ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ 2ಗೆ ವಿಲನ್​ ಎಂಟ್ರಿ!

ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿರುವ ಪುಷ್ಪ2 ಚಿತ್ರದಲ್ಲಿ ವಿಲನ್​ ಆಗಿ ಜಗಪತಿ ಬಾಬು ಅವರ ಎಂಟ್ರಿಯಾಗಿದ್ದು, ಈ ಚಿತ್ರ ಮತ್ತಷ್ಟು ಕುತೂಹಲ ಕೆರಳಿಸಿದೆ. 
 

Jagapathi Babu enters in the cast of Allu Arjun starrer Pushpa 2 the rule here is what we knows

ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ ಸಿನಿಮಾ ದೇಶದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಲವು ದಾಖಲೆಗಳನ್ನು ಹಿಂದಿಕ್ಕಿತ್ತು. ಈಗ ಪುಷ್ಪ 2 ತೆರೆ ಮೇಲೆ ಬರಲು ಸಜ್ಜಾಗಿ ನಿಂತಿಪುಷ್ಪ 2 ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ (release) ಮಾಡಲು ಚಿತ್ರತಂಡ ನಿರ್ಧರಿಸಿದೆ. ಏಕಾಕಾಲದಲ್ಲಿ ದೇಶ- ವಿದೇಶಗಳಲ್ಲಿ ಪುಷ್ಪ 2 ಚಿತ್ರ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಸಿನಿಮಾ ಮೇಕರ್ಸ್ ಎಲ್ಲಾ ಭಾಷೆಗಳ ಥಿಯೇಟ್ರಿಕಲ್ ರೈಟ್ಸ್ (Theatric rights) ಡೀಲ್​ಗಾಗಿ ಒಂದು ಸಾವಿರ  ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎಂದು Siasat.com ವರದಿಯಲ್ಲಿ ಉಲ್ಲೇಖ ಮಾಡಿದೆ. ಇದು ನಿಜವೇ ಆಗಿದ್ದರೆ, ಪುಷ್ಪ 2 ಸಿನಿಮಾ ಬಿಡುಗಡೆಗೂ  ಮುನ್ನವೇ ಭರ್ಜರಿ ಹಣವನ್ನು ಕೊಳ್ಳೆ ಹೊಡೆಯಲಿದೆ.  ಇದೀಗ ಈ ಚಿತ್ರಕ್ಕೆ  ದಕ್ಷಿಣ ಭಾರತದ ಹಿರಿಯ ನಟ ಜಗಪತಿ ಬಾಬು (Jagapathi Babu) ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ಜಗಪತಿ ಬಾಬು ಅವರೇ ಇದನ್ನು ಖಚಿತಪಡಿಸಿದ್ದಾರೆ. ಈ ಚಿತ್ರ ತಮಗೆ ಎಷ್ಟು ಚಾಲೆಂಜಿಂಗ್ ಎಂಬುದನ್ನು ಕೂಡ ಹೇಳಿದ್ದಾರೆ. ನಿರ್ದೇಶಕ ಸುಕುಮಾರ್ ಅವರ ದೊಡ್ಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದಾಗಿ ಜಗಪತಿ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
 
 ಸುಕುಮಾರ್ (Sukumaran) ಜೊತೆ ಕೆಲಸ ಮಾಡುವುದು ಯಾವಾಗಲೂ ರೋಮಾಂಚನಕಾರಿಯಾಗಿದೆ. ಏಕೆಂದರೆ ಮುಂದೆ ಏನಾಗಲಿದೆ ಎಂದು ನಿಮಗೆ ತಿಳಿದಿರುವುದಿಲ್ಲ. 'ಪುಷ್ಪ 2' ಒಂದು ಸವಾಲಾಗಿದೆ ಮತ್ತು ನಾನು ಸವಾಲುಗಳನ್ನು ಇಷ್ಟಪಡುತ್ತೇನೆ" ಎಂದು ಸುಕುಮಾರ್ ನನಗೆ ನೀಡಿದ್ದಾರೆ. ನಮ್ಮ ಹಿಂದಿನ ಚಿತ್ರಗಳಲ್ಲಿನ ಅತ್ಯುತ್ತಮ ಪಾತ್ರಗಳು ಮತ್ತು ನಾನು ಅವರೊಂದಿಗೆ ಯಾವಾಗ ಬೇಕಾದರೂ ಕೆಲಸ ಮಾಡಲು ಇಷ್ಟಪಡುತ್ತೇನೆ. ಪುಷ್ಪಾಗೆ ಸಂಬಂಧಿಸಿದಂತೆ, ನಾನು ಮೊದಲ ಭಾಗವನ್ನು ಇಷ್ಟಪಟ್ಟೆ ಎಂದಿದ್ದಾರೆ.

Oo Antava: ಪುಷ್ಪಾ-2ನಲ್ಲೂ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ನಟಿ ಹೇಳಿದ್ದೇನು?

ಇತ್ತೀಚೆಗಷ್ಟೇ ಬಿಡುಗಡೆಯಾದ ಸಲ್ಮಾನ್ ಖಾನ್ (Salman Khan) ಅಭಿನಯದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಜಗಪತಿ ಬಾಬು ವಿಲನ್ ನಾಗೇಶ್ವರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ತೆಲುಗಿನಲ್ಲಿ 'ರಾಮ ಬಾಣಂ', 'ಸಲಾರ್', 'ರುದ್ರಂಗಿ', 'SSMB28' ಮತ್ತು ಮಲಯಾಳಂನಲ್ಲಿ 'ವಾಯ್ಸ್ ಆಫ್ ಸತ್ಯಾನಂದನ್' ಅವರ ಮುಂಬರುವ ಚಿತ್ರಗಳು.

'ಪುಷ್ಪಾ 2: ದಿ ರೂಲ್' ಕುರಿತು ಹೇಳುವುದಾದರೆ,  ಈ ಚಿತ್ರದ ಶೂಟಿಂಗ್ ಪ್ರಸ್ತುತ ನಡೆಯುತ್ತಿದೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್ ಮತ್ತು ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಹಿಂದಿ ಹಕ್ಕುಗಳು ಸುಮಾರು 200 ಕೋಟಿ ರೂಪಾಯಿಗೆ ಮಾರಾಟವಾಗಿವೆ ಎಂಬ ಸುದ್ದಿ ಇತ್ತು. ಅದೇ ಹೊತ್ತಿಗೆ ಚಿತ್ರದ ಮ್ಯೂಸಿಕಲ್ ರೈಟ್ಸ್ (Musical rights) ಕೂಡ ಸುಮಾರು 75 ಕೋಟಿಗೆ ಮಾರಾಟವಾಗಿದೆ. ಪುಷ್ಪ 2 ಚಿತ್ರದ ನಿರ್ಮಾಪಕರು ಈ ಚಿತ್ರದಿಂದ ಸುಮಾರು 2000 ಕೋಟಿ ರೂಪಾಯಿ ಗಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಚಿತ್ರವು ಈ ಅಂಕಿ ಅಂಶವನ್ನು ತಲುಪಬಹುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

Pushpa 2: ಬಿಡುಗಡೆಗೂ ಮುನ್ನವೇ ಸಾವಿರ ಕೋಟಿ ರೂ. ಬಾಚಿದ ಚಿತ್ರ

Latest Videos
Follow Us:
Download App:
  • android
  • ios