ಬಹತೇಕ ಭಾಗ ಬೆಂಗಳೂರಿನಲ್ಲಿ ಶೂಟಿಂಗ್ ಆದ ಬೆಂಗಳೂರ್ ಡೇಸ್ ಸಿನಿಮಾ ಪ್ರದೇಶಿಕ ಆಪ್ತತೆಯಿಂದಂಲೂ ಕನ್ನಡಿಗರಿಗೆ ಇಷ್ಟವಾಯ್ತು. ಯುವ ತಲೆಮಾರಿನ ಸಿಟಿ ಜಾಬ್, ವಿವಾಹ, ಲವ್, ಕೆರಿಯರ್ ಕುರಿತ ಸುಂದರ ಸಿನಿಮಾ ಚಿತ್ರರಂಗವನ್ನೇ ಮಲಯಾಳಂ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿತ್ತು.

ಸರಳ ಕಥೆಯ ಸಿಂಪಲ್ ಸ್ಟೋರಿ ಭಾಷೆ ಅರ್ಥವಾಗದಿದ್ದರೂ ಅರ್ಥೈಸಿಕೊಳ್ಳವಷ್ಟು ಸಿಂಪಲ್ ಆಗಿತ್ತು. ಬಹಳಷ್ಟು ಜನ ಮಲಯಾಳಂ ಸಿನಿಮಾ ನೋಡೋಕೆ ಆರಂಭಿಸಿದ್ದೇ ಈ ಸಿನಿಮಾದಿಂದ.

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ 'ಸೀ ಯೂ ಸೂನ್' ಟ್ರೈಲರ್ ಶೂಟ್ ಮಾಡಿದ್ದು ಐಫೋನಲ್ಲಿ

ಫಹಾದ್ ಫಾಸಿಲ್, ನಸ್ರಿಯಾ ನಾಝೀಮ್, ದುಲ್ಖರ್ ಸಲ್ಮಾನ್, ಪರ್ವಾತಿ ತಿರುವೊತ್ತು, ನಿತ್ಯಾ ಮೆನನ್ ಅಭಿನಯದ ಸಿನಿಮಾ ಸಿಕ್ಕಾ ಪಟ್ಟೆ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾದ ಭಾಗ 2 ಸಿದ್ಧವಾಗ್ತಿದೆ.

ಬೆಂಗಳೂರ್ ಡೇಸ್‌ ಸಿನಿಮಾವನ್ನೇ ಪದೇ ಪದೇ ನೋಡಿ ಹಾಡು ಗುನುಗಿದ ಸಿನಿಪ್ರಿಯರು ಎರಡನೇ ಭಾಗಕ್ಕಾಗಿ ಕಾಯ್ತಿದ್ರು. ಇದೀಗ ಭಾಗ ಎರಡು ನಿರ್ಮಾಣದ ಬಗ್ಗೆ ಮಾಲಿವುಡ್ ನಟ ಫಹಾದ್ ಫಾಸಿಲ್ ಮಾತನಾಡಿದ್ದಾರೆ.

ಬಾಲಿವುಡ್ ಕ್ವೀನ್ ಕಂಗನಾಳ 'ತೇಜಸ್' ಹಾರೋಕೆ ರೆಡಿ..!

ನಿರ್ದೇಶಕರು ಬೆಂಗಳೂರ್ ಡೇಸ್ 2 ಸಿನಿಮಾ ಬಗ್ಗೆ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಪ್ರಶ್ನೆಗೆ ಅಂಜಲಿ ಸ್ಪಷ್ಟ ಉತ್ತರ ಕೊಡಲಬಲ್ಲರು ಎಂದಿದ್ದಾರೆ. ಟ್ರಾನ್ಸ್‌ ಸಿನಿಮಾದಲ್ಲಿ ಕಾಣಿಸಿಕೊಂಡ ಫಹಾದ್ ಫಾಸಿಲ್ ಪತ್ನಿ ನಸ್ರಿಯಾ ಜೊತೆ ತೆರೆ ಹಂಚಿಕೊಂಡಿದ್ದರು. ಫಹಾದ್ ಅಭಿನಯದ ಸೀ ಯೂ ಸೂನ್ ಟ್ರೈಲರ್ ಸದ್ಯ ಸಿಕ್ಕಾಪಟ್ಟೆ ಸವಂಡ್ ಮಾಡ್ತಿದೆ