ಮಂಡ್ಯ (ಮೇ.30): ಬಾಲಿವುಡ್‌ ನಟಿ ಕಂಗನಾ ರಣಾವತ್‌ ಬಾಡಿಗಾರ್ಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಡ್ಯದ ಕೆ.ಆರ್‌.ಪೇಟೆ ತಾಲೂಕು ಕಿಕ್ಕೇರಿ ಮೂಲದ ಕುಮಾರ್‌ ಹೆಗ್ಡೆ ಅವರನ್ನು ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶನಿವಾರ ಕಿಕ್ಕೇರಿಯಲ್ಲಿ ಬಂಧಿಸಿದ್ದಾರೆ. 

ಕುಮಾರ್‌ ಮುಂಬೈನಲ್ಲಿ ಹುಡುಗಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮುಂಬೈನ ಅಂದೇರಿ ಪೊಲೀಸ್‌ ಠಾಣೆಯಲ್ಲಿ ವಂಚಿತ ಯುವತಿ ದೂರು ದಾಖಲಿಸಿದ್ದಳು. ಇದು ಮುಂಬೈ ಸುದ್ದಿ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು.

ನಟಿ ಕಂಗನಾ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ..! ...

ಯುವತಿ ದೂರು ದಾಖಲಿಸಿರುವ ವಿಷಯ ತಿಳಿದ ಕುಮಾರ್‌ ಹೆಗ್ಡೆ ಮುಂಬೈನಿಂದ ತಲೆಮರೆಸಿಕೊಂಡು ಬಂದು ಕಳೆದೊಂದು ತಿಂಗಳಿಂದ ಹೆಗ್ಗಡಹಳ್ಳಿಯಲ್ಲಿ ನೆಲೆಸಿದ್ದನು. ಈ ಬಗ್ಗೆ ಮಾಹಿತಿ ಪಡೆದು ಆಗಮಿಸಿದ ಮುಂಬೈನ ಅಂಧೇರಿ ಪೋಲೀಸರು ಕಿಕ್ಕೇರಿ ಪೋಲೀಸರ ಸಹಕಾರದೊಂದಿಗೆ ಈತನನ್ನು ವಶಕ್ಕೆ ಪಡೆದಿದ್ದು ಮುಂಬೈಗೆ ಕರೆದೊಯ್ದಿದ್ದಾರೆ.