ಮಾಧವನ್ ವಯಸ್ಸು ರಿವರ್ಸ್ ಗೇರಲ್ಲಿ ಓಡ್ತಿದ್ಯಾ: 54ರಲ್ಲೂ ಚಿರತರುಣ ಈ ನಟ
ದಕ್ಷಿಣದ ಪ್ರತಿಭಾನ್ವಿತ ನಟ ಆರ್ ಮಾಧವನ್ ಅವರ ವಯಸ್ಸು ರಿವರ್ಸ್ ಗೇರ್‌ನಲ್ಲಿ ಓಡ್ತಾ ಇದ್ಯಾ? ಇದು ಅವರ ಅನೇಕ ಅಭಿಮಾನಿಗಳ ಪ್ರಶ್ನೆ.
ದಕ್ಷಿಣದ ಪ್ರತಿಭಾನ್ವಿತ ನಟ ಆರ್ ಮಾಧವನ್ ಅವರ ವಯಸ್ಸು ರಿವರ್ಸ್ ಗೇರ್‌ನಲ್ಲಿ ಓಡ್ತಾ ಇದ್ಯಾ? ಇದು ಅವರ ಅನೇಕ ಅಭಿಮಾನಿಗಳ ಪ್ರಶ್ನೆ. ಕೆಲ ದಿನಗಳ ಹಿಂದೆ ನಟ ಬಾಲಿವುಡ್ ಮಂದಿ ಆಯೋಜಿಸಿದ ದೀಪಾವಳಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅವರು ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದ್ದು, ಅನೇಕರು ಮಾಧವನ್ 54ರ ಹರೆಯದರಲೂ ಫೈನ್ ಓಲ್ಡ್ ವೈನ್‌ನಂತೆ ಯಂಗ್ ಆಗಿ ಕಾಣಿಸುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಪಾರಾಜಿ ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಅವರ ಫೋಟೋ ವೀಡಿಯೋಗಳು ವೈರಲ್ ಆಗಿದ್ದು, ಹೇಗೆ ಮಾಧವನ್ ಈ ವಯಸ್ಸಲ್ಲೂ ಇಷ್ಟು ಯಂಗ್ ಆಗಿ ಕಾಣಲು ಸಾಧ್ಯ ಎಂಬುದು ಹಲವರ ಕುತೂಹಲದ ಪ್ರಶ್ನೆ, ಮಾಧವನ್ ನೋಡಿದ ಪಪಾರಾಜಿಗಳು ಫೋಟೋ ವೀಡಿಯೋಗಾಗಿ ಮುಗಿಬಿದ್ದಿದ್ದು, ಇದನ್ನು ನೋಡಿದ ಮಾಧವನ್ ತಾವಾಗಿಯೇ ಬಂದು ಪಪಾರಾಜಿ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಕೆಲವರು ನಾವು ನಿಮ್ಮ ಸಿನಿಮಾವನ್ನು ನೋಡುತ್ತಾ ನೋಡುತ್ತಾ ಬೆಳೆದು ದೊಡ್ಡವರೆದೆವು, ನೀವು ಇನ್ನು ಹೀಗೆಯೇ ಯಂಗ್ ಆಗಿಯೇ ಇದ್ದಿರಿ ಎಂದು ಮಾಧವನ್ ಅವರಿಗೆ ಹೇಳಿದ್ದಾರೆ. ಅದಕ್ಕೆ ಮಾಧವನ್ ಅವರು ಏನು ನನ್ ಸಿನಿಮಾ ನೋಡ್ತಾ ದೊಡ್ಡವರಾಗಿದ್ದು, ಹಾಗಿದ್ರೆ ನಿಮ್ಮನ್ನ ನಿಮ್ಮ ಅಪ್ಪ ಅಪ್ಪ ಸಾಕಿದ್ದು ಅಲ್ವಾ ಎಂದು ತಮಾಷೆ ಮಾಡಿದ್ದಾರೆ.
