Asianet Suvarna News Asianet Suvarna News

ರಜನೀಕಾಂತ್​ ಮಾಜಿ ಅಳಿಯನ ಜೊತೆ ಮೀನಾ ಮದ್ವೆ? ಮೌನ ಮುರಿದ ನಟಿ ಹೇಳಿದ್ದೇನು?

ರಜನೀಕಾಂತ್​ ಮಾಜಿ ಅಳಿಯನ ಜೊತೆ ಬಹುಭಾಷಾ ನಟಿ ಮೀನಾ ಮದ್ವೆಯಾಗುತ್ತಿದ್ದಾರಾ? ಮೌನ ಮುರಿದ ನಟಿ ಹೇಳಿದ್ದೇನು?
 

Meena opens up on rumors about linkup with  Aishwaryas ex husband Dhanush suc
Author
First Published Dec 30, 2023, 4:34 PM IST

ಕನ್ನಡ ಪುಟ್ನಂಜ, ಸ್ವಾತಿ ಮುತ್ತು, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಕಳೆದೊಂದು ವರ್ಷದಿಂದ ಎರಡನೆಯ ಮದ್ವೆಗಾಗಿ ಸುದ್ದಿಯಲ್ಲಿದ್ದಾರೆ. ಇವರು ರಜನೀಕಾಂತ್​ ಅವರ ಪುತ್ರಿಯ ಮಾಜಿ ಪತಿ ಧನುಷ್​ ಜೊತೆ ಮದ್ವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಪತಿ ವಿದ್ಯಾಸಾಗರ್​ ಅವರ ನಿಧನದ ಬಳಿಕ ನಟಿಯ ಹೆಸರು ರಜನೀಕಾಂತ್​ ಮಾಜಿ ಅಳಿಯನ ಜೊತೆ  ಥಳಕು ಹಾಕಿಕೊಂಡಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಭಾರಿ ಸುದ್ದಿಯಾಗಿತ್ತು. 2004ರಲ್ಲಿ ಧನುಷ್ ಹಾಗೂ ರಜನಿ ಪುತ್ರಿ ಐಶ್ವರ್ಯ ಮದುವೆ ನಡೆದಿತ್ತು. ಇವರದ್ದು ಲವ್​ ಮ್ಯಾರೇಜ್​. ಆದರೆ  18 ವರ್ಷಗಳ ದಾಂಪತ್ಯ ಜೀವನದ ಬಳಿಕ  ಸೋಷಿಯಲ್ ಮೀಡಿಯಾದಲ್ಲಿ ಬೇರೆಯಾಗುತ್ತಿರುವುದಾಗಿ ಹೇಳಿದ್ದರು.  ಇಬ್ಬರು ದೂರಾಗಲು ಕಾರಣ ಏನು ಅನ್ನುವುದು ಅವರು ಬಹಿರಂಗಪಡಿಸಿರಲಿಲ್ಲ. ಆದರೆ ಅವರ ಹೆಸರು ನಂತರ ಮೀನಾ ಜೊತೆ ಕೇಳಿಬಂದಿತ್ತು.

ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ.  ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟಿ, ಎರಡನೆಯ ಮದ್ವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದ ನೊಂದುಕೊಂಡಿದ್ದಾರೆ.   ನನ್ನ ಪತಿ ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ಯೋಚಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದು ಹೋಯ್ತು. ಅವರು ನಿಧನರಾದರು.  ಆ ನೋವಿನಿಂದ ನಾನಿನ್ನೂ ಹೊರಬಂದಿರಲಿಲ್ಲ.  ಅದರ ಮಧ್ಯೆಯೇ ಧನುಷ್​ ಜೊತೆ ನನ್ನ ಹೆಸರು ಥಳಕು ಹಾಕಿಕೊಂಡಿರುವುದು ನೋವಿನ ಸಂಗತಿ ಎಂದಿದ್ದಾರೆ.  

ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ ನಟಿ ಜಯಪ್ರದಾ! ಎಲ್ಲೆಡೆ ಭಾರಿ ಶೋಧ- ಆಗಿದ್ದೇನು?

 ನಾನು ಎರಡನೇ ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿದೆ.  ಧನುಷ್ ಅವರನ್ನು ಮದುವೆಯಾಗುತ್ತೇನೆ, ಅವರ ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತೆಲ್ಲ ಬರೆಯುತ್ತಿದ್ದಾರೆ. ಕೊನೆಯ ಪಕ್ಷ ಅದರ ಸತ್ಯಾಸತ್ಯತೆಯನ್ನೂ ಕೇಳುತ್ತಿಲ್ಲ. ಸೆಲೆಬ್ರಿಟಿಗಳು ಎಂದಾಕ್ಷಣ ಮನಸ್ಸಿಗೆ ಬಂದ ಹಾಗೆ ಬರೆಯುವುದು ಸರಿಯಲ್ಲ. ಅವರಿಗೂ ಮನಸ್ಸಿರುತ್ತದೆ, ಬಾಳ್ವೆ ಇರುತ್ತದೆ ಎನ್ನುವುದನ್ನು ಅರಿಯಬೇಕು.  ಇಂತಹ ಸುದ್ದಿಗಳಿಂದ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತಿದೆ ಎಂದು ನೋವಿನಿಂದ ಮೀನಾ ಹೇಳಿದ್ದಾರೆ.
 
  ಇನ್ನುಮೀನಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು ಹಲವು ದಶಕಗಳಿಂದ ಸಿನಿಮಾದಲ್ಲಿ ಇದ್ದಾರೆ.  ಬಾಲ ನಟಿಯಾಗಿ ಪದಾರ್ಪಣೆ ಮಾಡಿರುವ ಮೀನಾ, ಕನ್ನಡ ಸೇರಿದಂತೆ  ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸಿದ್ದಾರೆ.  ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ.  ಇದೀಗ ಮಗಳೇ ನನಗೆ ಸರ್ವಸ್ವ ಎಂದಿರುವ  ಮೀನಾ, ಈ ರೀತಿಯ ಸುಳ್ಳು ಸುದ್ದಿಯನ್ನು ಹರಡುವ ಮುನ್ನ ನನ್ನ ಮತ್ತು ಮಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಜನರು ನೋಡಬೇಕಿದೆ ಎಂದಿದ್ದಾರೆ. 
 
ಚಾನ್ಸ್‌ ಬೇಕೆಂದ್ರೆ ನಿರ್ದೇಶಕರ ಜೊತೆ ಮಲಗ್ಬೇಕು ಅಂದಿದ್ದ ಬಾಯ್‌ಫ್ರೆಂಡ್‌! ಬಿಗ್‌ಬಾಸ್‌ ಸ್ಪರ್ಧಿಯ ಶಾಕಿಂಗ್‌ ಹೇಳಿಕೆ!
 

Follow Us:
Download App:
  • android
  • ios