Asianet Suvarna News Asianet Suvarna News

ವಿಶ್ವ ಕಪ್​ ಫೈನಲ್​ನಲ್ಲಿ ಹೃದಯ ಗೆದ್ದ ಶಾರುಖ್​ ಖಾನ್​! ಆಶಾ ಭೋಸ್ಲೆ ಜತೆಗಿನ ವಿಡಿಯೋ ವೈರಲ್

ವಿಶ್ವ ಕಪ್​ ಫೈನಲ್​ನಲ್ಲಿ ಹೃದಯ ಗೆದ್ದ ಶಾರುಖ್​ ಖಾನ್​! ಆಶಾ ಭೋಸ್ಲೆ ಜತೆಗಿನ ವಿಡಿಯೋ ವೈರಲ್. ಆಗಿದ್ದೇನು? 
 

Harsh Goenka reacts to SRKs gesture of helping Asha Bhosle during the World Cup suc
Author
First Published Nov 20, 2023, 1:48 PM IST

ನಿನ್ನೆ ಗುಜರಾತಿನ ಅಹಮ್ಮದಾಬಾದ್​ ನರೇಂದ್ರ  ಮೋದಿ ಕ್ರಿಕೆಟ್​ ನಡೆದ ವಿಶ್ವ ಕಪ್​ ಫೈನಲ್​ನಲ್ಲಿ ಭಾರತ ಸೋತರೂ ಅಲ್ಲಿ ನೆರೆದಿದ್ದ ನಟ ಶಾರುಖ್​ ಖಾನ್​ ಮಾತ್ರ ಎಲ್ಲರ ಹೃದಯ ಗೆದ್ದಿದ್ದಾರೆ. ಹೌದು. ಈ ಬಾರಿಯ  ವಿಶ್ವಕಪ್‌ನ ಅಂತಿಮ ಪಂದ್ಯವನ್ನು ವೀಕ್ಷಿಸಲು ಸಿನಿಮಾ ಸೇರಿದಂತೆ ಹಲವು ಕ್ಷೇತ್ರದ ಸೆಲೆಬ್ರಿಟಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.  ನರೇಂದ್ರ ಮೋದಿ ಸ್ಟೇಡಿಯಂನ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಗಮನ ಸೆಳೆದಿರುವುದು ಶಾರುಖ್​ ಖಾನ್​ ಅವರು.  ಶಾರುಖ್ ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಅವರು ಆಶಾ ಭೋಂಸ್ಲೆ ಅವರೊಂದಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.  

ಆ ಸಂದರ್ಭದಲ್ಲಿ ಆಶಾ ಅವರ ಟೀ ಕುಡಿದಿದ್ದಾರೆ. ಅದರ ಕಪ್​ ತೆಗೆದುಕೊಂಡು ಹೋಗಿರಲಿಲ್ಲ. ಕೂಡಲೇ ಶಾರುಖ್​ ಅವರು ಆಶಾ ಅವರ ಟೀ ಕಪ್​ ಅನ್ನು ತೆಗೆದುಕೊಂಡು ಎಸೆಯಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಸಹಾಯಕನೊಬ್ಬ ಬಂದು ಆ ಕಪ್​ ತೆಗೆದುಕೊಂಡು ಹೋಗಿದ್ದಾರೆ. ಇದರ ವಿಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರೂ ಶಾರುಖ್​ ಅವರನ್ನು ಹಾಡಿ ಹೊಗಳುತ್ತಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್ ನಡೆಗಳ ಬಗ್ಗೆ ಕುತೂಹಲ ಮೂಡಿದೆ.

ಬರ್ತ್​ಡೇ ಕೇಕ್​ ಕಟ್ಟಿಂಗಾ? ಪೋರ್ನ್​ ವಿಡಿಯೋ ಶೂಟಾ? ಬಿಗ್​ಬಾಸ್ ಖ್ಯಾತಿಯ ಗಾಯಕಿ ನೇಹಾ ಸಕತ್​ ಟ್ರೋಲ್​!

ಹಾಗಾಗಿ ಅವರು ನಿಜವಾಗಿಯೂ ಹೀರೋ ಮತ್ತು ಒಳ್ಳೆಯ ಮನುಷ್ಯ ಕೂಡ ಎಂದು ಕಮೆಂಟ್​ ಮಾಡಲಾಗುತ್ತಿದೆ. ಅಂದಹಾಗೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶಾರುಖ್ ಖಾನ್ ತಮ್ಮ ಇಡೀ ಕುಟುಂಬದೊಂದಿಗೆ ಭಾಗವಹಿಸಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಿಂಗ್ ಖಾನ್ ಜೊತೆಗೆ ಅವರ ಪತ್ನಿ ಗೌರಿ ಖಾನ್, ಮುಲ್ಗಾ ಆರ್ಯನ್ ಖಾನ್ ಮತ್ತು ಲೇಕ್ ಸುಹಾನಾ ಖಾನ್ ಕೂಡ ಭಾಗವಹಿಸಿದ್ದರು. ಅಲ್ಲದೆ, ನಟರಾದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಮತ್ತು ಅಥಿಯಾ ಶೆಟ್ ಕೂಡ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಹೋಗಿದ್ದರು. 
 
ಇದಾಗಲೇ ಶಾರುಖ್​ ಅವರು ಮಹಿಳೆಯರ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ನಟಿಯರು ವೇದಿಕೆಯ ಮೇಲೆ ಎಡವಿ ಬೀಳುವ ಸಮಯದಲ್ಲಿ, ಅವರನ್ನು ಹಿಡಿದಿರುವುದು, ರಾಣಿ ಮುಖರ್ಜಿಯವರ ಸೆರಗು ಕಾಲಿಗೆ ಸಿಕ್ಕು ಅವರು ಬೀಳಬಹುದು ಎಂದು ಸೆರಗನ್ನು ಎತ್ತಿ ಹಿಡಿದಿದ್ದು, ಶಾರುಖ್​ ಬಗ್ಗೆ ಇದಾಗಲೇ ಫ್ಯಾನ್ಸ್​ ಸಕತ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಹರ್ಷ್​ ಗೋಯೆಂಕ್​ ಅವರು ಶಾರುಖ್​ ಅವರ ವಿಡಿಯೋ ಶೇರ್​ ಮಾಡಿದ್ದು, ತುಂಬಾ ಮೆಚ್ಚುಗೆ ಸೂಚಿಸಿದ್ದಾರೆ. 

ಕನ್ನಡದಿಂದ ತೆಲುಗು ಬಣ್ಣದ ಲೋಕಕ್ಕೆ ಹಾರಿದ ಸತ್ಯ ಸೀರಿಯಲ್​ ಅಮುಲ್​ ಬೇಬಿ!

Follow Us:
Download App:
  • android
  • ios