'ಪುಷ್ಟ' ಸ್ಟಾರ್ ಅಲ್ಲು ಅರ್ಜುನ್ ಹೊಗಳಿ ಬಾಲಿವುಡ್ ನಟರನ್ನು ತೆಗಳಿದ್ದೇಕೆ ಹಿರಿಯ ನಟಿ ಹೇಮಾ ಮಾಲಿನಿ?

'ಪುಷ್ಟ' ಸ್ಟಾರ್ ಅಲ್ಲು ಅರ್ಜುನ್‌ನನ್ನು ಹೊಗಳಿ ಬಾಲಿವುಡ್ ನಟರನ್ನು ತೆಗಳಿದ್ದಾರೆ ಹಿರಿಯ ನಟಿ ಹೇಮಾ ಮಾಲಿನಿ.

Hema Malini Praises Pushpa Actor Allu Arjun sgk

ಸೌತ್ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಪ್ರೇಕ್ಷಕರು ಹಾಗೂ ಬಹುತೇಕ ಸಿನಿಮಾ ಗಣ್ಯರು ಸಹ ಸೌತ್ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ದಕ್ಷಿಣ ಭಾರತದ ಕಲಾವಿದರು ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅನೇಕ ಸ್ಟಾರ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅಂತವರಲ್ಲಿ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಕೂಡ ಒಬ್ಬರು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನೋಡಿ ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಫಿದಾ ಆಗಿದ್ದಾರೆ. 

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ನೋಡಿ ಮನ ಸೋತಿರುವ ಹೇಮಾ ಮಾಲಿನಿ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.  ಈ ಬಗ್ಗೆ ಮಾತನಾಡಿರುವ ಡ್ರೀಮ್ ಗರ್ಲ್, 'ನಾನು ಕೂಡ ಪುಷ್ಪ ಸಿನಿಮಾ ನೋಡಿದೆ. ತುಂಬಾ ಇಷ್ಟ ಪಟ್ಟೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ನಡಿಗೆ ಆಧರಿಸಿ ಡಾನ್ಸ್ ಸ್ಪೆಪ್ ಹಾಕಿದ್ದಾರೆ.  ಅವರ ಅಭಿನಯ ನನಗೆ ತುಂಬಾ ಇಷ್ಟವಾಗಿದೆ. ನಾನು ಅಲ್ಲು ಅರ್ಜುನ್ ಅವರನ್ನು ಮತ್ತೊಂದು ಸಿನಿಮಾದಲ್ಲಿ ನೋಡಿದೆ. ಅವರ ಲುಕ್ ತುಂಬಾ ಇಷ್ಟವಾಯಿತು. ಪುಷ್ಪ ಸಿನಿಮಾದಲ್ಲಿ ಲುಂಗಿ ಧರಿಸಿ ಹಳ್ಳಿಗಾಡಿನ ಲುಕ್‌ನಲ್ಲಿ ಡಿ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಅಂತಹ ಪಾತ್ರಗಳನ್ನು ಅವರು ಮಾಡುತ್ತಾರೆ. ಅಂತಹ ಲುಕ್ ಮತ್ತು ಪಾತ್ರವನ್ನು ಮಾಡಲು ಅವರು ಒಪ್ಪಿಕೊಂಡಿರುವುದು ಶ್ಲಾಘನೀಯ. ಆದರೆ ನಮ್ಮ ಹಿಂದಿ ಸಿನಿಮಾದ ನಟರು ಇದನ್ನೆಲ್ಲ ಮಾಡಲ್ಲ' ಎಂದು ಹೇಳಿದ್ದಾರೆ. 
 
'ನನಗೆ ನೆನಪಿದೆ ರಜಿಯಾ ಸುಲ್ತಾನ್‌ನಲ್ಲಿ ಧರಮ್‌ಜಿ ಗಾಢವಾಗಿ ಕಾಣಬೇಕಾಗಿತ್ತು ಮತ್ತು ಅವರು ಹಿಂಜರಿಯುತ್ತಿದ್ದರು' ಎಂದು ಹೇಮಾ ಮಾಲಿನಿ ಹೇಳಿದರು. ಚಿತ್ರರಂಗದ ಹಿರಿಯ ನಟಿ ಹೇಮಾ ಮಾಲಿನಿ ಅವರ ಮಾತುಗಳಿಂದ ಅಲ್ಲು ಅರ್ಜುನ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದರೆ ಹಿಂದಿ ನಟರನ್ನು ತೆಗೆಳಿದ್ದು ಹಿಂದಿ ಮಂದಿ ಅಸಮಾಧಾನ ಹೊರಹಾಕಿದ್ದಾರೆ. 

ಪುಷ್ಪ-2 ಸಿನಿಮಾದ ಹಾಡುಗಳಿಗೆ ಭರ್ಜರಿ ಡಿಮ್ಯಾಂಡ್ !

ಅಲ್ಲು ಅರ್ಜುನ್ ಸದ್ಯ ಪುಷ್ಪ-2ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ದೊಡ್ಡ ಮಟ್ಟದ ಸಕ್ಸಸ್ ಕಂಡ ಬಳಿಕ ಪಾರ್ಟ್ -2 ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ನಿರ್ದೇಶಕ ಸುಕುಮಾರ್ ಒಂದಿಷ್ಟು ಬದಲಾವಣೆಯೊಂದಿಗೆ ಪುಷ್ಪ-2 ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಪುಷ್ಪ-2 ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಇಬ್ಬರೂ ಒಟ್ಟೆಗೆ ನಟಿಸುತ್ತಿದ್ದಾರೆ. 

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ 2ಗೆ ವಿಲನ್​ ಎಂಟ್ರಿ!

ಪಾರ್ಟ್ 1 ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಫಹಾದ್ ಅಭಿಮಾನಿಗಳ ಹೃದಯ ಗೆದ್ದಿದ್ದರು. ಪಾರ್ಟ್-2ನಲ್ಲಿ ಮತ್ತೆ ಹೇಗೆ ಅಬ್ಬರಿಸಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಹಾದ್ ಕಾಳಗ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ-2 ನಲ್ಲೂ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 

   

Latest Videos
Follow Us:
Download App:
  • android
  • ios