Asianet Suvarna News Asianet Suvarna News

63ನೇ ವಯಸ್ಸಲ್ಲಿ ಬ್ಲಾಕ್​ಬಸ್ಟರ್​ ಕೊಟ್ಟ ಸೌತ್​ ನಟ ಇವರೇ ನೋಡಿ: 15 ದಿನದಲ್ಲಿ 100 ಕೋಟಿ ಕಮಾಯಿ!

63ನೇ ವಯಸ್ಸಲ್ಲಿ ಬ್ಲಾಕ್​ಬಸ್ಟರ್​ ಕೊಟ್ಟ ಸೌತ್​ ನಟ ನಂದಮೂರಿ ಬಾಲಕೃಷ್ಣ. ಇವರು ಗಳಿಸಿದ್ದೆಷ್ಟು ನೋಡಿ.
 

Hero Nandamuri Balakrishna   earned 100 crores released film now suc
Author
First Published Nov 5, 2023, 5:49 PM IST

ಶಾರುಖ್ ಖಾನ್ 58 ನೇ ವಯಸ್ಸಿನಲ್ಲಿ ಪಠಾಣ್ ನಂತರ ಜವಾನ್ ಮೂಲಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಿದ್ದರೆ, ದಕ್ಷಿಣದ ನಾಯಕ ಕೂಡ ಯಾರಿಗೂ ಕಡಿಮೆಯಿಲ್ಲ. ಜವಾನ್​ 1100 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಸದ್ದು ಮಾಡುತ್ತಿದೆ.  ಅದೃಷ್ಟ ಒಂದಿದ್ದರೆ ಯಾವ ವಯಸ್ಸಿನಲ್ಲಿಯೂ ಯಶ ಸಾಧಿಸಬಹುದು ಎನ್ನುವುದಕ್ಕೆ ಶಾರುಖ್​ ಅವರ ಈ ಎರಡು ಬ್ಲಾಕ್​ಬಸ್ಟರ್​ ಚಿತ್ರಗಳೇ ಉದಾಹರಣೆ. ಇದೀಗ ಡಂಕಿ ಚಿತ್ರ ಇನ್ನೊಂದು ಬ್ಲಾಕ್​ಬಸ್ಟರ್​ ಎನಿಸಿಕೊಳ್ಳಲು ಸಿದ್ಧವಾಗಿದೆ. ಸತತ ನಾಲ್ಕೈದು ವರ್ಷಗಳ ಸೋಲಿನ ಬಳಿಕ ಶಾರುಖ್​ ಅವರು ಈಗ ಎದ್ದು ಕುಳಿತಿದಿದ್ದಾರೆ. ಇದು ಬಾಲಿವುಡ್ ಮಾತಾದರೆ ಸೌತ್​ ಸ್ಟಾರ್​ಗಳೂ ಕಡಿಮೆ ಏನಿಲ್ಲ ಎನ್ನುವುದನ್ನು ರಜನೀಕಾಂತ್​ ಅವರೇ ದೊಡ್ಡ ಉದಾಹರಣೆ. ಅವರ ಜೈಲರ್​ ಚಿತ್ರದ ಬಗ್ಗೆ ಬೇರೆ ಹೇಳುವಂತಿಲ್ಲ.

