1+1=5 ಅಂದ್ರೂ ನಿಜನೇ: ಇದು ಕರೀನಾ ಕಪೂರ್​ ಹೊಸ ವರ್ಷದ ಮಂತ್ರವಂತೆ! ಏನಿದರ ಅರ್ಥ ಗೊತ್ತಾ?

1+1=5 ಅಂದ್ರೂ ಓಕೆ ಎನ್ನುವೆ ಎನ್ನುವ ಮೂಲಕ ನಟಿ  ಕರೀನಾ ಕಪೂರ್​ ಹೊಸ ವರ್ಷದ ಮಂತ್ರ ಘೋಷಿಸಿದ್ದಾರೆ.  ಏನಿದರ ಅರ್ಥ?  
 

Kareena Kapoor Shares Her Mantra For 2024 And We Totally Agree

2024 ಸಮೀಪಿಸುತ್ತಿದೆ. ಇನ್ನೆರಡು ದಿನಗಳಲ್ಲಿಯೇ ಹೊಸ ಹೊಸ ರೆಸುಲ್ಯೂಷನ್​ ಹೊತ್ತ ಕೋಟ್ಯಂತರ ಮಂದಿ ಕಾಣಸಿಗುತ್ತಾರೆ. ಹೊಸ ವರ್ಷದಲ್ಲಿ ಹೀಗೆ ಮಾಡಬೇಕು, ಹಾಗೆ  ಮಾಡಬೇಕು ಎಂದೆಲ್ಲಾ ಇದಾಗಲೇ ಹಲವರು ಲೆಕ್ಕಾಚಾರ ಹಾಕಿಟ್ಟುಕೊಂಡಿದ್ದಾರೆ. ಅದೇ ರೀತಿ ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಅವರೂ ಹೊಸ ರೆಸಲ್ಯೂಷನ್​ ಹಾಕಿಕೊಂಡಿದ್ದಾರೆ. ಅದೇನೆಂದರೆ ಯಾರಾದರೂ ಒಂದು ಪ್ಲಸ್​ ಒಂದು ಐದು ಎಂದು ಹೇಳಿದರೂ ಅದನ್ನು ಹೌದು ಎನ್ನುವುದಂತೆ. ಅಷ್ಟಕ್ಕೂ  ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

 ಇದೀಗ ಕರೀನಾ ಕಪೂರ್​ ಹೊಸ ರೆಸಲ್ಯೂಷನ್​ ಕೇಳಿ ಹಲವರು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ 1+1=5 ಎಂದರೂ ಸುಮ್ಮನೆ ಇರುವುದಾಗಿ ನಟಿ ಕರೀನಾ ಕಪೂರ್​ ಹೇಳಿರುವ ಗೂಡಾರ್ಥ ಇಷ್ಟೇ. 2024ರಲ್ಲಿ ಯಾವುದೇ ವಾದ-ಪ್ರತಿವಾದಗಳಿಂದ ಬೆಬೋ ದೂರ ಇರ್ತಾರಂತೆ. ಯಾರು ಬಂದು ಏನೇ ಹೇಳಿದರೂ ಅವರ ಜೊತೆ ಮಾತಿನ ಚಕಮಕಿ ನಡೆಸುವುದಿಲ್ಲವಂತೆ. ಒಂದು ವೇಳೆ ಅವರು 1+1=5 ಎಂದು ಹೇಳಿದರೂ ಹೌದು, ನೀವೇ ಸರಿ ಅಂತಾರಂತೆ. ಈ ಹೊಸ ರೆಸಲ್ಯೂಷನ್​ ಮಾಡಿದ್ದಾರೆ ನಟಿ. ಇದು ನನ್ನ ಹೊಸ ವರ್ಷದ ಮಂತ್ರ ಎಂದಿದ್ದಾರೆ ನಟಿ. ಇದನ್ನು ಕೇಳಿ ಹಲವರು ಕಾಲೆಳೆದಿದ್ದಾರೆ. ಅಷ್ಟೇನಾ? ನಾವೇನೋ ಇನ್ನೂ ಇಬ್ಬರು ಮಕ್ಕಳನ್ನು ಹೆರುವ ಪ್ಲ್ಯಾನ್​ ಮಾಡಿದ್ದೀರಿ ಅಂದುಕೊಂಡಿದ್ದೆವು ಎಂದಿದ್ದಾರೆ. ಇದಾಗಲೇ ಸೈಫ್​ಗೆ ಮೊದಲ ಪತ್ನಿಯಿಂದ ಇಬ್ಬರು ಹಾಗೂ ಕರೀನಾರಿಂದ ಇಬ್ಬರು ಒಟ್ಟು ನಾಲ್ಕು ಮಕ್ಕಳು ಇದ್ದಾರೆ. ಅದಕ್ಕೇ ಕಾಲೆಳೆದಿರುವ ನೆಟ್ಟಿಗರು ಸೈಫ್​ ಐದನೇ ಮಗು ಮಾಡಿಕೊಳ್ತಾರೆ ಎಂದು ಅಂದುಕೊಂಡಿದ್ವಿ ಎಂದಿದ್ದರೆ ಇನ್ನು ಕೆಲವರು ಕರೀನಾನೇ ಇನ್ನಿಬ್ಬರನ್ನು ಹೆತ್ತರೂ ಹೆರಬಹುದು ಎಂದು ಕಾಲೆಳೆಯುತ್ತಿದ್ದಾರೆ. 

ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್​ ಪತ್ನಿ ಸಕತ್​ ಟ್ರೋಲ್​

ಅಂದಹಾಗೆ, ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.  

ಲವ್​ ಜಿಹಾದ್​ ಎಂದೇ ಇವರ ಮದುವೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಸೈಫ್​ ಅಲಿ ಖಾನ್​, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ  ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್​ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್​ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್​ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್​ ಭೇಷ್​ ಎನ್ನುತ್ತಿದ್ದಾರೆ.

ಚಾನ್ಸ್‌ ಬೇಕೆಂದ್ರೆ ನಿರ್ದೇಶಕರ ಜೊತೆ ಮಲಗ್ಬೇಕು ಅಂದಿದ್ದ ಬಾಯ್‌ಫ್ರೆಂಡ್‌! ಬಿಗ್‌ಬಾಸ್‌ ಸ್ಪರ್ಧಿಯ ಶಾಕಿಂಗ್‌ ಹೇಳಿಕೆ!

 

Latest Videos
Follow Us:
Download App:
  • android
  • ios