Asianet Suvarna News Asianet Suvarna News

ಕಾಲೇಜ್‌ ಜನರಲ್ ಸೆಕ್ರೆಟರಿನ ಪ್ರೀತಿಸಿ ಮದುವೆಯಾದ ನಟ ಶ್ರೇಯಸ್‌; ಇಲ್ಲಿದೆ ಲವ್ ಸ್ಟೋರಿ

ಬಿಗ್ ಬಾಸ್ ಸ್ಪರ್ಧಿ ಶ್ರೇಯಸ್ ತಲ್ಪಾಡೆ ಮೊದಲ ಸಲ ತಮ್ಮ ಲವ್ ಸ್ಟೋರಿ, ಸಿನಿಮಾ ಜರ್ನಿ ಮತ್ತು ಮಗಳು ಟಿವಿಯಲ್ಲಿ ತಂದೆಯನ್ನು ನೋಡಿದ್ದರೆ ಹೇಗೆ ರಿಯಾಕ್ಟ್ ಮಾಡುತ್ತಾರೆಂದು ಮಾತನಾಡಿದ್ದಾರೆ. 
 

Hindi actor Shreyas Thalpade reveals about love story daughter and career building vcs
Author
First Published Dec 18, 2022, 3:16 PM IST

2005ರಲ್ಲಿ ಇಕ್ಬಾಲ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಶ್ರೇಯಸ್‌ ಇದೀಗ ಬಹು ಬೇಡಿಕೆ ನಟನಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು 17 ವರ್ಷಗಳ ಸಿನಿ ಜರ್ನಿಯಲ್ಲಿ ಕೆರಿಯರ್‌ ಬ್ರೇಕ್‌ ಸಿಕ್ಕಿಲ್ಲ ಎಂದು ಹೇಳುವ ಜನರಿಗೆ ಶ್ರೇಯಸ್ ಉತ್ತರಿಸಿದ್ದಾರೆ. 

ಸರಿಯಾಗಿ ಸಿನಿಮಾ ಸಿಕ್ಕಿಲ್ಲ?

ಒಳ್ಳೆ ಕಥೆ ಇರುವ ಸಿನಿಮಾಗಳಲ್ಲಿ ನಾನು ಭಾಗಿಯಾಗಿರುವೆ ಆದರೆ ನಾಯಕನಾಗಿ ಎಲ್ಲಿ ಏನು ಉಳಿಸಿಕೊಂಡಿರುವೆ ಎಂದು ಗೊತ್ತಿಲ್ಲ. ಹೀಗೆ ಹೇಳುವ ಮೂಲಕ ನಾನು ಅಪ್ರಾಮಾಣಿಕ ಎನ್ನುವುದಕ್ಕೆ ಆಗಲ್ಲ. ಮಿಡಲ್ ಕ್ಲಾಸ್ ಕುಟುಂಬಕ್ಕೆ ಸೇರಿದ ನಾನು ಹಿಂದಿ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತೀನಿ ಎಂದುಕೊಂಡಿರಲಿಲ್ಲ. ಬೇಸರ ಮಾಡಿಕೊಳ್ಳದೆ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ ಅಭಿನಯಿಸಿರುವ ಖುಷಿ ನನಗಿದೆ. ಕೇಳಿದಕ್ಕಿಂತ ಹೆಚ್ಚಿಗೆ ಪಡೆದುಕೊಂಡಿರುವೆ. ನನ್ನ ಯೋಗ್ಯತೆಗೂ ಮೀರಿ ಪಡೆದಿರುವೆ. ನಾಯಕನಾಗಿ ತಿಳಿದುಕೊಳ್ಳಲು ತುಂಬಾ ವಿಚಾರಗಳಿದೆ ಹೀಗಾಗಿ ನನ್ನ ಸಾಧನೆ ಹಾದಿ ತುಂಬಾ ಇದೆ. ಪ್ರತಿ ಸಲ ಸಿನಿಮಾ ಮಾಡುವಾಗಲ್ಲೂ ಇದು ನನ್ನ ಸಿನಿಮಾ ಎಂದು ಭಾವಿಸಿ ಕೆಲಸ ಮಾಡುವೆ. ಜೀವನದಲ್ಲಿ ಸೆಟಲ್ ಆಗುವ ಮುನ್ನ ನಾಯಕನಾಗಿ ಸಾಧನೆ ಮಾಡಬೇಕು. ಪ್ರತಿಯೊಬ್ಬ ನಟನಿಗೂ ಸೆಲ್ಫ್‌ ಡೌಟ್‌ ಇರುತ್ತದೆ. ನಾವು ಮಾಡುತ್ತಿರುವ ಕೆಲಸ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಪದೇ ಪದೇ ಪ್ರಶ್ನೆ ಮಾಡಿಕೊಳ್ಳುತ್ತೀವಿ ಏಕೆಂದರೆ ಪೋಷಕರ ನಿರ್ಧಾರದ ಪ್ರಕಾರ ನಾವು ಬೇರೆ ಏನೋ ಕೆಲಸ ಮಾಡಬೇಕಿತ್ತು. ಕೆಲವೊಬ್ಬರು ನಾವು ಜೀವನ ನೋಡುವ ರೀತಿಯನ್ನು ಬದಲಾಯಿಸುತ್ತಾರೆ. ನನಗೆ ಜಾನಿ ಲೀವರ್ ಭೇಟಿ ಮಾಡಿದ ಕ್ಷಣ ಎನ್ನಬಹುದು. ಪ್ರತಿಯೊಬ್ಬ ನಟನೂ ಸೆಲ್ಫ್‌ ಡೌಟ್‌ ಫೇಸ್‌ನ ದಾಟಿ ಸಾಧನೆ ಮಾಡಿರುತ್ತಾನೆ. 

