Asianet Suvarna News Asianet Suvarna News

2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಟಾಪ್​ 10 ಬಾಲಿವುಡ್​ ಸಿನಿಮಾಗಳ ಲಿಸ್ಟ್​ ಇಲ್ಲಿದೆ...

ಮಕಾಡೆ ಮಲಗಿದ್ದ ಬಾಲಿವುಡ್​​ಗೆ 2023ರಲ್ಲಿ ಜೀವ ತುಂಬಿದ ಟಾಪ್​ 10 ಚಿತ್ರಗಳ ಪಟ್ಟಿ ಇಲ್ಲಿದೆ...
 

Here is the list of top 10 films that brought life to the Bollywood in 2023 suc
Author
First Published Dec 30, 2023, 5:20 PM IST

2023 ಮುಗಿಯಲು ನಾಳೆಯೊಂದೇ ಬಾಕಿ ಇದೆ.  ಇದೀಗ ಇಡೀ ವರ್ಷದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುವ ಸಮಯ. ಬಾಲಿವುಡ್​ ಮಟ್ಟಿಗೆ ಹೇಳುವುದಾದರೆ ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ಕೊಟ್ಟ ವರ್ಷವಿದು. ಅತಿಹೆಚ್ಚು ಗಳಿಕೆ  ಮಾಡಿರುವ ಟಾಪ್​ 10 ಚಿತ್ರಗಳತ್ತ ಒಂದು ದೃಷ್ಟಿ ಹಾಯಿಸೋಣ. ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಾಟ ಮಾಡಿರುವ ಟಾಪ್​ 10 ಲಿಸ್ಟ್​ ಈಚೆಗಷ್ಟೇ ಬಿಡುಗಡೆಯಾಗಿತ್ತು.  ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಾಟ ಮಾಡಿರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ,  ಶಾರುಖ್‌ ಖಾನ್‌ ಅವರ ಬ್ಲಾಕ್‌ಬಸ್ಟರ್‌ ಸಿನಿಮಾ ಜವಾನ್‌ ಮತ್ತು ಪಠಾಣ್​ ಹಾಗೂ  ಸನ್ನಿ ಡಿಯೋಲ್‌ ಅವರ ಗದರ್‌ 2 ಅಗ್ರ ಸ್ಥಾನದಲ್ಲಿವೆ.  ಜೊತೆಗೆ  ಪ್ರಭಾಸ್‌ ನಟನೆಯ ಆದಿಪುರುಷ್‌, ಸಲ್ಮಾನ್‌ ಖಾನ್‌ ಅವರ ಟೈಗರ್‌ 3, ರಜನಿಕಾಂತ್‌ ನಟನೆಯ ಮೆಗಾ ಬ್ಲಾಕ್‌ಬಸ್ಟರ್‌  ಜೈಲರ್‌ ಚಿತ್ರವನ್ನೂ ಜನರು ಅತಿ ಹೆಚ್ಚು ಹುಡುಕಾಟ ಮಾಡಿದ್ದಾರೆ. ಕುತೂಹಲ ಸಂಗತಿಯೆಂದರೆ ಆದಿಪುರುಷ್​ ಚಿತ್ರಕ್ಕೆ ಇನ್ನಿಲ್ಲದ ಕೆಟ್ಟ ಕಮೆಂಟ್​ಗಳೇ ಬಂದಿದ್ದವು. ಇದರ ಹೊರತಾಗಿಯೂ ಟಾಪ್​-10 ಸ್ಥಾನ ಕಳಿಸಿದೆ. 

ಇಷ್ಟೇ ಅಲ್ಲದೇ  ದಳಪತಿ ವಿಜಯ್‌ ನಟನೆಯ ಲಿಯೊ ಮತ್ತು ವಾರೀಸು ಕೂಡ ಟಾಪ್​ 10 ಸ್ಥಾನ ಪಡೆದುಕೊಂಡಿವೆ. ಸ್ಯಾಂಡಲ್​ವುಡ್​​ನ ಯಾವುದೇ ಚಿತ್ರ ಟಾಪ್​-10ನಲ್ಲಿ ಕಾಣಿಸಿಕೊಂಡಿಲ್ಲ. 2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಇತಿಹಾಸ ಸೃಷ್ಟಿಸಿರೋದು ಗೊತ್ತೇ ಇದೆ. ಆದರೆ 2023ರಲ್ಲಿ ಗೂಗಲ್​ನಲ್ಲಿ ಅದನ್ನು ಸರ್ಚ್​ ಮಾಡಿದವರ ಸಂಖ್ಯೆ ಟಾಪ್​ 10 ಸ್ಥಾನದಲ್ಲಿ ಇಲ್ಲ. ಇನ್ನು  ಹಾಲಿವುಡ್‌ ಸಿನಿಮಾ ಬಗ್ಗೆ ಹೇಳುವುದಾದರೆ,  ಭಾರತದಲ್ಲಿ ಹೆಚ್ಚು ಸರ್ಚ್‌ ಆದ ಸಿನಿಮಾಗಳಲ್ಲಿ ಕ್ರಿಸ್ಟ್ರೋಪರ್‌ ನೊಲನ್‌ ನಿರ್ದೇಶನದ ಒಪ್ಪೆನ್‌ಹೆಮಿಯರ್‌ ಮತ್ತು ಮಾರ್ಗೊಟ್‌ ರೋಬಿಯ ಬಾರ್ಬಿ ಸಿನಿಮಾ ಅಗ್ರ ಸ್ಥಾನದಲ್ಲಿವೆ.

