Asianet Suvarna News Asianet Suvarna News

ಬರ್ತ್​ಡೇ ಕೇಕ್​ ಕಟ್ಟಿಂಗಾ? ಪೋರ್ನ್​ ವಿಡಿಯೋ ಶೂಟಾ? ಬಿಗ್​ಬಾಸ್ ಖ್ಯಾತಿಯ ಗಾಯಕಿ ನೇಹಾ ಸಕತ್​ ಟ್ರೋಲ್​!

ಬಿಗ್​ಬಾಸ್ ಖ್ಯಾತಿಯ ಗಾಯಕಿ ನೇಹಾ  ಭಾಸಿನ್​ ಹುಟ್ಟುಹಬ್ಬ ಆಚರಿಸಿಕೊಂಡು ಶೇರ್​ ಮಾಡಿರುವ ಫೋಟೋಗಳು ಸಕತ್​ ಟ್ರೋಲ್​ಗೆ ಒಳಗಾಗಿದೆ. 
 

Bigg Boss fame Neha Bhasin shares birthday pictures faces massive backlash on social media suc
Author
First Published Nov 20, 2023, 12:31 PM IST

ಪ್ರಸಿದ್ಧ ಗಾಯಕಿ, ಬಾಲಿವುಡ್​ ತಾರೆ, ಬಿಗ್​ಬಾಸ್​​ ಸ್ಪರ್ಧಿ ನೇಹಾ ಭಾಸಿನ್ ಅವರು ತಮ್ಮ 41ನೇ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದು, ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಮೊನ್ನೆ ಅಂದರೆ ನವೆಂಬರ್​ 18ರಂದು ಈಕೆಗೆ 41 ವರ್ಷ ತುಂಬಿದೆ. ಈ ಸಮಯದಲ್ಲಿ ಕೇಕ್​ ಕತ್ತರಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ವಿಶೇಷ ರೀತಿಯಲ್ಲಿ ಕೇಕ್ ಕಟ್​ ಮಾಡಿದ್ದು, ಅದರ ಫೋಟೋಗಳು ವೈರಲ್​ ಆಗುತ್ತಿವೆ. ಇವು ಸಾಕಷ್ಟು ಟ್ರೋಲ್​​ಗೆ ಕಾರಣವಾಗುತ್ತಿದೆ.

 ಅಷ್ಟಕ್ಕೂ ಈ ಕೇಕ್​ ಕತ್ತರಿಸಿದ ರೀತಿ ತೀರಾ ಅಸಹ್ಯಕರವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸದಾ ಬೋಲ್ಡ್​ ದೃಶ್ಯಗಳಿಂದ ಕಿಚ್ಚು ಹೊತ್ತಿಸುತ್ತಿರುವ ನೇಹಾ ಅವರು, ಇದೀಗ ಹಲವರು ಅಶ್ಲೀಲ ಎಂದು ಅಭಿಪ್ರಾಯ ಪಡುವ ರೀತಿಯಲ್ಲಿ ಕೇಕ್​ ಕಟ್​ ಮಾಡಿದ್ದಾರೆ. ಇದೇನು ಹುಟ್ಟುಹಬ್ಬದ ಫೋಟೋಶೂಟಾ ಅಥವಾ ಪೋರ್ನ್​ ಫೋಟೋಶೂಟಾ ಎಂದು ಹಲವರು ಟ್ರೋಲ್​ ಮಾಡುತ್ತಿದ್ದಾರೆ. ತಮ್ಮ ಎರಡೂ ಕಾಲುಗಳನ್ನು ಅಗಲಿಸಿ ನಡುವೆ ಕೇಕ್​ ಇಟ್ಟುಕೊಂಡು ಕಟ್​ ಮಾಡಿರುವ ಗಾಯಕಿ, ಕಪ್ಪು ಬಟ್ಟೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದರೂ, ಈಕೆಯ ಈ ಬೋಲ್ಡ್​ ದೃಶ್ಯ ಹಲವರಿಗೆ ಸಹ್ಯ ಎನಿಸದ ರೀತಿಯಲ್ಲಿ ಇದೆ.

ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!
  
ಇದಾಗಲೇ ನೇಹಾ ಹಲವಾರು ಹಿಟ್​ ಹಾಡುಗಳನ್ನು ನೀಡಿದ್ದಾರೆ. ಹಲವಾರು ಮ್ಯೂಸಿಕ್​ ಆಲ್ಬಮ್​ಗಳನ್ನು ಮಾಡಿದ್ದಾರೆ. ಇವರ  ದಿನ್ ಶಗ್ನಾ ದಾ ಹಾಡಿನಿಂದ ಫೇಮಸ್​ ಆಗಿದ್ದಾರೆ. ನನಗೆ 41ನೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿಕೊಂಡಿರುವ ಈಕೆ ಕೆಲವು ಸೆಕ್ಸಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಆಕೆಯ ಈ ಚಿತ್ರಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಬಹಿರಂಗಪಡಿಸಿದ್ದಾರೆ. ಇದೇನು ಪೋರ್ನ್​ ವಿಡಿಯೋ ಶೂಟಾ ಕೇಳುತ್ತಿದ್ದಾರೆ ಟ್ರೋಲಿಗರು.  ನೀವು ತುಂಬಾ ಸುಂದರವಾದ ಮಹಿಳೆ .. ನೀವು ಆ ರೀತಿಯಲ್ಲಿ ಪೋಸ್ ನೀಡಬೇಕಾಗಿರುವ ಅಗತ್ಯವೇ ಇಲ್ಲ. ಆದರೂ ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಾ ಎಂದು ಪ್ರಶ್ನಿಸುತ್ತಿದ್ದಾರೆ.  ನಿಮ್ಮ ಹಾಡು ಸಕತ್​ ಇಷ್ಟವಾಗುತ್ತದೆ. ಹೀಗಿದ್ದ ಮೇಲೆ ಪ್ರಸಿದ್ಧರಾಗಲು ಏನಾದರೂ ಮಾಡಲು ನೀವು ಸಿದ್ಧರಿರುವುದು ಅತ್ಯಂತ ಖೇದಕರ ಎಂದು ಹಲವರು ಹೇಳುತ್ತಿದ್ದಾರೆ. ಸೆಕ್ಸಿ, ಹಾಟ್​ ಎಂದು ಕರೆಸಿಕೊಳ್ಳಲು ಈ ರೀತಿಯ ಅಶ್ಲೀಲ ಪೋಸ್​ಗಳೇ ಬೇಕಿತ್ತಾ ಎನ್ನುತ್ತಿದ್ದಾರೆ.

ಅಂದಹಾಗೆ ನೇಹಾ ಅವರು,  ಬಾಲಿವುಡ್‌ಗೆ ಕೆಲವು ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ - ಜಗ್ ಘೂಮೆಯಾ, ಮೀಥಿ ಮೀಥಿ ಚಶ್ನಿ, ಧುಂಕಿ ಲಾಗೆ, ದಿನ್ ಶಗ್ನಾ ದಾ ಮತ್ತು ಇನ್ನೂ ಅನೇಕ. ಬಿಗ್ ಬಾಸ್ ಒಟಿಟಿ ಮನೆಯೊಳಗೂ ಪ್ರವೇಶಿಸಿದ್ದ ಗಾಯಕಿ, ತಮ್ಮ ಫ್ಯಾಷನ್ ಸೆನ್ಸ್​ನಿಂದ ಗಮನ ಸೆಳೆದಿದ್ದರು.  

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

Follow Us:
Download App:
  • android
  • ios