ಕಂಗನಾ ರಣಾವತ್ ನಟನೆಯ ತೇಜಸ್ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ ಎಂದು ಸಿನಿಮಾ ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ. ಸರ್ವೇಶ್ ಮೇವಾರ್ ನಿರ್ದೇಶನದ ಈ ಸಿನಿಮಾದಲ್ಲಿ ಕಂಗನಾ ವಾಯಸೇನೆಯ ಪೈಲಟ್ ಪಾತ್ರವನ್ನು ಮಾಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್‌ನ ಮುಂದಿನ ಸಿನಿಮಾ ತೇಜಸ್ ವೀಕ್ಷರನ್ನು ತಲೊಪೋಕೆ ರೆಡಿಯಾಗಿದೆ. ಡಿಸೆಂಬರ್‌ನಲ್ಲಿ ಕಂಗನಾ ಅವರ ತೇಜ್ಸ್ ಟೇಕಾಫ್ ಆಗಲಿದೆ. ತೇಜಸ್ ಸಿನಿಮಾವನ್ನು ವಿಕ್ಕಿ ಕೌಶಲ್ ಅಭಿನಯದ ಉರಿ, ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ಮಾಪಕರೇ ನಿರ್ಮಿಸುತ್ತಿರುವುದು ವಿಶೇಷ.

ಬಿ-ಟೌನ್‌ ಮಾದಕ ದಂಧೆಯ ಕರಾಳ ಸತ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್!

ತೇಜಸ್ ಒಂದು ಸುಂದರವಾದ ಕಥೆಯಾಗಿದ್ದು, ನನಗೆ ವಾಯುಪಡೆಯ ಪೈಲಟ್ ಪಾತ್ರ ನಿರ್ವಹಿಸುವ ಭಾಗ್ಯ ದೊರೆತಿದೆ. ಪ್ರತಿದಿನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಧೈರ್ಯಶಾಲಿ ಪುರುಷ, ಮಹಿಳೆಯರನ್ನು ಸಮವಸ್ತ್ರದಲ್ಲಿ ತೋರಿಸುವ ಈ ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ ಕಂಗನಾ. ನಮ್ಮ ಸಿನಿಮಾ ಸಶಸ್ತ್ರ ಪಡೆಯ ಹಿರೋಗಳ ಸಾಧನೆಯನ್ನು ನೆನಪಿಸಲಿದೆ. ಈ ಸಿನಿಮಾದ ಜರ್ನಿಯ ಬಗ್ಗೆ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ ನಾವಿದ್ದೇವೆ. ನಾವು ಚಿತ್ರೀಕರಣ ಆರಂಭಿಸಲಿದ್ದು, ಈ ವರ್ಷದೊಳಗೆ ಚಿತ್ರೀಕರಣ ಮುಗಿಸಲಿದ್ದೇವೆ. ಕಂಗನಾ ಲೀಡ್ ರೋಲ್ ಮಾಡುತ್ತಿದ್ದು ಸಿನಿಮಾ ಇನ್ನಷ್ಟು ಮಹಿಳೆಯರು ಸೇನೆಗೆ ಸೇರಲು ಸ್ಫೂರ್ಥಿಯಾಗಲಿದೆ ಎಂದುಕೊಂಡಿದ್ದೇನೆ ಎಂದಿದ್ದಾರೆ ನಿರ್ಮಾಪಕ ರೋನಿ.

ನರೇಂದ್ರ ಮೋದಿಗೆ ಹೊಸ ಹೆಸರು ಕೊಟ್ಟ ಕಂಗನಾ

ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ನಟಿ, ತೇಜಸ್ ಡಿಸೆಂಬರ್‌ನಲ್ಲಿ ಟೇಕಾಫ್ ಆಗಲಿದೆ. ಈ ಸಿನಿಮಾದ ಭಾಗವಾಗಿದ್ದು ಹೆಮ್ಮೆ. ಜೈ ಹಿಂದ್ ಎಂದು ಬರೆದಿದ್ದಾರೆ. ನಮ್ಮ ದೇಶದ ಪ್ರಸ್ತುತ ಭಾವನೆಗಳ ಪ್ರತಿಫಲನ ನನ್ನ ಸಿನಿಮಾ. ನಾವು ದೇಶಭಕ್ತಿಯ ಭಾವನೆಯನ್ನು ಸಂಭ್ರಮಿಸುತ್ತೇವೆ ಎಂದು ನಿರ್ದೇಶಕ ಸರ್ವೆಶ್ ಹೇಳಿದ್ದಾರೆ.