ಜಿಮ್, ವರ್ಕ್‌ಔಟ್ ಇಲ್ಲದೇ ಮಾಧವನ್ 21 ದಿನಗಳಲ್ಲಿ ತೂಕ ಇಳಿಸಿಕೊಂಡದ್ದು ಹೇಗೆ? ನಟನಿಂದ ಟಿಪ್ಸ್
1970ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಬಿಹಾರದ ಜೇಮ್ಸೆಡ್‌ಪುರದಲ್ಲಿ ಜನಿಸಿದ ಆರ್ ಮಾಧವನ್ ಅವರಿಗೆ ಈಗ 54 ವರ್ಷ ವಯಸ್ಸು ಆದರೆ ಅವರ ಲುಕ್ ಮಾತ್ರ 20ರ ಹರೆಯದ ಹುಡುಗರನ್ನು ಮೀರಿಸುವಷ್ಟು ಸುಂದರವಾಗಿದ್ದಾರೆ. ಅತ್ಯುತ್ತಮ ಶಿಕ್ಷಣದ ಹೊರತಾಗಿಯೂ ಸಿನಿಮಾ ರಂಗದಲ್ಲಿ ನೆಲೆಕಂಡ ಕೆಲವೇ ಕೆಲವು ನಟರಲ್ಲಿ ಮಾಧವನ್ ಕೂಡ ಒಬ್ಬರು. ಐಐಟಿ ಮದ್ರಾಸ್‌ನ ಡಿಗ್ರಿ ಹೋಲ್ಡರ್ ಆಗಿರುವ ಮಾಧವನ್ ಅವರು ಮನೋರಂಜನ ಕ್ಷೇತ್ರ ಪ್ರವೇಶಿಸಿದ್ದು, ಹಿಂದಿ ಸಿರಿಯಲ್‌ಗಳ ಮೂಲಕ ಜೀ ಟಿವಿಯ ಬನೇಗಿ ಅಪ್ನಿ ಬಾತ್ ಮೂಲಕ ಸಿನಿ ರಂಗ ಪ್ರವೇಶಿಸಿದ ಮಾಧವನ್ ಅವರಿಗೆ ಬ್ರೇಕ್ ನೀಡಿದ್ದು, ಮಣಿರತ್ನಂ ಅವರ 1999ರಲ್ಲಿ ತೆರೆಕಂಡ 'ಅಲೈ ಪಾಯುತೇ' (Alai Payuthey) ಸಿನಿಮಾ. ಇದಾದ ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದು, ತನು ವೆಡ್ಸ್ ಮನು, ರನ್, ವಿಕ್ರಮ್ ವೇದಾ, ರಂಗ್ ದೇ ಬಸಂತಿ, ತ್ರಿ ಈಡಿಯಟ್ಸ್ , ಗುರು, ಮಾರ, ರೆಹೆನೆ ಹೈ ತೆರೆ ದಿಲ್ ಮೇ ಇವು ಮಾಧವನ್ ನಟನೆಯ ಕೆಲ ಜನಪ್ರಿಯ ಸಿನಿಮಾಗಳಾಗಿವೆ.
ಒತ್ತಡ ಹೆಚ್ಚಿದ್ಯಾ? ಹೈರಾಣಾಗಿದ್ದೀರಾ? ನಟ ಮಾಧವನ್ ಅನುಸರಿಸೋ ಒತ್ತಡ ನಿವಾರಣೆ ತಂತ್ರಗಳಿವು..
ಹೀಗಿ 90-2000 ದಶಕದಲ್ಲಿ ಸಿನಿ ಪ್ರಿಯರನ್ನು ಅತಿಯಾಗಿ ಸೆಳೆದ ಮಾಧವನ್ ಅವರು ಈಗಲೂ ಅದೇ ಸೌಂದರ್ಯವವನ್ನು ಕಾಪಾಡಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ವೀಡಿಯೋ ನೋಡಿದ ಅನೇಕರು, ಬ್ರೋ ಜಸ್ಟ್ ಕ್ಲೀನ್ ಶೇವ್ ಮಾಡಿ ತಮ್ಮ ವಯಸ್ಸನ್ನು 20 ವರ್ಷ ಕಡಿಮೆ ಮಾಡಿಕೊಂಡರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರಿದಂನಲ್ಲಿ ಹೇಗೆ ಕಾಣಿಸುತ್ತಾರೋ ಅದೇ ಮ್ಯಾಡಿ ಈಗಲೂ ಹಾಗೆಯೇ ಇದ್ದರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇದು ಹಳೆ ವೀಡಿಯೋ ಎಂದು ಭಾವಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು 2000ನೇ ಇಸವಿಗೆ ಹಿಂದಿರುಗಿದೆನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಾಧವನ್ ಅವರ ವಯಸ್ಸನ್ನು ಮೀರಿದ ಯೌವ್ವನ ನೋಡಿ ಅನೇಕರು ಫಿದಾ ಆಗಿರೋದಂತು ಸುಳ್ಳಲ್ಲ.