ಸ್ಟಾರ್ ಕಿಡ್ ಎಫೆಕ್ಟ್‌:

ನನ್ನ ಅಂಟಿ ಮೀನಾ ಮತ್ತು ಜಯಶ್ರೀ ಹಿಂದಿ ಚಿತ್ರರಂಗದಲ್ಲಿರುವವರು, ಅವರಿಂದ ನಾನು ನಟನೆಗೆ ಕಾಲಿಟ್ಟಿಲ್ಲ. ಥಿಯೇಟರ್‌ನಲ್ಲಿ ಜನಪ್ರಿಯತೆ ಪಡೆದು ಈ ಕೆಲಸ ಖುಷಿ ಕೊಟ್ಟ ಕಾರಣ ಇದನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದು. ನನ್ನ ಕುಟುಂಬಸ್ಥರು ಚಿತ್ರರಂಗದಲ್ಲಿದ್ದಾರೆ ಅನ್ನೋ ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡಿರಲಿಲ್ಲ. ನನ್ನ ವೃತ್ತಿ ಜೀವನವನ್ನು ನಾನೇ ಕಟ್ಟಿಕೊಂಡಿರುವುದು. ಯಶಸ್ವಿಯಾಗಿರುವೆ ಇಲ್ಲ ಎಂದು ಹೇಳಲು ಆಗುವುದಿಲ್ಲ ಆದರೆ ನಾನು ಪ್ರಯತ್ನ ಪಡುತ್ತಿರುವೆ. 

ಇದು ಟೈಂ ಪಾಸ್ ಅಷ್ಟೆ, ಮದ್ವೆ ದೊಡ್ಡ ಸ್ಟಾರ್ ಜೊತೆ; ಬಾಯ್‌ಫ್ರೆಂಡ್ ಜೊತೆ ಬಂದ ಜಾನ್ವಿ ಕಾಲೆಳೆದ ನೆಟ್ಟಿಗರು

ಲವ್ ಸ್ಟೋರಿ:

ದೀಪ್ತಿ ಮತ್ತು ನನ್ನ ಲವ್ ಸ್ಟೋರಿ ತುಂಬಾನೇ ಯೂನಿಕ್ ಆಗಿದೆ. ನನ್ನ ಕಾಲೇಜ್‌ನಲ್ಲಿ ಆಕೆ ಜೆನರಲ್‌ ಸೆಕ್ರೇಟರಿ ಆಗಿದ್ದರು ಆಗ ನಾನು ಟಿವಿಯಲ್ಲಿ ಕೆಲಸ ಆರಂಭಿಸಿದೆ. ಶೋ ಮತ್ತು ನನ್ನ ಪಾತ್ರ ಜನಪ್ರಿಯತೆ ಪಡೆಯಿತ್ತು ಆಗ ಆಕ ನನ್ನನ್ನು ಸೆಲೆಬ್ರಿಟಿ ಆಗಿ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದರು. ನೋಡಿದ ಕ್ಷಣ ಪ್ರೀತಿ ಆಯ್ತು ಸಮಯ ವೇಸ್ಟ್‌ ಮಾಡದೆ ನಾನು ಆಕೆಯನ್ನು ಭೇಟಿ ಮಾಡಿದ ನಾಲ್ಕೇ ದಿನಕ್ಕೆ ಪ್ರೀತಿ ಹೇಳಿಕೊಂಡೆ. ಪ್ರಪೋಸ್ ಮಾಡಿದೆ. ಆಕೆ ಸಮಯ ತೆಗೆದುಕೊಂಡರು...ನಾಲ್ಕು ವರ್ಷಗಳ ನಂತರ ಮದುವೆ ಆಯ್ತು. ಆರಂಭದಿಂದಲೂ ಆಕೆ ವಿಚಾರದಲ್ಲಿ ನಾನು ಪರ್ಫೆಕ್ಟ್ ನಿರ್ಧಾರ ತೆಗೆದುಕೊಳ್ಳುವೆ. ನಾನು ಜೀವನದಲ್ಲಿ ಡೇಟ್ ಮಾಡಿದ್ದು ಒಂದೇ ವ್ಯಕ್ತಿಯನ್ನು..ಅದು ನನ್ನ ಹೆಂಡತಿ ಒಬ್ಬಳೆ.

'ಅವತಾರ್-2' ನೋಡುವಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ವ್ಯಕ್ತಿ ಸಾವು

ಮಗಳು ಆಧ್ಯಾ:

ನನ್ನ ಸಿನಿಮಾದ ಹಾಡುಗಳು ಮತ್ತು ಕೆಲವೊಂದು ದೃಶ್ಯಗಳನ್ನು ಮಗಳು ಆಧ್ಯಾ ನೋಡಲು ಶುರು ಮಾಡಿದ್ದಾಳೆ. ಆಕೆಗೆ ನಾಲ್ಕು ವರ್ಷ ಹೀಗಾಗಿ ಎರಡು ಗಂಟೆಗಳ ಸಮಯ ಸಿನಿಮಾ ನೋಡಲು ಆಗುವುದಿಲ್ಲ. ಈಗ ಆಕೆ ಶೂಟಿಂಗ್ ಸೆಟ್‌ಗೆ ಆಗಮಿಸಲು ಶುರು ಮಾಡಿದ್ದಾರೆ. ನನ್ನ ತಂದೆ ನಾಯಕ ಎನ್ನುವ ವಿಚಾರ ಆಕೆ ತಿಳಿಯುತ್ತಿದೆ. ಆರಂಭದಲ್ಲಿ ಟಿವಿಯಲ್ಲಿ ಕಾಣಿಸಿಕೊಂಡ ಪ್ರತಿಯೊಬ್ಬರನ್ನು ತಂದೆ ಅಂದುಕೊಳ್ಳುತ್ತಿದ್ದಳು ಆದರೆ ಈಗ ಯಾರು ಯಾರು ಎಂದು ಗುರುತು ಹಿಡಿಯುತ್ತಿದ್ದಾಳೆ.

Follow Us:
Download App:
  • android
  • ios