ರಜನೀಕಾಂತ್​ ಮಾಜಿ ಅಳಿಯನ ಜೊತೆ ಮೀರಾ ಮದ್ವೆ? ಮೌನ ಮುರಿದ ನಟಿ ಹೇಳಿದ್ದೇನು?

ಇದೀಗ ಬಾಲಿವುಡ್​ನ ಟಾಪ್​ 10 ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರದ ಲಿಸ್ಟ್​ ಈ ರೀತಿಯಾಗಿದೆ. 
 1) ಜವಾನ್​ (644 ಕೋಟಿ ರೂ.)
2) ಪಠಾಣ್​ (543 ಕೋಟಿ ರೂ.)
3) ಅನುಮಲ್​ (540 ಕೋಟಿ ರೂ.)
4) ಗದರ್​ (525 ಕೋಟಿ ರೂ.) 
5) ಟೈಗರ್​ (285 ಕೋಟಿ ರೂ.)
6) ದಿ ಕೇರಳ ಸ್ಟೋರಿ (242 ಕೋಟಿ ರೂ.)
7) ಡಂಕಿ (167 ಕೋಟಿ ರೂ.)
8) ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ (153 ಕೋಟಿ ರೂ.)
9) ಓ ಮೈ ಗಾಡ್​ (150 ಕೋಟಿ ರೂ.)
10) ತೂ ಝೂಟಿ ಮೈ ಮಕ್ಕಾರ್​ (149 ಕೋಟಿ ರೂ.)

ಇನ್ನು ಜಗತ್ತಿನಾದ್ಯಂತ ಗೂಗಲ್​ ಹುಡುಕಾಟದಲ್ಲಿ ಯಾವ ಯಾವ ಚಿತ್ರ ಕ್ರಮವಾಗಿ ಟಾಪ್​  10 ಸ್ಥಾನ ಗಳಿಸಿದೆ ಎಂದು ನೋಡುವುದಾದರೆ: 
1) ಜವಾನ್‌ , 2) ಗದರ್‌ 2, 3) ಒಪ್ಪೆನ್‌ಹೆಮಿಯರ್‌, 4) ಆದಿಪುರುಷ್‌, 5) ಪಠಾಣ್‌, 6) ದಿ ಕೇರಳ ಸ್ಟೋರಿ, 7) ಜೈಲರ್‌, 8) ಲಿಯೋ, 9) ಟೈಗರ್‌ 3  , 10) ವಾರೀಸು
 ಓಟಿಟಿಯಲ್ಲಿ ಕ್ರಮವಾಗಿ  ಟಾಪ್​-10 ಹುಡುಕಾಟ ನಡೆಸಿದ ಓಟಿಟಿ ಚಿತ್ರ ಹಾಗೂ ಷೋಗಳು: ಫಾರ್ಜಿ, ವೆಡ್ನೆಸ್‌ಡೇ, ಅಸುರ್‌, ರಾಣಾ ನಾಯ್ಡು, ದಿ ಲಾಸ್ಟ್‌ ಆಫ್‌ ಅಸ್‌, ಸ್ಕ್ಯಾಮ್‌ 2003, ಬಿಗ್‌ಬಾಸ್‌ 17, ಗನ್ಸ್‌ ಆಂಡ್‌ ಗುಲಾಬ್ಸ್‌, ಸೆಕ್ಸ್‌/ಲೈಫ್‌ ಹಾಗೂ ತಾಝಾ ಖಬರ್‌
 

1+1=5 ಅಂದ್ರೂ ನಿಜನೇ: ಇದು ಕರೀನಾ ಕಪೂರ್​ ಹೊಸ ವರ್ಷದ ಮಂತ್ರವಂತೆ! ಏನಿದರ ಅರ್ಥ ಗೊತ್ತಾ?

Follow Us:
Download App:
  • android
  • ios