ಇದೀಗ, ಇನ್ನೋರ್ವ ಸೌತ್​ ನಟ ವಯಸ್ಸು 63 ಆಗಿದ್ದರೂ ಈಗಲೂ ಸಕತ್​ ಸದ್ದು ಮಾಡುತ್ತಿದ್ದಾರೆ. ಹೌದು. 15 ದಿನಗಳ ಹಿಂದೆ ತೆರೆಕಂಡ ನಂದಮೂರಿ ಬಾಲಕೃಷ್ಣ ಅಭಿನಯದ ಭಗವಂತ ಕೇಸರಿ ಸಿನಿಮಾ ಕೂಡ ಸಕತ್​ ಸದ್ದು ಮಾಡುತ್ತಿದೆ. 63ರ ಹರೆಯದ ಹೀರೋ  ನಂದಮೂರಿ ಅವರ ಈ ಚಿತ್ರ ಸುಮಾರು  100 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಆದರೆ ಇದಾಗಲೇ  ಬಾಕ್ಸ್ ಆಫೀಸ್‌ನಲ್ಲಿ 135 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಕೇವಲ 15 ದಿನಗಳಲ್ಲಿ ಅವರ ಹೊಸ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ಅವರನ್ನು ಗುರುತಿಸುವುದು ತುಂಬಾ ಕಷ್ಟ. ಇದರ ಜೊತೆ, ನಂದಮೂರಿ ಬಾಲಕೃಷ್ಣ ಅವರ ಮುಂಬರುವ ಚಿತ್ರ ಬ್ಯಾಟಲ್ ಆಫ್ ಬ್ರೀತ್ಸ್‌ನ ಹೊಸ ಪೋಸ್ಟ್ ಕೂಡ ರಿಲೀಸ್​ ಆಗಿದೆ. ಇದರಲ್ಲಿ  ನಂದಮೂರಿ ಬಾಲಕೃಷ್ಣ ಅವರು ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಸೈನಿಕರು ಹಿನ್ನೆಲೆಯಲ್ಲಿ ಕಾಣಿಸುವ ಕಾರಣ,  ಇದು ಹಳೆ ಕಾಲವನ್ನು ಆಧರಿಸಿರುತ್ತದೆ ಎಂದು ಊಹಿಸಬಹುದು.  

ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಆ್ಯಕ್ಷನ್​ ಕಿಂಗ್​: ಅಕ್ಷಯ್​ ಕುಮಾರ್​ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್​

ಈ ವರ್ಷ ನಂದಮೂರಿ ಬಾಲಕೃಷ್ಣ ಅವರು ನಟಿಸಿದ ‘ವೀರ ಸಿಂಹ ರೆಡ್ಡಿ’ ಸಿನಿಮಾ ಜನವರಿ 12ರಂದು ತೆರೆಕಂಡಿತ್ತು. ಫ್ಯಾಮಿಲಿ ಕಥಾಹಂದರ ಹೊಂದಿದ್ದ ಆ ಮಾಸ್​ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದರು. ಹಾಡುಗಳು ಸೂಪರ್​ ಹಿಟ್ ಆದವು. ಈ ಯಶಸ್ಸಿನಿಂದ ಬಾಲಯ್ಯ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿತು. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ.

‘ಭಗವಂತ ಕೇಸರಿ’ ಸಿನಿಮಾಗೆ ಅನಿಲ್​ ರವಿಪುಡಿ ಅವರು ನಿರ್ದೇಶನ ಮಾಡಿದ್ದಾರೆ.  ಥಮನ್​ ಅವರು ಸಂಗೀತವಿದೆ.  ಇದು ಬಿಡುಗಡೆಗೂ ಮುನ್ನವೇ ಸಕತ್​ ಸದ್ದು ಮಾಡಿತ್ತು. ‘ಐ ಡೋಂಟ್​ ಕೇರ್​’ ಎಂಬ ಟ್ಯಾಗ್​ ಲೈನ್​ ಗಮನ ಸೆಳೆದಿತ್ತು.  ಟೀಸರ್​ ಬಿಡುಗಡೆ ಆದ ಬಳಿಕ ‘ಭಗವಂತ ಕೇಸರಿ’ ಚಿತ್ರದ ಹೈಪ್​ ಇನ್ನಷ್ಟು ಹೆಚ್ಚಾಗಿತ್ತು.  ಇನ್ನು ಈ ಚಿತ್ರದಲ್ಲಿ ನಟಿಸಿರುವ  ಕನ್ನಡದ ‘ಕಿಸ್’ (Kiss) ಬೆಡಗಿ ಶ್ರೀಲೀಲಾ  ‘ಭಗವಂತ ಕೇಸರಿ’ ಚಿತ್ರ ಹಿಟ್ ಆದ್ಮೇಲೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ. ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಶ್ರೀಲೀಲಾ ಸಂಭಾವನೆ ಮ್ಯಾಟರ್ ಸಿನಿಪಂಡಿತರ ಚರ್ಚೆಗೆ ಗ್ರಾಸವಾಗಿದೆ.

ಮಯೋಸೈಟಿಸ್​ ಕಾಯಿಲೆಗೆ ಕ್ರಯೋಥೆರಪಿ ಚಿಕಿತ್ಸೆ: ನಟಿ ಸಮಂತಾ ವಿಡಿಯೋ ವೈರಲ್​
 

Follow Us:
Download App:
  • android
  • ios