Asianet Suvarna News Asianet Suvarna News

ನಯನತಾರಾ ಬಳಿಕ ಮದುವೆ ವಿಡಿಯೋ ಮಾರಿಕೊಂಡ ನಟಿ ಹನ್ಸಿಕಾ ಮೋಟ್ವಾನಿ

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಸೋಹೇಲ್ ಮದುವೆ ವಿಡಿಯೋವನ್ನು ಒಟಿಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Hansika Motwani and Sohail wedding to be live-streamed by an OTT platform sgk
Author
First Published Nov 13, 2022, 5:52 PM IST

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹನ್ಸಿಕಾ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಯಾವುದೇ ಹನ್ಸಿಕಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇತ್ತೀಚಿಗಷ್ಟೆ ಬಾವಿ ಪತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋವನ್ನು ಶೇರ್ ಮಾಡುವ ಮೂಲಕ ಮದುವೆ ವಿಚಾರವನ್ನು ಅಧಿಕೃತ ಗೊಳಿಸಿದ್ದರು. ಅಂದಹಾಗೆ ಕಾಲಿವುಡ್ ಸುಂದರಿ ಹನ್ಸಿಕಾ ಉದ್ಯಮಿ ಸೊಹೇಲ್ ಕಥರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಹನ್ಸಿಕಾ ಮದುವೆ ಬಗ್ಗೆ ಮತ್ತೊಂದು ಮಾತು ಕೇಳಿಬಂದಿದೆ. ಹನ್ಸಿಕಾ ಮತ್ತು ಸೊಹೇಲ್ ಮದುವೆ ವಿಡಿಯೋ ಹಕ್ಕನ್ನು ಒಟಿಟಿಗೆ ಮಾರಾಟ ಮಾಡಿದ್ದಾರಂತೆ. 

ಇತ್ತೀಚಿಗೆ ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ವಿಡಿಯೋಗಳನ್ನು ಒಟಿಟಿಗೆ ಮಾರಾಟ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ವಿಡಿಯೋವನ್ನು ಸಹ ಒಟಿಟಿಗೆ ಸೇಲ್ ಮಾಡಲಾಗಿತ್ತು. ಇನ್ನು ಸೌತ್ ನಲ್ಲಿ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ವಿಡಿಯೋವನ್ನು ಸಹ ಒಟಿಟಿ ನೀಡಲಾಗಿತ್ತು. ಇವರಿಬ್ಬರ ಮದುವೆ ವಿಡಿಯೋ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದ್ದರು. ಇದೀಗ ಹನ್ಸಿಕಾ ಕೂಡ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹನ್ಸಿಕಾ ದಂಪತಿ ಒಟಿಟಿ ಜೊತೆ ಮಾತನಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ  ಮಾಹಿತಿ ರಿವೀಲ್ ಆಗಿಲ್ಲ.  

ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿ ಬಾವಿ ಪತಿ ಪರಿಚಯಿಸಿದ ನಟಿ ಹನ್ಸಿಕಾ; ಮದುವೆ ಯಾವಾಗ?

 ಹನ್ಸಿಕಾ ಮತ್ತು ಸೋಹೇಲ್ ಮದುವೆ ಜೈಪುರದ 450 ವರ್ಷಗಳ ಹಿಂದಿನ ಮಂಟೋಡ ಕೋಟೆಯಲ್ಲಿ ನೆರವೇರಲಿದೆ. ಅಂದಹಾಗೆ ಇವರ ವಿವಾಹ ಮಹೋತ್ಸವ ಡಿಸೆಂಬರ್ 4ರಂದು ನಡೆಯಲಿದೆ ಎನ್ನಲಾಗಿದೆ. ಹನ್ಸಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 2 ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದ್ದು ಎರಡೂ ಕುಟುಂಬ ಜೈಪುರಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಡಿಸೆಂಬರ್ 3 ರಂದು ಮೆಹೆಂದಿ ಮತ್ತು ಸಂಗೀತ ಸಮಾರಂಭ ನಡೆಯಲಿದೆ. ಹಾಗಾಗಿ ನವೆಂಬರ್ ಕೊನೆಯ ವಾರದಲ್ಲಿ ಎರಡು ಕುಟುಂಬದವರು ಜೈಪುರಗೆ ಹಾರಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.  

ಮದುವೆಗೆ ಸಜ್ಜಾದ 'ಬಿಂದಾಸ್' ನಟಿ ಹನ್ಸಿಕಾ; ಹುಡುಗ ಯಾರು, ಯಾವಾಗ ವಿವಾಹ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚಿಗಷ್ಟೆ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ, 'ಈಗ ಮತ್ತು ಎಂದೆಂದಿಗೂ' ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಹನ್ಸಿಕಾ ಮತ್ತು ಸೊಹೇಲ್ ಇಬ್ಬರು ಪ್ಯಾರಿಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿತ್ತು. ಇದೀಗ ಮದುವೆ ತಯಾರಿಯಲ್ಲಿರುವ ಹನ್ಸಿಕಾ ತಮ್ಮ ಮದುವೆಯ ಸಂಪೂರ್ಣ ವಿವರವನ್ನು ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ. 

Follow Us:
Download App:
  • android
  • ios