ಪುಷ್ಪಾ 2 ಯಶಸ್ವಿನ ಬೆನ್ನಲ್ಲೇ ರಶ್ಮಿಕಾಗೆ ಬಂಪರ್, ಆ್ಯನಿಮಲ್ ಚಿತ್ರತಂಡದಿಂದ ಗುಡ್ ನ್ಯೂಸ್!

ಪುಷ್ಪಾ 2 ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣಗೆ ಆಫರ್‌ಗಳ ಸುರಿಮಳೆಯಾಗುತ್ತಿದೆ. ಇದೀಗ 2023ರ ಭಾರಿ ಯಶಸ್ಸಿನ ಚಿತ್ರ ಆ್ಯನಿಮಲ್ ಇದೀಗ ಇನ್ನೆರಡು ಪಾರ್ಟ್‌ಗಳಲ್ಲಿ ತೆರೆ ಕಾಣುತ್ತಿದೆ.

Good news for rashmika mandanna Fans Ranbir kapoor confirms Animal movie sequel ckm

ಮುಂಬೈ(ಡಿ.09) ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಪುಷ್ಪಾ2 ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ರಶ್ಮಿಕಾ ಮಂದಣ್ಣ ಅಭಿನಯಿಸಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗುತ್ತಿದೆ. 2023ರಲ್ಲಿ ಬಾಲಿವುಡ್‌ನಲ್ಲಿ ಆ್ಯನಿಮಲ್ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಇದೀಗ ಪುಷ್ಪಾ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ಆ್ಯನಿಮಲ್ ಚಿತ್ರದ ನಟ ರಣಬೀರ್ ಕಪೂರ್ ಗುಡ್ ನ್ಯೂಸ್ ನೀಡಿದ್ದಾರೆ. ಭಾರಿ ಯಶಸ್ಸು ಕಂಡ ಆ್ಯನಿಮಲ್ ಚಿತ್ರ ಇನ್ನು ಎರಡು ಪಾರ್ಟ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಆ್ಯನಿಮಲ್ 1 ಹಾಗೂ ಆ್ಯನಿಮಲ್ 2 ಪಾರ್ಟ್ ಬರುತ್ತಿದೆ. ವಿಶೇಷ ಅಂದರೆ ಈ ಎರಡೂ ಪಾರ್ಟ್‌ಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ.

ರೆಡ್ ಸಿ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಆಯೋಜಿಸಿದ ಡೆಡ್‌ಲೈನ್ ಆಫ್ ಸೈಡ್‌ಲೈನ್ ಮಾತುಕತೆ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್ ಈ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಆ್ಯನಿಮಲ್ ಚಿತ್ರ ಕೂಡ ಪಾರ್ಟ್ ಆಗಿ ಬಿಡುಗಡೆಯಾಗಲಿದೆ. ಆ್ಯನಿಮಲ್ ಇನ್ನು ಎರಡು ಪಾರ್ಟ್ ಬಿಡುಗಡೆಯಾಗಲಿದೆ. ಈ ಪೈಕಿ 2ನೇ ಪಾರ್ಟ್ ಹೆಸರು ಆ್ಯನಿಮಲ್ ಪಾರ್ಕ್ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ವಿಜಯ್ ಫ್ಯಾಮಿಲಿಗೆ ಶ್ರೀವಲ್ಲಿ ತೋರಿಸಿದ ರಶ್ಮಿಕಾ, ಗುಸುಗುಸು ಸುದ್ದಿಗೆ ಮತ್ತೊಂದು ಮುದ್ರೆ?

ಆ್ಯನಿಮಲ್ ಚಿತ್ರತಂಡ ಸದ್ಯ ಸ್ಕಿಪ್ರ್ಟ್ ಕಲಸದಲ್ಲಿ ತೊಡಗಿಕೊಂಡಿದೆ. 2027ರಲ್ಲಿ ಆ್ಯನಿಮಲ್ ಪಾರ್ಕ್ 2 ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಚಿತ್ರವನ್ನು ಒಟ್ಟು ಮೂರು ಪಾರ್ಟ್‌ಗಳಲ್ಲಿ ತೆರೆಗೆ ತರಲು ಬಯಸಿದ್ದರು. ಈ ಪೈಕಿ 1 ಪಾರ್ಟ್ ಬಿಡುಗಡೆಯಾಗಿದೆ. ಇನ್ನೆರಡು ಪಾರ್ಟ್ ಬಿಡುಗಡೆಯಾಗಲಿದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಆ್ಯನಿಮಲ್ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಇಷ್ಟೇ ಅಲ್ಲ ಈ ಜೋಡಿ ಅಭಿಮಾನಿಗಳ ಫೇವರಿಟ್ ಆಗಿ ಹೊರಹೊಮ್ಮಿತ್ತು. ಇದೀಗ ಇನ್ನೆರಡು ಆ್ಯನಿಮಲ್ ಪಾರ್ಟ್‌ಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗುವುದು ಬಹುತೇಕ ಖಚಿತ. ಭರ್ಜರಿ ಯಶಸ್ವಿ ಚಿತ್ರ ನೀಡುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ದಕ್ಷಿಣ ಹಾಗೂ ಬಾಲಿವುಡ್ ಚಿತ್ರರಂಗ ಯಶಸ್ವಿ ನಟಿಯಾಗಿ ಹೊರಹೊಮ್ಮಿದ್ದಾರೆ. 

2023ರಲ್ಲಿ ಬಾಲಿವುಡ್ ಆ್ಯನಿಮಲ್ ಚಿತ್ರ ತೆರೆಕಂಡಿತ್ತು. 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿತ್ತು. ಡಿಸೆಂಬರ್ 1 ರಂದು ಈ ಚಿತ್ರ ತೆರೆಕಂಡಿತ್ತು. ಸೊರಗಿದ್ದ ಬಾಲಿವುಡ್ ಚಿತ್ರರಂಗ ಭರ್ಜರಿ ಚಿತ್ರದ ಮೂಲಕ ಮತ್ತೆ ಪುಟಿದೆದ್ದಿತ್ತು. ಕಾರಣ ದಕ್ಷಿಣ ಭಾರತದ ಅಬ್ಬರದ ಚಿತ್ರಗಳ ಮುಂದೆ ಬಾಲಿವುಡ್ ಚಿತ್ರಗಳು ಮಕಾಡೆ ಮಲಗಿತ್ತು. ಮೇಲಿಂದ ಮೇಲೆ ಚಿತ್ರಗಳು ಸೋಲು ಕಂಡಿತ್ತು. ಇದೇ ವೇಳೆ ಆ್ಯನಿಮಲ್ ಬಾಲಿವುಡ್ ಆತ್ಮವಿಶ್ವಾಸ ಹೆಚ್ಚಿಸಿತ್ತು. ನೂರು ಕೋಟಿ ರೂಪಾಯಿ ಚಿತ್ರ ಸರಿಸುಮಾರು 917 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.  ಇದು ರಣಬೀರ್ ಕಪೂರ್ ಕರಿಯರ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. 

ರಶ್ಮಿಕಾ ಮಂದಣ್ಣ ಇದೀಗ ಪುಷ್ಪಾ 2 ಚಿತ್ರದ ಯಶಸ್ಸಿನಲ್ಲಿದ್ದಾರೆ. ಇದರ ಜೊತೆಗೆ ಇತರ ಕೆಲ ತೆಲುಗು ಸಿನಿಮಾ ಚಿತ್ರದ ಪಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. 
 

Latest Videos
Follow Us:
Download App:
  • android
  • ios