯ ಭಾಷೆ ಮಾತನಾಡಲು ಕಾರಣ ಏನು ಎಂಬುದನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಸ್ಪರ್ಧಿಯೊಬ್ಬರ ಹಿಡನ್ ಟ್ಯಾಲೆಂಟ್ (Talent) ಏನೆಂದರೆ ಗಿಬ್ರಿಷ್ ಭಾಷೆ ಮಾತನಾಡುವುದು. ಅದರಲ್ಲೂ ಚೈನೀಸ್ ಭಾಷೆ ಹೆಚ್ಚಂತೆ. ಅವರೊಟ್ಟಿಗೆ ಎಲ್ಲರೂ ಹೀಗೆ ಮಾತನಾಡಬೇಕು. ಹಾಗೆಯೇ ಎಲ್ಲರೂ ಈ ಶೈಲಿಯಲ್ಲಿ ಮಾತನಾಡಲು ಕಲಿಯಬೇಕು ಎಂದು ನಿರ್ಧರ ಮಾಡಿದ್ದರಂತೆ. ಹೀಗಾಗಿ ಆ ಸ್ಪರ್ಧಿ ವೇದಿಕೆ ಮೇಲೆ ಬಂದಾಗ ರಾಘವ್ ಆ ಭಾಷೆ ಮಾತನಾಡುವ ಪ್ರಯತ್ನ ಪಟ್ಟಿದ್ದಾರೆ. 

ರಾಸ್ ಟೇಲರ್‌ ವಿರುದ್ಧ ನಿಂದನೆ: 2 ಪ್ರೇಕ್ಷಕರನ್ನು ಹೊರದಬ್ಬಿದ ಐಸಿಸಿ !

ನನ್ನನ್ನು ಜನಾಂಗೀಯ ಎಂದು ಕರೆಯುವುದು ತುಂಬಾನೇ ತಪ್ಪು. ಕುಟುಂಬಸ್ಥರು (Family) ಹಾಗೂ ಸ್ನೇಹಿತರ (Friends) ಮೂಲಕ ನನಗೆ ಈಶಾನ್ಯ ಭಾಗದ ಜನರ ಜೊತೆ ಒಳ್ಳೆಯ ಸಂಪರ್ಕವಿದೆ. ಅವರಿಗೆ ನೋವಾಗುವ ರೀತಿ ನಾನು ಮಾತನಾಡುವುದಿಲ್ಲ ಹಾಗೂ ನಡೆದುಕೊಳ್ಳುವುದಿಲ್ಲ. ಯಾವುದೇ ಸ್ಕ್ರಿಪ್ಟ್‌ ಇಲ್ಲದೆ ನಿರೂಪಣೆ ಮಾಡುವೆ. ನಾನು ನ್ಯಾಚುರಲ್‌ ಆಗಿ ಕೆಲಸ ಮಾಡಲು ಬಯಸುವೆ ಹೀಗಾಗಿ ಯಾವುದೇ ಉದ್ದೇಶದಿಂದ ಈ ರೀತಿ ಮಾಡಿರುವುದಲ್ಲ, ಎಂದು ರಾಘವ್ ಸ್ಪಷ್ಟನೆ ಮಾಡಿದ್ದಾರೆ.

ಜನಾಂಗೀಯ ಹೇಳಿಕೆ ಕೊಟ್ಟ ನಟಿಯ ವಿರುದ್ಧ FIR ದಾಖಲು

ಬಹುದೊಡ್ಡ ವಿಡಿಯೋ ಹಂಚಿಕೊಂಡಿರುವ ರಾಘವ್ 'ಹರಿದಾಡುತ್ತಿರುವ ಗೊಂದಲಗಳಿಗೆ ಇಲ್ಲಿ ಸರಿಯಾದ ಉತ್ತರ ನೀಡಿರುವೆ. ನನ್ನ ಈಶಾನ್ಯ ಭಾಗದ ಸ್ನೇಹಿತರಿಗೆ ಪ್ರಮುಖವಾಗಿದೆ,' ಎಂದು ಬರೆದುಕೊಂಡಿದ್ದಾರೆ. ದಯವಿಟ್ಟು ಕಾಮೆಂಟ್, ಟ್ರೋಲ್ ಅಥವಾ ಜಡ್ಜ್‌ಮೆಂಟ್ ನೀಡುವ ಮುನ್ನ ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಿ. ಹೀಗೆ ಮಾಡಿರುವುದು ನನ್ನ ಮಾನಸಿಕ ನೆಮ್ಮದಿ ಹಾಗೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ,' ಎಂದು ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Raghav Juyal (@raghavjuyal)

Follow Us:
Download App:
  • android
  • ios