ವಾಷಿಂಗ್ಟನ್(ಮೇ.30): ಅಮೆರಿಕನ್ ಸಂಗೀತಗಾರ ಮರಿಲಿನ್ ಮಾನ್ಸನ್‌ನ ಮಾಜಿ ಗೆಳತಿ ಆತನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಅತ್ಯಾಚಾರ ಮಾಡಿ, ದೈಹಿಕ ಹಲ್ಲೆ ನಡೆಸಿದ್ದಾನೆ. ಹಾಗೆಯೇ ಭೀಕರವಾದ, ಭಯನಾಕ ಸಿನಿಮಾ ನೋಡುವಂತೆ ಒತ್ತಾಯಿಸಿದ್ದು, ಆತ ತನ್ನ ಯುವ ಅಭಿಮಾನಿಯನ್ನು ಕೊಲೆ ಮಾಡಿದ್ದಂತೆ ಕಾಣುತ್ತದೆ ಎಂದು ಆಕೆ ದೋಷಿಸಿದ್ದಾಳೆ.

ಮಾನ್ಸನ್ ವಿರುದ್ಧ ಸಾಕಷ್ಟು ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ಆತನ ಗೆಳತಿ ಜೇನ್ ಡಾಯ್ ಕೂಡಾ ಈಗ ಆತನ ವಿರುದ್ಧ ಆರೋಪಿದ್ದಾಳೆ. 2011ರಲ್ಲಿ ನಾನು ಅವನ ಜೊತೆ ಡೇಟ್ ಮಾಡಲಾರಂಭಿಸಿದೆ. ಆರಂಭದಲ್ಲಿ ಸಂಬಂಧ ಚೆನ್ನಾಗಿದ್ದರೂ ನಂತರ ಅತ್ಯಂತ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ ಜೇನ್.

ದೈಹಿಕ ಸಂಪರ್ಕ ಬೆಳೆಸಿ ವಂಚನೆ : ನಟಿ ಕಂಗನಾ ಮಾಜಿ ಬಾಡಿಗಾರ್ಡ್‌ ಸೆರೆ

ಮಾನ್ಸನ್ ಗೆಳತಿಗೆ 1996ರಲ್ಲಿ ಚಿತ್ರೀಕರಿಸಲಾದ ವಿಡಿಯೋ ತೋರಿಸಿದ್ದ. ಅದರಲ್ಲಿ ಪೋರ್ನ್, ಗನ್, ಅವಮಾನಿಸುವಂತಹ ಅಂಶಗಳಿದ್ದವು. ಅದರಲ್ಲಿ ಆತ ಮಹಿಳಾ ಅಭಿಮಾನಿಯನ್ನು ಚೇರ್‌ಗೆ ಕಟ್ಟಿ ಹಾಕಿ ಬಾಂಡ್ ಸದಸ್ಯನ ಮೂತ್ರ ಕುಡಿಸಲು ಬಲವಂತ ಮಾಡುವುದರೊಂದಿಗೆ ಗನ್‌ ಹಿಡಿದು ಬೆದರಿಸುತ್ತಿದ್ದ ಎಂದು ಜೇನ್ ಹೇಳಿದ್ದಾರೆ.

ಕೀ ಮರಳಿಸಲು ಹೋದಾಗ ತನ್ನ ಮೇಲೆ ಆತ ಅತ್ಯಾಚಾರ ಮಾಡಿದ್ದಾಗಿಯೂ ಜೇನ್ ಆರೋಪಿಸಿದ್ದಾರೆ. ಇದೀಗ ಸಿಂಗರ್ ವಿರುದ್ಧ ಅರೆಸ್ಟ್ ವಾರೆಂಟ್ ರಿಲೀಸ್ ಆಗಿದೆ. ಈ ಬಗ್ಗೆ ಮಾನ್ಸನ್ ವಕ್ತಾರ ಮಾಡತನಾಡಿ, ಇದರ ಬಗ್ಗೆ ಆತ ಪ್ರತಿಕ್ರಿಯಿಸುವುದಿಲ್ಲ. ವಿಡಿಯೋ ಹಳೆಯದ್ದಾಗಿದ್ದು, ಅದು ಶಾರ್ಟ್ ಫಿಲ್ಮ್‌ಗಾಗಿ  ಚಿತ್ರೀಕರಿಸಲಾಗಿದೆ, ಆದರೆ ಯಾವುತ್ತೂ ಬಿಡುಗಡೆಯಾಗಿಲ್ಲ ಎಂದಿದ್ದಾರೆ.